ತೋವಿವಿ ಘಟಿಕೋತ್ಸವದಲ್ಲಿ ಸ್ನಾತಕೋತ್ತರ ವಿಭಾಗದಲ್ಲಿ ನಾಲ್ಕು ಚಿನ್ನದ ಪಡೆದಕ ಧನ್ಯಶ್ರೀ ಎಸ್.ಜಿ.  
ನ್ಯೂಸ್

ಕಾಡಿನ ಹಣ್ಣು ನಾಡಿಗೆ ತರುವ ಆಸೆ ...!

ಬಾಗಲಕೋಟೆ: ಇಂದು ಆಹಾರದಲ್ಲಿ ಗುಣಮಟ್ಟವಿಲ್ಲದೇ ಆರೋಗ್ಯ ಹದಗೆಡುತ್ತಿದೆ. ಅನೇಕ ಪೋಷಕಾಂಶಯುಕ್ತ ಹಣ್ಣು, ತರಕಾರಿಗಳು ನಮ್ಮ ಕಾಡಿನಲ್ಲಿ ದೊರೆಯುತ್ತವೆ. ಅವುಗಳನ್ನು ಈಗಿನ ಜನ ಮರೆತು ಜಂಕ -ÀÅಡ್‌ಗಳಿಗೆ ಮಾರು ಹೋಗಿದ್ದಾರೆ. ಅವುಗಳನ್ನು ಮತ್ತೆ ನಾಡಿಗೆ ಪರಿಚಯಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು..!!

ಇಲ್ಲಿನ ತೋಟಗಾರಿಕಾ ವಿಜ್ಞಾನಗಳ ವಿಶ್ವ ವಿದ್ಯಾಲಯದ ಮಂಗಳವಾರ ಹಮ್ಮಿಕೊಂಡಿದ್ದ ೧೪ ನೇ ಘಟಿಕೋತ್ಸವದಲ್ಲಿ ಸ್ನಾತಕೋತ್ತರ ವಿಭಾಗದಲ್ಲಿ ಗರಿಷ್ಠ ೪ ಚಿನ್ನದ ಪದಕ ಪಡೆದ ಧನ್ಯಶ್ರೀ ಎಸ್.ಜಿ. ಭವಿಷ್ಯ ದಿನಗಳ ಬಗ್ಗೆ ಬಿಚ್ಚಿಟ್ಟರು. ಮೂಲತಃ ಕೊಡುಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನ ಈರಳೆ ವಳಮುಡಿ ಗ್ರಾಮದ ಧನ್ಯಶ್ರೀ ಅವರ ತಂದೆ ಗಣೇಶ ಎಸ್.ಯು ಕೃಷಿಕರಾಗಿದ್ದಾರೆ. ತಾಯಿ ಚಿಣ್ಣಮ್ಮ ಎಸ್.ಜಿ. ಗೃಹಿಣಿ. ಕುಟುಂಬದ ಏಕ ಮಾತ್ರ ಪ್ರೀತಿಯ ಪುತ್ರಿ.

ಕಾಡು, ನದಿ, ಪರಿಸರದ ನಡುವೇ ಬೆಳೆದ ಧನ್ಯಶ್ರೀ ಆಹಾರ ವಿಷಯದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ.

ನಿಸರ್ಗ ನಮಗೆ ಅಮೂಲ್ಯವಾದ ಸಂಪತ್ತು ನೀಡಿದೆ. ಅದರ ಸದುಯೋಗ ನಾವು ಮಾಡಿಕೊಳ್ಳಬೇಕು. ರಸಾಯನಿಕದಿಂದ ಬದುಕುತ್ತೇವೆ ಎನ್ನುವುದು ನಮ್ಮ ಭ್ರಮೆ. ಅಗತ್ಯಕ್ಕಿಂತ ಹೆಚ್ಚು ಬಳಕೆ ಮಾಡುವುದರಿಂದ ಹಾನಿಕಾರಕ. ಸಂಪ್ರದಾಯಿಕ ಕೃಷಿಯಿಂದ ನೆಮ್ಮದಿ, ಆರೋಗ್ಯ, ಸಮೃದ್ಧಿ ಪಡೆಯಲು ಸಾಧ್ಯವಿದೆ. ನಾವೆಲ್ಲ ಈ ಬಗ್ಗೆ ಚಿಂತನೆ ನಡೆಸಬೇಕಿದೆ ಎಂದು ಧನ್ಯಶ್ರೀ ವಿಜಯವಾಣಿ ಜೊತೆ ತಮ್ಮ ಅನಿಸಿಕೆ ಹಂಚಿಕೊAಡರು.