ಕಲಬುರಗಿ: ಕಲಬುರಗಿ ಕಂಪು ಬಳಿಕ ಮತ್ತೊಂದು ಐತಿಹಾಸಿಕ ಕಾರ್ಯಕ್ರಮಕ್ಕೆ ಮಹಾನಗರ ಸಾಕ್ಷಿಯಾಗಲಿದ್ದು, 2025ರ ಜನವರಿ 29ರಿಂದ ಫೆಬ್ರವರಿ 6ರವರೆಗೆ 7ನೇ ಭಾರತೀಯ ಸಂಸ್ಕೃತಿ ಉತ್ಸವ ಹಮ್ಮಿಕೊಳ್ಳಲಾಗುವುದು ಎಂದು ಭಾರತ ವಿಕಾಸ ಸಂಗಮದ ಸಂಸ್ಥಾಪಕ ಕೆ.ಎನ್. ಗೋವಿಂದಾಚಾರ್ಯ ತಿಳಿಸಿದರು.
ಭಾರತ ವಿಕಾಸ ಸಂಗಮ, ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಹಾಗೂ ಕಲಬುರಗಿ ವಿಕಾಸ ಅಕಾಡೆಮಿ ಸಹಯೋಗದಡಿ 2004ರಿಂದ ಮೂರು ವರ್ಷಕ್ಕೊಮ್ಮೆ ಸಂಸ್ಕೃತಿ ಉತ್ಸವ ನಡೆಸಲಾಗುತ್ತಿದ್ದು, ಈ ಸಲ ಕಲಬುರಗಿಯಲ್ಲಿ ಆಯೋಜಿಸುವುದಾಗಿ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಲ್ಯಾಣ ಕನರ್ಾಟಕದ ಸಮಗ್ರ ವಿಕಾಸಕ್ಕಾಗಿ ಸಕರ್ಾರಿ ಮತ್ತು ಸಕರ್ಾರೇತರ ಯೋಜನೆಗಳು, ಶಿಕ್ಷಣ, ಕೃಷಿ, ಗ್ರಾಮ-ನಗರ- ಪಟ್ಟಣಗಳಲ್ಲಿನ ಆಥರ್ಿಕ ಸ್ಥಿತಿ ಹಾಗೂ ಹಿಂದುಳಿದ ವರ್ಗಗಳ ಸುಸ್ಥಿರ ಅಭಿವೃದ್ಧಿ, ಸ್ವ ಉದ್ಯೋಗ ಮತ್ತು ಉದ್ಯೋಗಶೀಲತೆ, ಮಹಿಳೆ, ಮಕ್ಕಳು ಮತ್ತು ಸಂಸ್ಕೃತಿ, ಆರೋಗ್ಯ, ಯುವಶಕ್ತಿ ಮತ್ತು ಅದರ ಸದ್ಬಳಕೆ, ಆಪ್ತ ಸಮಾಲೋಚನೆ, ಜನಪರ ಸಕರ್ಾರಿ ಯೋಜನೆಗಳ ಪರಿಚಯ ಹೀಗೆ 10 ಪ್ರಮುಖ ಅಂಶಗಳು ಉತ್ಸವದ ಮುಖ್ಯ ಉದ್ದೇಶಗಳಾಗಿವೆ ಎಂದರು.
ಭಾರತ ವಿಕಾಸ ಸಂಗಮ ಸಹ ಸಂಚಾಲಕ ಮಾಧವ ರಡ್ಡಿ, ವಿಕಾಸ ಅಕಾಡೆಮಿ ವಿಶ್ವಸ್ಥ ವಿ.ಶಾಂತರಡ್ಡಿ, ಚಂದ್ರಶೇಖರ ಢವಳಗಿ ಇತರರಿದ್ದರು. ಬಳಿಕ ಸಂಜೆ ನಡೆದ ಸಮಾರಂಭದಲ್ಲಿ ಐವಾನ್-ಎ-ಶಾಹಿ ಪ್ರದೇಶದಲ್ಲಿ ಕೊತ್ತಲ ಬಸವೇಶ್ವರ ಶಿಕ್ಷಣ ಸಮಿತಿ ಸ್ವರ್ಣ ಜಯಂತಿ ಕಾಯರ್ಾಲಯ ಉದ್ಘಾಟಿಸಿದರು. ಮಾಜಿ ಸಂಸದ ಬಸವರಾಜ ಪಾಟೀಲ್ ಸೇಡಂ ಇತರರಿದ್ದರು.
ಮಾತುಕತೆ ಮೂಲಕ ಪರಿಹಾರ ಹುಡುಕಲಿ
ಕೃಷಿ ಮಸೂದೆಗಳ ವಿರುದ್ಧ ಸಿಡಿದೆದ್ದಿರುವ ರೈತರು ಕೇಂದ್ರ ಸಕರ್ಾರದ ವಿರುದ್ಧ ಹೋರಾಟ ನಡೆಸುತ್ತಿದ್ದು, ರೈತರ ಒಳಿತಿಗಾಗಿ ಕಾಯ್ದೆಗಳ ತಿದ್ದುಪಡಿ ಮಾಡಲಾಗಿದೆ ಎಂಬುದಾದರೆ ರೈತರು ಯಾಕೆ ವಿರೋಧಿಸುತ್ತಿದ್ದಾರೆ ಎಂಬುದನ್ನು ಅರಿತುಕೊಳ್ಳಲು ಸಕರ್ಾರ ಪ್ರಯತ್ನಿಸಬೇಕು. ರೈತರಲ್ಲಿ ವಿಶ್ವಾಸ ಮೂಡಿಸುವಂಥ ಕೆಲಸ ಮಾಡಬೇಕು. ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ಕೆ.ಎನ್. ಗೋವಿಂದಾಚಾರ್ಯ ಸಲಹೆ ನೀಡಿದರು. ಮಾನವ ಕೇಂದ್ರಿತ ವಿಕಾಸಕ್ಕಿಂತ ಪ್ರಕೃತಿ ಕೇಂದ್ರಿತ ವಿಕಾಸ ದೊಡ್ಡ ವಿಷಯ. ಅಭಿವೃದ್ಧಿ ನೆಪದಲ್ಲಿ ಶೇ.50 ಜೈವಿಕ ಸಂಪತ್ತು ನಾಶ ಮಾಡಿದ್ದೇವೆ. ಇದನ್ನು ಅರಿತು ಮುನ್ನಡೆಯಬೇಕಿದೆ. ಸಮರ್ಥ ಆಡಳಿತ ಅಥವಾ ಅಧಿಕಾರ ನಿರ್ವಹಣೆ ಮೂಲಕ ರೈತರ ಸಮಸ್ಯೆ ನೀಗಿಸುವ ಮುನ್ನ, ಅವರ ಕೋರಿಕೆಗೆ ಕಾರಣಗಳೇನು ಎಂಬುದನ್ನು ಅರಿಯಬೇಕು. ಸಕರ್ಾರದ ನಿಧರ್ಾರವೇ ಸರಿಯಾಗಿದ್ದರೆ ರೈತರಲ್ಲಿ ನಂಬಿಕೆ ಮೂಡಿಸಬೇಕು ಎಂದು ಸಲಹೆ ನೀಡಿದರು.