ನ್ಯೂಸ್

ಕರೊನಾ ಮುಕ್ತ ಜಿಲ್ಲೆ ಚಾಮರಾಜನಗರಕ್ಕೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಶ್ಲಾಘನೆ

ಚಾಮರಾಜನಗರ: ಕೋವಿಡ್-19 ಮುಕ್ತ ಜಿಲ್ಲೆಯಾಗಿ ಮುಂದುವರೆಯುತ್ತಿರುವ ಚಾಮರಾಜನಗರ ಜಿಲ್ಲೆಯ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರಿಗೆ ಗುರುವಾರ ಸಂಜೆ ಕರೆ ಮಾಡಿ ಮಾತನಾಡಿದ‌ ಸಚಿವ ಹರ್ಷವರ್ಧನ್ ಅವರು, ದೇಶದ ಎಲ್ಲ ಜಿಲ್ಲೆಗಳಲ್ಲೂ‌ ಕರೊನಾ ಪರಿಸ್ಥಿತಿಯನ್ನು ಮಾನೀಟರ್ ಮಾಡಲಾಗುತ್ತಿದೆ. ನಿಮ್ಮ ಜಿಲ್ಲೆಯಲ್ಲಿ ಒಂದು ಕರೊನಾ ಕೇಸ್ ಕೂಡ ವರದಿಯಾಗಿಲ್ಲ. ಒಳ್ಳೆಯ ಕೆಲಸ ಮಾಡಿದ್ದೀರ ಎಂದು ಪ್ರಸಂಶೆ ವ್ಯಕ್ತಪಡಿಸಿದರು ಎಂದು‌ ಡಿಸಿ ರವಿ ತಿಳಿಸಿದ್ದಾರೆ‌.

ಚಾಮರಾಜನಗರ ಜಿಲ್ಲೆ ಸಮೀಪದಲ್ಲಿ ಕರೊನಾ ಉಲ್ಭಣಗೊಂಡ ತಮಿಳುನಾಡು,‌ಕೇರಳ ರಾಜ್ಯಗಳಿದ್ದರೂ ಸೋಂಕು ಹರಡಿಲ್ಲ. ನಿಮ್ಮ ತಂಡಕ್ಕೆ ಅಭಿನಂದನೆಗಳನ್ನು ತಿಳಿಸಿ. ದೆಹಲಿಗೆ ಬಂದಾಗ ಕೇಂದ್ರ ಕಚೇರಿಗೆ ಆಗಮಿಸಬೇಕೆಂದು ಸಚಿವ ಹರ್ಷವರ್ಧನ್ ಆಹ್ವಾನಿಸಿದರು ಎಂದು ಹೇಳಿದರು.