ನ್ಯೂಸ್

ಕರ್ನಾಟಕ ಸಾರಿಗೆ ವಾಹನ ಮಾದರಿಯ ಪ್ಯಾಕೇಜ್ ಟೂರ್ಸ್ ಗಳ ವಿವರ

 ದಸರಾ ಮಹೋತ್ಸವ-2025 ರಲ್ಲಿ ಕ.ರಾ.ರ.ಸಾ.ನಿಗಮದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ಸಹ ಪ್ರವಾಸಿಗರ ಅನೂಕೂಲಕ್ಕಾಗಿ ಮೈಸೂರಿನ ಸುತ್ತಮುತ್ತಲಿನ ಪ್ರೇಕ್ಷಣಿಯ ಸ್ಥಳಗಳನ್ನು ವೀಕ್ಷಿಸಲು ಪ್ಯಾಕೇಜ್ ಟೂರ್‌ಗಳ ವ್ಯವಸ್ಥೆಯನ್ನು ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 07 ರವರೆಗೆ ಕಲ್ಪಿಸಲಾಗಿದೆ.

 ಟೂರ್ಸ್ ಗಳ ವಿವರ: ಗಿರಿ ದರ್ಶಿನಿ ಪ್ಯಾಕೇಜ್ ಟೂರ್ ನೋಡುವ ಸ್ಥಳಗಳು ಬಂಡೀಪುರ, ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ನಂಜನಗೂಡು, ಚಾಮುಂಡಿ ಬೆಟ್ಟ ನಿರ್ಗಮನ ಬೆಳಗ್ಗೆ 6.30 ಗಂಟೆಗೆ 325 ಕಿ.ಮೀ, ಪ್ರಮಾಣದರ ದೊಡ್ಡವರಿಗೆ ರೂ.450/-, ಮಕ್ಕಳಿಗೆ ರೂ.300/- ನಿರ್ಗಮದ ಸ್ಥಳ ಮೈಸೂರು ಕೇಂದ್ರಿಯ ಬಸ್ ನಿಲ್ದಾಣ.

 ಜಲ ದರ್ಶಿನ ಪ್ಯಾಕೇಜ್ ಟೂರ್ ನೋಡುವ ಸ್ಥಳಗಳು ಗೋಲ್ಡನ್ ಟೆಂಪಲ್. ದುಬಾರೆ ಅರಣ್ಯ, ನಿಸರ್ಗಧಾಮ, ಅಭಿಜಲಪಾತ, ರಾಜಸೀಟ್, ಹಾರಂಗಿ ಜಲಾಶಯ, ಕೆ.ಆರ್.ಎಸ್ ನಿರ್ಗಮನ ಬೆಳಗ್ಗೆ 6.30 ಗಂಟೆಗೆ 350 ಕಿ.ಮೀ, ದೊಡ್ಡವರಿಗೆ ರೂ.500/-, ಮಕ್ಕಳಿಗೆ ರೂ.350/- ನಿರ್ಗಮದ ಸ್ಥಳ ಮೈಸೂರು ಕೇಂದ್ರಿಯ ಬಸ್ ನಿಲ್ದಾಣ.

 ದೇವ ದರ್ಶಿನಿ ಪ್ಯಾಕೇಜ್ ಟೂರ್ ನೋಡುವ ಸ್ಥಳಗಳು ನಂಜನಗೂಡು, ತಲಕಾಡು, ಬ್ಲಫ್, ಮೂಡುಕುತೊರೆ, ಸೋಮನಾಥಪುರ, ಶ್ರೀರಂಗಪಟ್ಟಣ, ಕೆ.ಆರ್.ಎಸ್ ನಿರ್ಗಮನ ಬೆಳಗ್ಗೆ 6.30 ಗಂಟೆಗೆ 250 ಕಿ.ಮೀ, ದೊಡ್ಡವರಿಗೆ ರೂ. 330/-, ಮಕ್ಕಳಿಗೆ ರೂ.225/- ನಿರ್ಗಮದ ಸ್ಥಳ ಮೈಸೂರು ಕೇಂದ್ರಿಯ ಬಸ್ ನಿಲ್ದಾಣ.

 ಟರ‍್ಸ ಪ್ಯಾಕೇಜ್‌ಗಳಿಗೆ ಪ್ರವಾಸಿಗರಿಗೆ ಮುಂಗಡ ಆಸನ ಕಾಯ್ದಿರಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ನಿಗಮದ ಮೈಸೂರು ಕೇಂದ್ರಿಯ ಬಸ್ ನಿಲ್ದಾಣ ಮತ್ತು ಕೆ.ಎಸ್.ಆರ್.ಟಿ.ಸಿ ಖಾಸಗಿ ಅವತಾರ್ ಬುಕ್ಕಿಂಗ್ ಕೌಂಟರ್ ಹಾಗೂ ಆನ್‌ಲೈನ್ ksrtc.karnataka.gov.in ಮೂಲಕ ಬುಕ್ಕಿಂಗ್ ಮಾಡಿಕೊಳ್ಳಬಹುದು ಎಂದು ಮೈಸೂರು ಗ್ರಾಮ ವಿಭಾಗ ಕ.ರಾ.ರ.ಸಾ.ನಿಗಮ ವಿಭಾಗೀಯ ನಿಯಂತ್ರಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.