ತುರುವೇಕೆರೆ ಗುರುಭವನ ಆವರಣದಲ್ಲಿ ಮಂಗಳವಾರ ತಾಲೂಕು ಜೆಡಿಎಸ್ ಆಯೋಜಿಸಿದ್ದ ಅಲ್ಪಸಂಖ್ಯಾತ ಸಮಾವೇಶದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಅಂಜನಪ್ಪ, ತಾಲೂಕು ಅಧ್ಯಕ್ಷ ಸ್ವಾಮಿ, ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಸಂಶುಲ್ ಖಾನ್, ರಾಜ್ಯ ಮುಸ್ಲಿಂ ಮಹಿಳಾ ಅಧ್ಯಕ್ಷೆ ನಜ್ಮಾನಝೀರಿ ಇದ್ದರು. 
ನ್ಯೂಸ್

ಕಾಂಗ್ರೆಸ್ ಅಧಿಕಾರಕ್ಕೆ ಬರುವ ಗ್ಯಾರಂಟಿ ಇಲ್ಲ

ತುರುವೇಕೆರೆ: ಮುಸ್ಲಿಮರು ಜೆಡಿಎಸ್ ಜತೆ ಕೈಜೋಡಿಸಿದರೆ 2023ಕ್ಕೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ. ನಾನು ಉಪಮುಖ್ಯಮಂತ್ರಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಭವಿಷ್ಯ ನುಡಿದರು.

ಪಟ್ಟಣದ ಗುರುಭವನ ಆವರಣದಲ್ಲಿ ಮಂಗಳವಾರ ತಾಲೂಕು ಜೆಡಿಎಸ್ ಆಯೋಜಿಸಿದ್ದ ಅಲ್ಪಸಂಖ್ಯಾತ ಸಮಾವೇಶದಲ್ಲಿ ಮಾತನಾಡಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬರುವ ಬಗ್ಗೆ ರಾಜ್ಯದ ಜನರಿಗೆ ಗ್ಯಾರಂಟಿ ಇಲ್ಲ. ಆದರೂ 200 ಯೂನಿಟ್ ವಿದ್ಯುತ್, ಮಹಿಳೆಗೆ 2000 ರೂ.ಕೊಡುತ್ತೇವೆ ಎಂದು ಗ್ಯಾರಂಟಿ ಕಾರ್ಡ್ ನೀಡಲು ಹೊರಟಿದ್ದಾರೆ ಎಂದು ಲೇವಡಿ ಮಾಡಿದರು.

ಜೆಡಿಎಸ್ ಬಡವರು, ದೀನ ದಲಿತರ ಪಕ್ಷ. ಜೆಡಿಎಸ್ ಅಧಿಕಾರಕ್ಕೆ ಪಂಚರತ್ನ ಯಾತ್ರೆಯ ಯೋಜನೆಗಳನ್ನು ರೂಪಿಸಲಾಗುವುದು. ಬಿಜೆಪಿ ಸರ್ಕಾರ ರಾಜ್ಯವನ್ನು ಲೂಟಿ ಮಾಡಿ 5 ಲಕ್ಷ ಕೋಟಿ ರೂಪಾಯಿ ಸಾಲವನ್ನು ರಾಜ್ಯದ ಜನತೆಯ ಮೇಲೆ ಹೊರಿಸಿದೆ. ಬಿಜೆಪಿ ಉತ್ತಮ ಆಡಳಿತ ನೀಡಿದ್ದರೆ ಪ್ರಧಾನಿ ನರೇಂದ್ರ ಮೋದಿ ವಾರಕ್ಕೆ ಒಮ್ಮೆ ಬರಬೇಕಿರಲಿಲ್ಲ. ಅಚ್ಚೇದಿನ್ ಆಯೇಗಾ, ಗುಜರಾತ್ ಮಾಡಲ್‌ನಲ್ಲಿ ರಾಜ್ಯವನ್ನು ಅಭಿವೃದ್ಧಿ ಮಾಡುತ್ತೇವೆ ಎಂದಿದ್ದರು. ನಮ್ಮ ರಾಜ್ಯದಲ್ಲಿ ಪಾನಿ ಪೂರಿ, ಬೀಡವಾಲಾ ಮಾರುವರು ಗುಜರಾತಿಗಳೇ... ಅಲ್ಲಿ ಅಭಿವೃದ್ದಿ ಹೊಂದಿದ್ದರೆ ನಮ್ಮ ರಾಜ್ಯಕ್ಕೆ ಬರುತ್ತಿದ್ದರಾ ? ಎಂದು ಪ್ರಶ್ನಿಸಿದರು.

ಮುಖಂಡರಾದ ಜಪ್ರುಲ್ಲಾಖಾನ್, ನಯಾಜ್, ಶಾನ್, ಮೊಟ್ಟೆಬಾಬು, ಶಂಕರೇಗೌಡ, ಲೀಲಾವತಿ ಗಿಡ್ಡಯ್ಯ, ರಮೇಶ್, ಚಂದ್ರೇಶ್, ರಾಜೀವ ಇದ್ದರು.

ಜೈಲಿನಲ್ಲಿಯೂ ಇಲ್ಲ...ಬೇಲಿನಲ್ಲಿಯೂ ಇಲ್ಲ: ಜೆಡಿಎಸ್ ನಾಯಕರು ಜೈಲಿನಲ್ಲಿಯೂ ಇಲ್ಲ...ಬೇಲ್ ಮೇಲೆಯೂ ಇಲ್ಲ. ಮುಸ್ಲಿಮರಿಗೆ ಶೇ.4 ಮೀಸಲಾತಿ ನೀಡಿದ್ದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು. ಮುಸ್ಲಿಮರಿಗೆ ಕಾಂಗ್ರೆಸ್ ಏನೂ ಮಾಡಿಲ್ಲ, ರಾಜಕೀಯದಲ್ಲಿರುವ ದೇವೇಗೌಡರಿಗೆ ಸ್ವಂತ ಮನೆಯೂ ಇಲ್ಲ. ಬಿಜೆಪಿ, ಕಾಂಗ್ರೆಸ್‌ನ ಹಲವು ನಾಯಕರು ಲಕ್ಷಾಂತರ ರೂ.ಲೂಟಿ ಮಾಡಿ ಕೆಲವರು ಜೈಲಿನಲ್ಲಿ, ಕೆಲವರು ಬೇಲ್ ಮೇಲಿದ್ದಾರೆ ಎಂದು ಸಿ.ಎಂ.ಇಬ್ರಾಹಿಂ ವ್ಯಂಗ್ಯವಾಡಿದರು.

ಸಿ.ಎಂ.ಇಬ್ರಾಹಿಂ ಕಾಲ್ಗುಣ ಚೆನ್ನಾಗಿದೆ, 2008ರಲ್ಲಿ ನಮ್ಮ ಪರವಾಗಿ ಪ್ರಚಾರಕ್ಕೆ ಆಗಮಿಸಿದ್ದರು, ನಾನು ಶಾಸಕನಾಗಿದ್ದೆ. ಈ ಬಾರಿ ನಾನು ಶಾಸಕನಾಗಿ ಆಯ್ಕೆಯಾಗುವುದರಲ್ಲಿ ಸಂದೇಹವೇ ಇಲ್ಲ. ಈ ಕ್ಷೇತ್ರದಲ್ಲಿ 20 ವರ್ಷಗಳಾದರೂ ಕಾಂಗ್ರೆಸ್ ಗೆಲ್ಲಲ್ಲ ಎಂ.ಟಿ.ಕೃಷ್ಣಪ್ಪ ಮಾಜಿ ಶಾಸಕ