ನ್ಯೂಸ್

ಕಲಿತ ವಿದ್ಯೆ ಶಾಶ್ವತ ಸಂಪತ್ತು

ಅಥಣಿ ಗ್ರಾಮೀಣ: ಜೀವನದಲ್ಲಿ ಹಣ, ಆಸ್ತಿ, ಅಂತಸ್ತು ಗಳಿಸಿ ಎಷ್ಟೇ ದೊಡ್ಡ ವ್ಯಕ್ತಿಯಾದರೂ ಕೊನೆಯವರೆಗೆ ಇವ್ಯಾವೂ ಉಳಿಯುವುದಿಲ್ಲ. ಆದರೆ ಕಲಿತ ವಿದ್ಯೆ ಉಳಿಯಲಿದೆ ಎಂದು ನಿವೃತ್ತ ಶಿಕ್ಷಕ ಹಣಮಂತ ಪಾಟೀಲ ಹೇಳಿದರು.

ಅಥಣಿ ತಾಲೂಕಿನ ಅನಂತಪುರ ಗ್ರಾಮದಲ್ಲಿ ಸೋಮವಾರ ೧೯೯೭-೯೮ನೇ ಸಾಲಿನ ಏಳನೇ ತರಗತಿ ಹಾಗೂ ೨೦೦೦-೦೧ನೇ ಸಾಲಿನ ೧೦ನೇ ತರಗತಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಗುರಿ ಜತೆಗೆ ಗುರುವಿನ ಆಶೀರ್ವಾದ ಇದ್ದಾಗ ಉನ್ನತ ಸ್ಥಾನ ಗಳಿಸಿಕೊಳ್ಳಲು ಸಾಧ್ಯ ಎಂದರು.

ಶಿಕ್ಷಕ ಶ್ರೀಕಾಂತ ಮೇತ್ರಿ ಮಾತನಾಡಿದರು. ರಾಜು ಬಡಿಗೇರ, ಬಿ.ಆರ್. ವಾಲಿ, ಶೋಭಾ ದೇಶಿಂಗೆ, ಬಿ.ಎಲ್. ತುಪ್ಪದ ಮಾತನಾಡಿದರು. ಶಿಕ್ಷಕರನ್ನು ಮೆರವಣಿಗೆ ಮೂಲಕ ವೇದಿಕೆಗೆ ಬರಮಾಡಿಕೊಂಡು ಸತ್ಕರಿಸಿದರು. ಮುಖಂಡರಾದ ರುದ್ರಗೌಡ ಪಾಟೀಲ, ಸಂಗಪ್ಪ ಜಾಬಗೌಡರ, ಭೀಮಪ್ಪ ದೇಶಿಂಗೆ, ಶಿವಾನಂತ ಖೋತ, ಶಿವಾನಂದ ಪಾಟೀಲ, ಮಲ್ಲಪ್ಪ ಪಡಸಲಗಿ, ಗೆಳೆಯರಬಳಗದ ಅಧ್ಯಕ್ಷ ಶೇಖರ ತೇಲಿ, ಉಪಾಧ್ಯಕ್ಷೆ ಜಯಶ್ರೀ ಬಡಿಗೇರ, ನಿರ್ವತ್ತ ಸೈನಿಕ ಗಜÁನನ ದೇಶಿಂಗೆ ಪ್ರಕಾಶ ಪೂಜಾರಿ ಇತರರಿದ್ದರು.