ರಾವಂದೂರು: ಪಿರಿಯಾಪಟ್ಟಣ ತಾಲೂಕು ಹಂಡಿತವಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ 11 ನಿರ್ದೇಶಕರ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಇಬ್ಬರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರೆ, ಉಳಿದ 9 ಸ್ಥಾನಗಳಿಗೆ ಚುನಾವಣೆ ನಡೆದಿದೆ.
ಎಚ್.ಪಿ.ಜಗದೀಶ್, ಯೋಗಾನಂದ್, ಗೋವಿಂದರಾಜು, ಎಚ್.ಪಿ.ಗೋಪಾಲ್, ಬಸವಶೆಟ್ಟಿ, ಎಚ್.ಪಿ.ರೇಖಾ, ಸರೋಜಮ್ಮ, ರಾಜಮೂರ್ತಿ ಮತ್ತು ಕುಮಾರ್ ಆಯ್ಕೆಯಾದರೆ, ಅವಿರೋಧವಾಗಿ ಎಚ್.ಪಿ.ಗುರುಮೂರ್ತಿ ಹಾಗೂ ಕಾವೇರಮ್ಮ ಆಯ್ಕೆಯಾಗಿದ್ದಾರೆ ಎಂದು ಪಿರಿಯಾಪಟ್ಟಣ ಸಹಕಾರ ಇಲಾಖೆ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿ ಇತೀಂದ್ರ ತಿಳಿಸಿದ್ದಾರೆ.
ಸಂಘದ ಒಟ್ಟು 11 ನಿರ್ದೇಶಕರ ಸ್ಥಾನದಲ್ಲಿ 9 ಕಾಂಗ್ರೆಸ್ ಬೆಂಬಲಿತರೇ ಆಯ್ಕೆಯಾಗುವ ಮೂಲಕ ಹಾಲು ಉತ್ಪಾದಕರ ಸಹಕಾರ ಸಂಘದ ಅಧಿಕಾರ ಕಾಂಗ್ರೆಸ್ ಪಾಲಾಗಿದೆ. ಜೆಡಿಎಸ್ ಕೇವಲ 2 ಸ್ಥಾನಗಳನ್ನು ಗಳಿಸಲಷ್ಟೇ ಸಾಧ್ಯವಾಯಿತು.
ಈ ಸಂಧರ್ಭದಲ್ಲಿ ಗ್ರಾ.ಪಂ.ಸದಸ್ಯರಾದ ಜಗದೀಶ, ನೀಲ ಶ್ರೀನಿವಾಸ್, ಮಾಜಿ ಸದಸ್ಯ ಕುಮಾರ್, ರಮೇಶ್, ಗುರುಮೂರ್ತಿ, ವೆಂಕಟೇಶ್, ಅಣ್ಣಯ್ಯಶೆಟ್ಟಿ, ಅಂಗಡಿ ವೆಂಕಟೇಶ್, ಶಿವಣ್ಣಶೆಟ್ಟಿ, ರಮೇಶ್, ರಾಮಶೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜು, ರಾಮಚಂದ್ರಶೆಟ್ಟಿ, ಕಾರ್ಯದರ್ಶಿ ಎಚ್.ಪಿ.ಶಿವಮೂರ್ತಿ ಸೇರಿದಂತೆ ಇತರರಿದ್ದರು.