ಯಲ್ಲಾಪುರ: ಮಳೆಯಿಂದ ಹಾಳಾಗಿದ್ದ ಕಳಚೆಯ ಲಕ್ಷ್ಮೀ ನರಸಿಂಹ ದೇವಸ್ಥಾನದ ರಸ್ತೆಯನ್ನು ಗ್ರಾಮಸ್ಥರೇ ಶ್ರಮದಾನದ ಮೂಲಕ ದುರಸ್ತಿಪಡಿಸಿಕೊಂಡರು.
ಮಳೆಯಿಂದಾಗಿ ದೇವಾಲಯದ ರಸ್ತೆ ಹದಗೆಟ್ಟು, ವಾಹನಗಳ ಸಂಚಾರಕ್ಕೆ ತೊಂದರೆಯಾಗಿತ್ತು. ಇದನ್ನು ತಪ್ಪಿಸಲು ಗ್ರಾಮಸ್ಥರು ಸೇರಿ ಶ್ರಮದಾನದ ಮೂಲಕ ಮಣ್ಣು ಹಾಕಿ ರಸ್ತೆ ದುರಸ್ತಿಪಡಿಸಿದರು.
ಗ್ರಾಮಸ್ಥರಾದ ಪ್ರಮೋದ ಹೆಬ್ಬಾರ, ಶಿವಪ್ರಸಾದ ಭಟ್ಟ, ಸತೀಶ ಹೆಗಡೆ, ನಾರಾಯಣ ಗಾಂವ್ಕರ, ನರಸಿಂಹ ಹೆಗಡೆ, ನಾಗರಾಜ ಗಾಂವ್ಕರ, ಅನಂತ ಭಟ್ಟ, ಭಾಸ್ಕರ ಹೆಗಡೆ, ರವಿ ಹೆಬ್ಬಾರ, ಶ್ರೀಪಾದ ಶಂಬಡೆಮನೆ, ಬಾಲಚಂದ್ರ ಗಾಂವ್ಕರ, ದಾಮೋದರ ಗಾಂವ್ಕರ, ಭಾಗ್ಯಲಕ್ಷ್ಮೀ ಭಟ್ಟ ಇತರರು ಭಾಗವಹಿಸಿದ್ದರು.