ಕೆಪಿಸಿಸಿ ಸದಸ್ಯ ನಿತಿನ್‌ವೆಂಕಟೇಶ್ ಸಮ್ಮುಖದಲ್ಲಿ ಪಿರಿಯಾಪಟ್ಟಣ ತಾಲೂಕಿನ ದೊಡ್ಡಬೇಲಾಳು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷೆ ಸಯ್ಯದ್‌ಜವೇರಿಯ ಹಾಗೂ ಎಜೆ ಶಿವಣ್ಣ ಜೆಡಿಎಸ್ ತೊರೆದು ನಿತಿನ್‌ವೆಂಕಟೇಶ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು. 
ನ್ಯೂಸ್

ಕಾಂಗ್ರೆಸ್ ಸಿದ್ಧಾಂತ ಒಪ್ಪಿ ಬರುವವರಿಗೆ ಸ್ವಾಗತ

ರಾವಂದೂರು: ಕಾಂಗ್ರೆಸ್‌ನ ತತ್ವ ಮತ್ತು ಸಿದ್ಧಾಂತ ಮೆಚ್ಚಿ ಬರುವವರಿಗೆ ಪಕ್ಷವು ಸ್ವಾಗತ ಕೋರಲಿದೆ ಎಂದು ಕೆಪಿಸಿಸಿ ಸದಸ್ಯ ನಿತಿನ್ ವೆಂಕಟೇಶ್ ತಿಳಿಸಿದರು.

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡ ಪಿರಿಯಾಪಟ್ಟಣ ತಾಲೂಕಿನ ದೊಡ್ಡಬೇಲಾಳು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷೆ ಸಯ್ಯದ್ ಜವೇರಿಯ ಹಾಗೂ ಎಜೆ ಶಿವಣ್ಣ ಅವರನ್ನು ಬರಮಾಡಿಕೊಂಡು ಮಾತನಾಡಿದ ಅವರು, ಜೆಡಿಎಸ್‌ನ ವರ್ತನೆಯಿಂದ ಬೇಸತ್ತು ಕಾಂಗ್ರೆಸ್ ಸೇರ್ಪಡೆಯಾಗುತ್ತಿರುವುದು ಒಳ್ಳೆಯ ಬೆಳವಣಿಗೆ. ಯಾವುದೇ ಅಧಿಕಾರದ ಆಸೆ ಇಲ್ಲದೆ ಗ್ರಾಮದ ಅಭಿವೃದ್ಧಿಯ ಹಿತದೃಷ್ಟಿಯಿಂದ ಸೇರ್ಪಡೆಗೊಂಡಿದ್ದಾರೆ ಎಂದು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ, ಗ್ರಾ.ಪಂ ಸದಸ್ಯ ಸುರೇಶ್, ಮಾಜಿ ಅಧ್ಯಕ್ಷ ಮಹದೇವ್, ದೇವೇಂದ್ರ, ಅಜ್ಮತ್, ಸುಹೇಲ್, ಮತ್ತಿತರರು ಹಾಜರಿದ್ದರು.