ನ್ಯೂಸ್

ಕರ್ಣಾಟಕ ಬ್ಯಾಂಕ್​ ರೂ. 508 ಕೋಟಿ ನಿವ್ವಳ ಲಾಭ: ದಾಖಲೆಯ ಶೇ.315.18 ಬೆಳವಣಿಗೆ

ಮಂಗಳೂರು: ಕರ್ಣಾಟಕ ಬ್ಯಾಂಕ್​ 2021&22 ವಿತ್ತೀಯ ವರ್ಷದಲ್ಲಿ ದಾಖಲೆಯ 507.99 ಕೋಟಿ ರೂ. ನಿವ್ವಳ ಲಾಭ ಗಳಿ-ಸಿ-ದೆ. ಕಳೆದ ವಿತ್ತೀಯ ವರ್ಷದಲ್ಲಿ ಬ್ಯಾಂಕ್​ 482.46 ಕೋಟಿ ರೂ. ನಿವ್ವಳ ಲಾಭ ಪಡೆ-ದಿ-ತ್ತು. ಪ್ರಸಕ್ತ ವರ್ಷದ 4ನೇ ತೆಮಾಸಿಕದಲ್ಲಿ 130.20 ಕೋಟಿ ರೂ. ನಿವ್ವಳ ಲಾಭ ಗಳಿಸಿದ ಬ್ಯಾಂಕ್​, ಕಳೆದ ವರ್ಷದ ಇದೇ ತೆಮಾಸಿಕದಲ್ಲಿ 31.36 ಕೋಟಿ ರೂ. ನಿವ್ವಳ ಲಾಭ ಹೊಂದಿ-ತ್ತು. ಪ್ರಸಕ್ತ ತ್ರೈಮಾಸಿಕದಲ್ಲಿ ಬ್ಯಾಂಕ್​ ದಾಖಲೆಯ ಶೇ.315.18 ಬೆಳವಣಿಗೆ ಸಾಧಿಸಿದೆ.

ಬ್ಯಾಂಕ್​ನ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ನಡೆದ ನಿರ್ದೇಶಕರ ಮಂಡಳಿ ಸಭೆಯಲ್ಲಿ ಬ್ಯಾಂಕ್​ನ 2021&22ರ ಪರಿಶೋಧಿತ ಹಣಕಾಸು ವರದಿ ಅಂಗೀಕಾರಗೊಂಡು ಶೇ.40 ಡಿವಿಡೆಂಡ್​ ನೀಡಲು ಶಿಫಾರಸು ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಬ್ಯಾಂಕ್​ನ ಒಟ್ಟು ವ್ಯವಹಾರ ಶೇ.7.71 ವೃದ್ಧಿಗೊಂಡು, 1,37,169.88 ಕೋಟಿ ರೂ. ತಲುಪಿದೆ. ಕಳೆದ ವಿತ್ತೀಯ ವರ್ಷದಲ್ಲಿ ಒಟ್ಟು ವ್ಯವಹಾರ 1,27,348.19 ಕೋಟಿ ರೂ. ಇತ್ತು. ಬ್ಯಾಂಕ್​ನ ಠೇವಣಿಗಳು ಶೇ. 6.25 ವೃದ್ಧಿಗೊಂಡು 80,386.74 ಕೋಟಿ ರೂ. ಹಾಗೂ ಮುಂಗಡಗಳು ಶೇ.10.22 ವೃದ್ಧಿಗೊಂಡು 56,783.14 ಕೋಟಿ ರೂ. ತಲುಪಿದೆ.

ಬ್ಯಾಂಕ್​ನ ಉಳಿತಾಯ ಖಾತೆ ಹಾಗೂ ಚಾಲ್ತಿ ಖಾತೆಯ ಒಟ್ಟು ಠೇವಣಿಗಳು ಶೇ.32.97ಕ್ಕೆ ತಲುಪಿದ್ದು ಶೇ.11.23 ರ ಬೆಳವಣಿಗೆಯನ್ನು ಕಂಡು ಸಾರ್ವಕಾಲಿಕ ದಾಖಲೆ ಮಾಡಿದೆ. ಆಥಿರ್ಕ ಫಲಿತಾಂಶ -ಪ್ರ-ಕ-ಟಿ-ಸಿ ಮಾತನಾಡಿದ ಬ್ಯಾಂಕ್​ನ ಮ್ಯಾನೇಜಿಂಗ್​ ಡೈರೆಕ್ಟರ್​ ಹಾಗೂ ಚೀಫ್​ ಎಕ್ಸಿಕ್ಯೂಟಿವ್​ ಆಫೀಸರ್​ ಮಹಾಬಲೇಶ್ವರ ಎಂ.ಎಸ್​., ಅತ್ಯಂತ ಕಷ್ಟಕರ ಜಾಗತಿಕ ಸನ್ನಿವೇಶದಲ್ಲೂ ಬ್ಯಾಂಕ್​ ಹೊಸ ದಾಖಲೆಗಳನ್ನು ಮಾಡುತ್ತಿರುವುದು ಒಂದು ಚೇತೋಹಾರಿ ಅನುಭವ. ಬಂಡವಾಳ ಪರ್ಯಾಪ್ತತಾ ಅನುಪಾತ ಶೇ.15.66ಕ್ಕೆ ತಲುಪಿರುವುದು ಹಾಗೂ ಪ್ರಾವಿಶನ್​ ಕವರೇಜ್​ ರೇಶಿಯೋ ಶೇ.73.47ಕ್ಕೆ ಏರಿರುವುದು ನಮ್ಮ ಹಲವಾರು ವರ್ಷಗಳ ಕನಸು ನನಸು ಮಾಡಿದೆ ಎಂದರು. ಬ್ಯಾಂಕ್​ನ ಉಳಿತಾಯ ಹಾಗೂ ಚಾಲ್ತಿ ಖಾತೆಯ ಠೇವಣಿಗಳು ಸಾರ್ವಕಾಲಿಕ ದಾಖಲೆಯ ಶೇ.32.97ಕ್ಕೆ ತಲುಪಿರುವುದು ಗ್ರಾಹಕರು ಬ್ಯಾಂಕ್​ಗೆ ನೀಡುತ್ತಿರುವ ಪ್ರೋತ್ಸಾಹಕ್ಕೆ ಸಾಕ್ಷಿ.

ಮುಂದಿನ ವರ್ಷಗಳಲ್ಲಿ ಗ್ರಾಹಕರ ಸರ್ವ ರೀತಿಯ ಬ್ಯಾಂಕಿಂಗ್​ ಅವಶ್ಯಕತೆಗಳಿಗೆ ಸ್ಪಂದಿಸುತ್ತಾ ತಂತ್ರಜ್ಞಾನ ಕೇಂದ್ರಿತ ನವನವೀನ ಬ್ಯಾಂಕಿಂಗ್​ ಉತ್ಪನ್ನಗಳನ್ನು ಪರಿಚಯಿಸಿ, ಬ್ಯಾಂಕ್​ ಅನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ಕಟಿಬದ್ಧರಾಗಿದ್ದೇವೆ ಎನ್ನುತ್ತಾರೆ ಬ್ಯಾಂಕ್‌ನ ಮ್ಯಾನೇಜಿಂಗ್​ ಡೈರೆಕ್ಟರ್​ ಹಾಗೂ ಚೀಫ್​ ಎಕ್ಸಿಕ್ಯೂಟಿವ್​ ಆಫೀಸರ್​ ಮಹಾಬಲೇಶ್ವರ ಎಂ.ಎಸ್​.