ನ್ಯೂಸ್

ಕಾಂಗ್ರೇಸ್‌ನಿAದ ಮುಸ್ಲೀಮರ ತುಷ್ಟೀಕರಣ / ಎಸ್ಸಿಪಿ,ಟಿಎಸ್‌ಪಿ ಹಣ ದುರ್ಬಳಕೆ / ಹಾಲು, ವಿದ್ಯುತ್, ಬಸ್‌ದರ ಏರಿಕೆ ಖಂಡಿಸಿ ಆಹೋರಾತ್ರಿ ಧರಣಿ / ಎಸ್.ಮುನಿಸ್ವಾಮಿ

ವಿಜಯವಾಣಿ ಸುದ್ದಿಜಾಲ ಕೋಲಾರ

ಕಾಂಗ್ರೇಸ್ ಸರ್ಕಾರದ ಭ್ರಷ್ಟಾಚಾರ, ಮುಸ್ಲೀಮರ ತುಷ್ಟೀಕರಣ, ಹಾಲು, ವಿದ್ಯುತ್, ಪ್ರಯಾಣ, ಮುದ್ರಾಂಕ ದರ ಏರಿಕೆ, ಪರಿಶಿಷ್ಟರ ಹಣ ದುರ್ಬಳಕೆ ಖಂಡಿಸಿ ಏ.೨ ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಆಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯಿಂದ ೧೫೦೦ ಕ್ಕೂ ಹೆಚ್ಚು ಕಾರ್ಯಕರ್ತರು ಧರಣಿಯಲ್ಲಿ ಭಾಗವಹಿಸಬೇಕೆಂದು ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ತಿಳಿಸಿದರು.

ಮಂಗಳವಾರ ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿಭಟನೆ ನೇತೃತ್ವವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್,ಛಲವಾದಿ ನಾರಾಯಣಸ್ವಾಮಿ ಮತ್ತಿತರ ಹಿರಿಯರ ನೇತ್ರತ್ವದಲ್ಲಿ ಈ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.

ಅಹಿAದ ಹೆಸರೇಳಿಕೊಂಡು ಅಧಿಕಾರಕ್ಕೆ ಬಂದ ಸಿಎಂ ಸಿದ್ದರಾಮಯ್ಯ ದಲಿತರ ಅಭಿವೃದ್ದಿಗೆ ಮೀಸಲಾಗಿದ್ದ ಎಸ್ಸಿಪಿ, ಟಿಎಸ್‌ಪಿಯ ೩೮ ಸಾವಿರ ಕೋಟಿ ರೂ ಅನುದಾನವನ್ನು ಗ್ಯಾರೆಂಟಿಗಳು ಹಾಗೂ ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ದುರ್ಬಳಕೆ ಮಾಡಿಕೊಂಡು ಹಿಂದುಳಿದವರು, ದಲಿತರನ್ನು ವಂಚಿಸಿದ್ದಾರೆ. ಅಧಿಕಾರದಲ್ಲಿರಲು ನೈತಿಕತೆ ಕಳೆದುಕೊಂಡಿರುವ ಮುಖ್ಯಮಂತ್ರಿ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ರೈತರ ಪರ ಎಂದಿರುವ ಕಾಂಗ್ರೇಸ್ ಸರ್ಕಾರದ ಸಿದ್ದರಾಮಯ್ಯ ಅವರು ಹಾಲು ಉತ್ಪಾದಕರಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ಸ್ಥಗಿತಗೊಳಿಸಿದ್ದಾರೆ. ೩ ಬಾರಿ ಹಾಲಿನ ದರವನ್ನು ಒಟ್ಟಾರೆಯಾಗಿ ೯ ರೂ ಏರಿಕೆ ಮಾಡಿದ್ದಾರೆ. ಇದರಲ್ಲಿ ಕನಿಷ್ಟ ಶೇ.೨೫ ರಷ್ಟಾದರೂ ರೈತರಿಗೆ ನೀಡಿದ್ದರೆ ಎಷ್ಟು ಸಂತೃಪ್ತರಾಗುತ್ತಿದ್ದರು ಎಂದರು.

ದೇವಾಲಯದ ಹುಂಡಿ ಬಿಡದಂತೆ ಇಡೀ ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ. ಅರ್ಚಕರಿಗೆ ಗೌರವ ಧನ ಏರಿಕೆ ಮಾಡದೆ ಮಸೀದಿ, ಮದರಸಗಳ ಮೌಲಿಗಳಿಗೆ ಗೌರವ ಧನ ಏರಿಕೆ ಮಾಡಿದ್ದಾರೆ. ದೇವಾಲಯಗಳ, ರೈತರ ಜಮೀನುಗಳನ್ನು ಕಬಳಿಸುವ ಸೂಪರ್ ಸಿಎಂ ಸಚಿವ ಜಮೀರ್ ಆಹಮದ್, ಮುಖ್ಯ ಮಂತ್ರಿ ರಾಜಕೀಯ ಸಲಹೆಗಾರ ನಸೀರ್ ಆಹಮದ್, ಮೈಸೂರಿನ ತನ್ವಿರ್ ಸೇಠ್ ಅವರುಗಳು ಸೇರಿಕೊಂಡು ಮುಖ್ಯ ಮಂತ್ರಿ ಸಿದ್ದರಾಮಯ್ಯನವರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸ್ಪೀಕರ್ ಖಾದರ್ ಪಾಕ್ ಏಜೆಂಟರೇ?

ರಾಜ್ಯ ಸರ್ಕಾರದ ಜನವಿರೋಧಿ ಸಂವಿಧಾನ ವಿರೋಧಿ ನೀತಿ ಖಂಡಿಸಿ, ಮುಸ್ಲೀಂರ ತುಷ್ಟೀಕರಣದ ಆದೇಶದ ಪ್ರತಿ ಹರಿದಿದ್ದಕ್ಕೆ ೧೮ ಶಾಸಕರನ್ನು ಸಭಾಧ್ಯಕ್ಷ ಖಾದರ್ ಅಮಾನತ್ ಮಾಡಿದ್ದಾರೆ, ಇವರೇನು ಪಾಕಿಸ್ತಾನ್ ಏಜೆಂಟರೇ ಎಂದು ಪ್ರಶ್ನಿಸಿದ ಅವರು ಹಿಂದೆ ಬಿಜೆಪಿ ಆಡಳಿತದಲ್ಲಿ ಸಭಾಪತಿಗಳನ್ನು ಇವರು ಹೇಗೆ ನಡೆಸಿಕೊಂಡಿದ್ದಾರೆ ಎಂದು ಇತಿಹಾಸ ನೋಡಲಿ ಎಂದರು.

ರAಜಾನ್ ಸಂದರ್ಭದಲ್ಲಿ ರಸ್ತೆಗಳ ಮೇಲೆ ನಮಾಜ್ ಮಾಡಬಾರದು ಎಂದು ನ್ಯಾಯಾಲಯದ ಸೂಚನೆ ಇದ್ದರೂ ನಿರ್ಲಕ್ಷಿಸಿ ರಸ್ತೆಗಳಲ್ಲಿ ನಮಾಜ್ ಮಾಡಿಸಿದ್ದಾರೆ. ಬೈಕ್‌ಗಳಲ್ಲಿ ಲಾಂಗ್ ಹಿಡಿದು ವಿಲಿಂಗ್ ಮಾಡುವುದು, ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರ ಮೇಲೆ ಹಲ್ಲೆ ಮಾಡುವುದು, ಕ್ರಿಕೆಟ್ ಬೆಟ್ಟಿಂಗ್ ಆಡಿಸುವುದು, ಲವ್ ಜಿಹಾದ್ ಮೂಲಕ ಸಮಾಜದಲ್ಲಿ ಆಶಾಂತಿಗೆ ಕಾರಣವಾಗುತ್ತಿರುವ ಘಟನೆಗಳು ನಡೆಯುತ್ತಿದೆ ಎಂದು ದೂರಿದರು.

ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಸಂವಿಧಾನವನ್ನು ಬದಲಾಯಿಸುವುದಾಗಿ ಹೇಳಿಕೆ ನೀಡಿರುವುದು ಖಂಡನೀಯ ಇವರು ಕೂಡಲೇ ರಾಜೀನಾಮೆ ನೀಡಬೇಕು. ೧.೬೦ ಲಕ್ಷ ಕೋಟಿ ಸಾಲದ ಹೊರೆ ರಾಜ್ಯದ ಮೇಲಿದೆ. ಈ ಸರ್ಕಾರ ಪಾಪದ ಸರ್ಕಾರ ಜನರ ರಕ್ತ ಹೀರುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಬೆಲೆ ಏರಿಸಿ ಜನರ ರಕ್ತ ಹೀರುವ ಸರ್ಕಾರ :

ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ದೇಶದಲ್ಲಿ ಕರ್ನಾಟವು ಅತ್ಯಂತ ದುಬಾರಿ ಜೀವನ ನಡೆಸುವಂತ ದುಸ್ಥಿತಿಯನ್ನು ನಿರ್ಮಾಣ ಮಾಡಲಾಗಿದೆ. ಗಾಳಿಯನ್ನು ಹೊರತುಪಡಿಸಿ ಉಳಿದೆಲ್ಲಾ ವಸ್ತುಗಳ ಬೆಲೆಗಳನ್ನು ಕಾಂಗ್ರೇಸ್ ಏರಿಕೆ ಮಾಡಿ ಜನರ ರಕ್ತ ಹೀರುತ್ತಿದ್ದು, ಈ ಸರ್ಕಾರಕ್ಕೆ ಜನರ ಶಾಪ ತಟ್ಟಲಿದೆ, ಅಸಮರ್ಥ ನಾಯಕ ಸಿದ್ದರಾಮಯ್ಯ ರಾಜ್ಯಕ್ಕೆ ಶಾಪವಾಗಿ ಕಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ವಕ್ತಾರ ಎಸ್.ಬಿ ಮುನಿವೆಂಕಟಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಬಿ.ವಿ ಮಹೇಶ್, ಅಪ್ಪಿರಾಜು, ನಗರಾಧ್ಯಕ್ಷ ಸಾ.ಮಾ ಅನಿಲ್ ಬಾಬು, ಒಬಿಸಿ ಮೋರ್ಚಾ ಅಧ್ಯಕ್ಷ ನಾಮಲ್ ಮಂಜು, ಜಿಲ್ಲಾ ಮಾಧ್ಯಮ ಪ್ರಮುಖ್ ಪ್ರವೀಣ್ ಗೌಡ, ಸಹ ಪ್ರಮುಖ್ ಕೆಂಬೋಡಿ ನಾರಾಯಣಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್ ಇದ್ದರು.

ಚಿತ್ರ ೦೧ ಕೆ.ಎಲ್.ಆರ್. ೦೨ : ಕೋಲಾರದಲ್ಲಿ ಮಾಜಿ ಸಂಸದ ಎಸ್.ಮುನಿಸ್ವಾಮಿ ಸುದ್ದಿಗೋಷ್ಟಿ ನಡೆಸಿ ಏ.೨ ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ದ ಅಹೋರಾತ್ರಿ ಧರಣಿ ನಡೆಸುತ್ತಿರುವ ಕುರಿತು ಮಾಹಿತಿ ನೀಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮತ್ತಿತರರಿದ್ದರು.