ನ್ಯೂಸ್

ಕಾಂಗ್ರೇಸ್‌ನಲ್ಲಿ ಮುಂದುವರೆದ ಬಣ ರಾಜಕೀಯ / ಕೋಮುಲ್ ಮತ್ತು ಡಿಸಿಸಿ ಬ್ಯಾಂಕ್ ಚುನಾವಣೆಯ ಮೇಲೆ ಜಾತಿ ಮತ್ತು ಸಮುದಾಯ ರಾಜಕಾರಣ / ಕಾಂಗ್ರೇಸ್‌ನಲ್ಲಿನ ಬಣರಾಜಕೀಯವೇ ಇದಕ್ಕೆ ಕಾರಣ!

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಜಿಲ್ಲೆಯಲ್ಲಿ ರೈತರ ಎರಡು ಕಣ್ಣುಗಳಂತಿರುವ ಸಹಕಾರ ಸಂಸ್ಥೆಗಳಾದ ಡಿಸಿಸಿ ಬ್ಯಾಂಕ್ ಮತ್ತು ಕೋಮುಲ್‌ಗೆ ನಿರ್ದೇಶಕರ ಚುನಾವಣೆ ಮುಗಿದಿದ್ದು, ಅಧ್ಯಕ್ಷರ ಚುನಾವಣೆ ನಡೆಯಬೇಕಾಗಿದ್ದು, ಎರಡೂ ಸಂಸ್ಥೆಗಳಲ್ಲಿ ಕಾಂಗ್ರೇಸ್ ಬೆಂಬಲಿತರೇ ಹೆಚ್ಚು ಸ್ಥಾನಗಳನ್ನು ಗಳಿಸಿರುವುದರಿಂದ ಕಾಂಗ್ರೇಸ್‌ನ ಬಣ ರಾಜಕೀಯ ಮತ್ತೆ ಮುಂದುವರೆದಿದ್ದು, ಇದರ ಜೊತೆಗೆ ಸಮುದಾಯ ರಾಜಕಾರಣವು ಚರ್ಚೆಯಾಗತೊಡಗಿದೆ.

ಡಿಸಿಸಿ ಬ್ಯಾಂಕ್‌ಗೆ ಚುನಾವಣೆ ನಡೆದು ಒಂದು ತಿಂಗಳಾದರೂ ನಾಲ್ಕು ಕ್ಷೇತ್ರಗಳ ಫಲಿತಾಂಶ ವಿಚಾರ ನ್ಯಾಯಾಲದಲ್ಲಿ ಇರುವ ಕಾರಣ ನ್ಯಾಯಾಲಯದಿಂದ ತೀರ್ಪು ಬರುವ ತನಕ ಕಾಯಬೇಕಾಗಿದೆ.

ಕೋಚಿಮುಲ್ ಚುನಾವಣೆಯು ಜೂ.೧೫ ರಂದು ಹೊರ ಬಿದ್ದಿದ್ದು, ೧೩ ಕ್ಷೇತ್ರಗಳ ಫಲಿತಾಂಶಗಳು ಪ್ರಕಟಗೊಂಡಿದೆ. ಇದರಲ್ಲಿ ಕಾಂಗ್ರೇಸ್ ಬೆಂಬಲಿತರು ೯ ಜನ ಆಯ್ಕೆ ಆಗಿದ್ದಾರೆ. ಕಾಂಗ್ರೇಸ್ ಘಟಬಂಧನ್ ಗುಂಪಿನಿAದ ೭ ಜನ, ಕೆ.ಹೆಚ್.ಮುನಿಯಪ್ಪ ಗುಂಪಿನಿAದ ಇಬ್ಬರು ಆಯ್ಕೆ ಆಗಿದ್ದಾರೆ.

ಘಟಬಂಧನ್‌ನಿAದ ಹೊರ ಹೋಗಿರುವ ಎಸ್.ಎನ್.ನಾರಾಯಣಸ್ವಾಮಿ ಕೆ.ಹೆಚ್.ಮುನಿಯಪ್ಪನವರ ಗುಂಪಿನಲ್ಲಿ ಗುರ್ತಿಸಿಕೊಂಡಿದ್ದಾರೆ. ಕೆ.ಹೆಚ್.ಮುನಿಯಪ್ಪ ಗುಂಪಿನಿAದ ಕೋಲಾರ ಉತ್ತರ ಕ್ಷೇತ್ರದಿಂದ ಮಹಾಲಕ್ಷಿö್ಮÃ ಪ್ರಸಾದ್ ಆಯ್ಕೆ ಆಗಿದ್ದು, ಇವರ ಬಲಾಬಲದ ಸಂಖ್ಯೆ ೨ ಆಗಿದೆ. ಘಟಬಂಧನ್ ಗುಂಪಿನಿAದ ಶಾಸಕ ನಂಜೇಗೌಡ ಸೇರಿದಂತೆ ೭ ಜನ ಆಯ್ಕೆ ಆಗಿರುವುದರಿಂದ ನಮ್ಮ ಸಂಖ್ಯೆಯೇ ಹೆಚ್ಚಾಗಿರುವ ಕಾರಣ ೩ನೇ ಬಾರಿಗೆ ನಿರ್ದೇಶಕನಾಗಿ ಆಯ್ಕೆ ಆಗಿ ೨ನೇ ಬಾರಿಗೆ ಅಧ್ಯಕ್ಷನಾಗಲು ಶಾಸಕ ನಂಜೇಗೌಡ ಮುಂದಾಗಿದ್ದು, ಇದಕ್ಕೆ ಘಟಬಂಧನ್‌ನಿAದ ಗೆದ್ದಿರುವ ೭ ನಿರ್ದೇಶಕರು ಸಾಥ್ ನೀಡಿದ್ದು, ಮಾಜಿ ಸ್ಪೀಕರ್ ರಮೇಶ್‌ಕುಮಾರ್ ನೇತೃತ್ವದಲ್ಲಿ ಶನಿವಾರ ಸಂಜೆ ಜಿಲ್ಲೆಯ ಘಟಬಂಧನ್ ಶಾಸಕರು ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಭೇಟಿ ಮಾಡಿ, ನಂಜೇಗೌಡರನ್ನು ೨ನೇ ಬಾರಿ ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ಒತ್ತಡವನ್ನು ತಂದಿದ್ದಾರೆ ಎನ್ನಲಾಗಿದೆ.

ಘಟಬಂಧನ್ ಗುಂಪಿನಿAದ ಎಸ್.ಎನ್.ನಾರಾಯಣಸ್ವಾಮಿಯು ಸಹ ಶುಕ್ರವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ಕೋಮುಲ್ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂಬ ಒತ್ತಾಯ ತಂದಿದ್ದಾರೆ ಎನ್ನಲಾಗಿದೆ.

ಸಮುದಾಯ ರಾಜಕಾರಣ :

ಈ ಮಧ್ಯೆ ಅಧ್ಯಕ್ಷರ ಸ್ಥಾನಕ್ಕೆ ಸಮುದಾಯ ರಾಜಕಾರಣ ತುಳುಕು ಹಾಕುತ್ತಿದ್ದು, ಎಸ್.ಸಿ.ಸಮುದಾಯಕ್ಕೆ ಕೋಮುಲ್ ಮತ್ತು ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಸ್ಥಾನವನ್ನು ನೀಡಬೇಕೆಂದು ಸಮುದಾಯ ಮುಖಂಡರು ಒತ್ತಾಯಗಳನ್ನು ತರುತ್ತಿದ್ದಾರೆ. ಎಸ್.ಸಿ. ಸಮುದಾಯಕ್ಕೆ ಸೇರಿದ ಎಸ್.ಎನ್.ನಾರಾಯಣಸ್ವಾಮಿಯವರನ್ನು ಕೋಮುಲ್ ಅಧ್ಯಕ್ಷರನ್ನಾಗಿ ಮಾಡಬೇಕು. ಕೆ.ಜಿ.ಎಫ್. ಶಾಸಕಿ ರೂಪಕಲಾ ರವರನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡಬೇಕೆಂದು ಎಸ್.ಸಿ. ಸಮುದಯದ ಮುಖಂಡರಿAದ ಒತ್ತಾಯಗಳು ಕೇಳಿಬರುತ್ತಿವೆ.

ಕಾಂಗ್ರೇಸ್‌ನಿAದಲೇ ಗುಂಪುಗಾರಿಕೆ :

ಸಹಕಾರ ಚುನಾವಣೆ ರಾಜಕೀಯೇತರವಾಗಿ ನಡೆಯಬೇಕು. ಆದರೆ ಇತ್ತೀಚಿಗೆ ರಾಜಕಾರಣಕ್ಕೆ ಅಂಟಿಕೊAಡಿತ್ತು. ಈಗ ಅಧ್ಯಕ್ಷರ ಸ್ಥಾನ ಸಮುದಾಯ ಮತ್ತು ಜಾತಿ ರಾಜಕಾರಣ ತುಳುಕು ಹಾಕುತ್ತಿದೆ ಎಂಬುದು ಸಾರ್ವಜನಿಕರಿಲ್ಲಿ ಚರ್ಚೆಯಾಗತೊಡಗಿದೆ. ಇದಕ್ಕೆ ಕಾರಣ ಕಾಂಗ್ರೇಸ್‌ನಲ್ಲಿನ ಗುಂಪುಗಾರಿಕೆ ಆಗಿದ್ದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ವಿಚಾರದಲ್ಲಿ ಎಡ ಬಲ ಎಂಬ ಚರ್ಚೆ ದೊಡ್ಡ ಮಟ್ಟದಲ್ಲಿ ನಡೆದು ಘಟಬಂಧನ್ ಗುಂಪಿನವರು ಬಲಗೈ ಸಮುದಾಯಕ್ಕೆ ನೀಡಬೇಕೆಂಬ ಒತ್ತಾಯ ಮಾಡಿತ್ತು. ಅದನ್ನೇ ಮುಂದಿಟ್ಟುಕೊAಡು ಈಗ ಘಟಬಂಧನ್ ವಿರುದ್ಧದ ಗುಂಪು ಕೋಮುಲ್ ಮತ್ತು ಡಿಸಿಸಿ ಬ್ಯಾಂಕಿಗೆ ಅಧ್ಯಕ್ಷರನ್ನು ಎಸ್.ಸಿ. ಸಮುದಾಯಕ್ಕೆ ನೀಡಬೇಕೆಂದು ಒತ್ತಡವನ್ನು ತರುವ ಕೆಲಸ ಮಾಡುತ್ತಿದ್ದಾರೆ.

ಹಾಲು ಮತ್ತು ಸಗಣಿ ಬಾಚದವರು ನಿರ್ದೇಶಕರು ಮತ್ತು ಅಧ್ಯಕ್ಷರಾಗಲು ಮುಂದು :

ಹಾಲು ಉತ್ಪಾದಕರು ರೈತರೇ ಆಗಿದ್ದು, ರೈರ‍್ಯಾರೂ ನಿರ್ದೇಶಕರು ಆಗಲು ಸಾಧ್ಯವಾಗಿಲ್ಲ. ರಿಯಲ್ ಎಸ್ಟೇಟ್ ಹಾಗೂ ರಾಜಕಾರಣದಲ್ಲಿ ಪಳಗಿರುವವರೇ ಶ್ರೀಮಂತರೇ ನಿರ್ದೇಶಕರಾಗಿ ಆಯ್ಕೆ ಆಗಿದ್ದು, ಇರ‍್ಯಾರ ಮನೆಗಳಲ್ಲಿಯೂ ಹಸು ಸಾಕಾಣಿಕೆ ಮಾಡಿ, ಹಾಲು ಕರೆದು ಸಗಣಿ ಎತ್ತಿದವರು ಇಲ್ಲ. ಆದರೆ ಹಾಲು ಉತ್ಪಾದನೆ ಮಾಡುವುದು ತಿಳಿಯದೇ ಇರುವವರೇ ಇಂದು ನಿರ್ದೇಶಕರಾಗಿದ್ದು, ಅಧ್ಯಕ್ಷರ ಆಯ್ಕೆ ಆಗಬೇಕೆಂದು ಲಾಭಿ ನಡೆಸುತ್ತಿದ್ದಾರೆ. ಶಾಸಕ ಕೆ.ವೈ.ನಂಜೇಗೌಡರ ಮನೆಯಲ್ಲಿ ಹಸು ಮತ್ತು ಎಮ್ಮೆಗಳಿವೆ. ಉಳಿದ ನಿರ್ದೇಶಕರ ಕೆಲವರ ಮನೆಯಲ್ಲಿ ಮಾತ್ರ ಜಾನುವಾರುಗಳು ಬಿಟ್ಟರೆ ಬಹುತೇಕ ನಿರ್ದೇಶಕರ ಮನೆಯಲ್ಲಿ ಜಾನುವಾರುಗಳೇ ಇಲ್ಲ.

ಕಾಂಗ್ರೇಸ್‌ನಲ್ಲಿ ತಣ್ಣಗಾಗದ ಭಿನ್ನಮತ :

ಜಿಲ್ಲೆಯಲ್ಲಿ ಕಾಂಗ್ರೇಸ್‌ನಲ್ಲಿ ಬಣಗಳನ್ನು ಸೃಷ್ಟಿ ಮಾಡಿ ಅದರ ಲಾಭವನ್ನು ಪಡೆದುಕೊಳ್ಳುವಂತಹ ಮಹಾನುಭಾವರು ಇರುವ ತನಕ ಜಿಲ್ಲೆಯಲ್ಲಿ ಕಾಂಗ್ರೇಸ್‌ನಲ್ಲಿ ಬಣರಾಜಕೀಯ ತಣ್ಣಗಾಗುವುದಿಲ್ಲ. ಜಿಲ್ಲೆಯಲ್ಲಿ ಕಾಂಗ್ರೇಸ್ ಬಲಿಷ್ಠವಾಗಿದ್ದರೂ ಎಲ್ಲರೂ ಒಟ್ಟಿಗೆ ಸೇರಿ ಕಾಂಗ್ರೇಸ್ ತೇರನ್ನು ಎಳೆಯಲು ಬಿಡುತ್ತಿಲ್ಲ. ಇದಕ್ಕೆ ಕೆಲವು ಕಾಂಗ್ರೇಸ್ ಮುಖಂಡರ ಒಣ ಪ್ರತಿಷ್ಟೆಗಳೇ ಕಾರಣವಾಗಿದ್ದು, ಕೆ.ಹೆಚ್.ಮುನಿಯಪ್ಪ ಮತ್ತು ರಮೇಶ್‌ಕುಮಾರ್ ರವರನ್ನು ಒಟ್ಟಿಗೆ ಮಾಡಲು ಬಿಡುತ್ತಿಲ್ಲ. ಆದ್ದರಿಂದ ಕಾಂಗ್ರೇಸ್‌ನಲ್ಲಿ ಗುಂಪುಗಾರಿಕೆ ದಿನೇ ದಿನೇ ಹೆಚ್ಚಾಗತೊಡಗಿದೆ ಎಂಬುದು ನಿಷ್ಠಾವಂತ ಕಾಂಗ್ರೇಸ್ ಕಾರ್ಯಕರ್ತರ ವಾದವಾಗಿದೆ. ಕೋಮುಲ್ ಚುನಾವಣೆಯಲ್ಲಿ ಸಮುದಾಯ ರಾಜಕಾರಣ ಅಸ್ತಕ್ಷೇಪ ಮಾಡುವುದು ಸರಿಯಲ್ಲ. ಇದರಿಂದ ಮತ್ತಷ್ಟು ಭಿನ್ನಮತ ಹೆಚ್ಚಾಗುವ ಸಾಧ್ಯತೆ ಇದೆ. ವರಿಷ್ಟರು ಸೂಕ್ತವಾದವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕು ಎಂದು ಒತ್ತಾಯಪಡಿಸಿದ್ದಾರೆ.

ಚಿತ್ರ ೨೯ ಕೆ.ಎಲ್.ಆರ್. ೦೧ : ಕೋಮುಲ್ ಕಛೇರಿ ಚಿತ್ರ

ಚಿತ್ರ ೨೯ ಕೆ.ಎಲ್.ಆರ್. ೦೧ಎ : ಶಾಸಕ ಎಸ್.ಎನ್.ನಾರಾಯಣಸ್ವಾಮಿ ರವರ ಭಾವಚಿತ್ರ

ಚಿತ್ರ ೨೯ ಕೆ.ಎಲ್.ಆರ್. ೦೧ಬಿ : ಶಾಸಕ ಕೆ.ವೈ.ನಂಜೇಗೌಡ ರವರ ಭಾವಚಿತ್ರ