ಸರಗೂರು: ತಾಲೂಕಿನ ಕಲ್ಲಂಬಾಳು ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಭಾಗ್ಯ ಗೋವಿಂದನಾಯಕ, ಉಪಾಧ್ಯಕ್ಷೆಯಾಗಿ ಇಂದ್ರಾಣಿ ಅಣ್ಣಯ್ಯಸ್ವಾಮಿ ಆಯ್ಕೆಯಾದರು.
ಗುರುವಾರ ಪಂಚಾಯಿತಿ ಆವರಣದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. 13 ಸದಸ್ಯರ ಬಲವಿರುವ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಹೇಶ್ 6 ಮತ ಪಡೆದರೆ, ಭಾಗ್ಯಾ 7 ಮತ ಪಡೆದು ಜಯಶೀಲರಾದರು. ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಭಾಗ್ಯಮ್ಮ 6 ಮತ ಪಡೆದರೆ, ಇಂದ್ರಾಣಿ ಏಳು ಮತ ಪಡೆದು ವಿಜಯಿಯಾದರು.
ಚುನಾವಣಾಧಿಕಾರಿ ಶ್ರೀಧರ್ ಕಾರ್ಯ ನಿರ್ವಹಿಸಿದರು. ಸದಸ್ಯರಾದ ರೇಖಾ, ಕೆ.ಎಂ.ಮಂಜುಳಾ, ಲಕ್ಷ್ಮೀ, ಮಹೇಶ್, ಶಿವಕುಮಾರ್, ಕಾಂಗ್ರೆಸ್ ಮುಖಂಡ ಶಂಭುಲಿಂಗನಾಯಕ, ಬಿಜೆಪಿ ಮುಖಂಡ ಸಿ.ಕೆ.ಗಿರೀಶ್, ಶಿವರಾಜು, ಮಹದೇವಪ್ಪ, ಕುಮಾರಸ್ವಾಮಿ, ಶಿವಕುಮಾರ್, ಪ್ರಕಾಶ್, ಬ್ರಹ್ಮಶ್, ನೀಲಕಂಠ, ಜಯಣ್ಣ, ರೇವಣ್ಣ ಇತರರಿದ್ದರು.