ನ್ಯೂಸ್

ಕಲಬುರಗಿ ಕೇಂದ್ರೀಯ ವಿವಿ ಕರೋನಾ ಹಾಟ್ ಸ್ಫಾಟ್

ಕಲಬುರಗಿ: ಆಳಂದ ತಾಲೂಕಿನ ಕಡಗಂಚಿಯಲ್ಲಿ ಇರುವ ಕರ್ನಾಟಕ ಕೇಂದ್ರಿಯ ವಿವಿಯಲ್ಲಿ ದಿನೇ ದಿನೆ ಕರೋನಾ ಪ್ರಕರಣಗಳು ಹೆಚ್ಚುತ್ತಿದ್ದು, ಮಂಗಳವಾರ ಮತ್ತೆ 13 ವಿದ್ಯಾರ್ಥಿಗಳು, ನಾಲ್ವರು ಸಿಬ್ಬಂದಿಗೆ ಕರೊನಾ ಕಾಣಿಸಿಕೊಂಡಿದೆ.

ಇದುವರೆಗೆ ಕೇಂದ್ರೀಯ ವಿಶ್ವ ವಿದ್ಯಾಲಯದಲ್ಲಿ ಒಟ್ಟು 45 ಜನರಿಗೆ ವಕ್ಕರಿಸಿದ ಕರೊನಾ ಸೊಂಕು. ಪಾಸಿಟಿವ್ ಬಂದ ಬಹುತೇಕ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಲ್ಲೆ ಐಸೋಲೇಷನ್ ಮಾಡಲಾಗಿದೆ.

ಮೂರು ಜನ ವಿದ್ಯಾರ್ಥಿಗಳಿಗೆ ಕಲಬುರಗಿಯ ಜಿಮ್ಸ್ ನಲ್ಲಿ ಚಿಕಿತ್ಸೆ ನೀಡವಾಗುತ್ತಿದೆ. ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಇಲ್ಲಿ ಅಧ್ಯಯನ ಮಾಡುತ್ತಿದ್ದಾರೆ.