ಎನ್.ಆರ್.ಪುರ ತಾಲೂಕು ಕಡಹಿನಬೈಲು ಗ್ರಾಪಂ ಅರಸಿನಗೆರೆ ಜಯರಾಮ್‌ಗೌಡ ಅವರ ತೋಟಕ್ಕೆ ಕಾಡಾನೆ ನುಗ್ಗಿ ಹಾನಿಗೊಳಿಸಿರುವುದು. 
ನ್ಯೂಸ್

ಕಾಡಾನೆ ದಾಳಿಯಿಂದ ಬೆಳೆ ನಾಶ

ನ್.ಆರ್.ಪುರ: ತಾಲೂಕಿನ ಕಡಹಿನಬೈಲು ಗ್ರಾಪಂ ವ್ಯಾಪ್ತಿಯ ಅರಸಿನಗೆರೆಯ ರೈತ ಆರಂಬಳ್ಳಿ ಜಯರಾಮ್ ಗೌಡ ಎಂಬುವವರ ಅಡಕೆ ತೋಟ, ಭತ್ತ ನಾಟಿ ಮಾಡಿದ ಗದ್ದೆಗೆ ಬುಧವಾರ ತಡರಾತ್ರಿ ಕಾಡಾನೆ ನುಗ್ಗಿ ಹಾನಿ ಮಾಡಿದೆ.
ತೋಟದಲ್ಲಿದ್ದ ಬಾಳೆ ಗಿಡಗಳನ್ನು ಸಂಪೂರ್ಣ ನಾಶ ಮಾಡಿದೆ. ತೋಟದ ಸುತ್ತಲೂ ಐಬೆಕ್ಸ್ ತಂತಿ ಬೇಲಿ ಇದ್ದರೂ ಆನೆ ನುಗ್ಗಿ ಬೆಳೆ ನಾಶ ಮಾಡಿದೆ. ಭತ್ತ ನಾಟಿ ಮಾಡಿದ ಗದ್ದೆಗೆ ನುಗ್ಗಿ ಎಲ್ಲ ಸಸಿಗಳನ್ನು ಧ್ವಂಸ ಮಾಡಿದೆ. ಅಡಕೆ ಮರಗಳನ್ನೂ ಧರೆಗುಳಿಸಿದೆ. ಸ್ಥಳಕ್ಕೆ ವಲಯ ಅರಣ್ಯಾಧಿಕಾರಿ ಸಂತೋಷ್ ಸಾಗರ್, ವನಪಾಲಕ ಅರುಣ್ ಭೇಟಿ ನೀಡಿ ಪರಿಶೀಲಿಸಿ ನಷ್ಟದ ಅಂದಾಜು ದಾಖಲು ಮಾಡಿಕೊಂಡಿದ್ದಾರೆ. ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಕಡಹಿನಬೈಲು ಗ್ರಾಪಂ ಅಧ್ಯಕ್ಷೆ ಶೈಲಾಮಹೇಶ್ ಇದ್ದರು.