ಅಲ್ಲದೆ, ಲಾಕ್ಡೌನ್ ಸಡಿಲಿಕೆ ನಂತರ ಟೋಲ್ ಸಂಗ್ರಹ ಹೆಚ್ಚುತ್ತಿದೆ. ಅದರಂತೆ ಜೂನ್ ತಿಂಗಳಲ್ಲಿ 1,511.83 ಕೋಟಿ ರೂ. , ಜುಲೈನಲ್ಲಿ 1,623 ಕೋಟಿ ರೂ. ಹಾಗೂ ಆಗಸ್ಟ್ನಲ್ಲಿ 1,712.58 ಕೋಟಿ ರೂ. ಟೋಲ್ ವಸೂಲಿಯಾಗಿತ್ತು.
ಕರೊನಾ ಸೋಂಕು ಕಾಣಿಸಿಕೊಳ್ಳುವುದಕ್ಕಿಂತ ಮುಂದಿನ ತಿಂಗಳಾದ ೆಬ್ರವರಿಯಲ್ಲಿ ದೇಶಾದ್ಯಂತ 1,841 ಕೋಟಿ ರೂ. ಟೋಲ್ ಸಂಗ್ರಹವಾಗಿತ್ತು. ಅದನ್ನು ಗಮನಿಸಿದರೆ ಸೆಪ್ಟೆಂಬರ್ ತಿಂಗಳಲ್ಲಿ ೆಬ್ರವರಿಗಿಂತ 100 ಕೋಟಿ ರೂ. ಹೆಚ್ಚಿಗೆ ಟೋಲ್ ಶುಲ್ಕ ವಸೂಲಿಯಾಗಿದೆ.
100 ಕೋಟಿ ರೂ. ಹೆಚ್ಚು ಸಂಗ್ರಹ:
ಕರೊನಾ ಸೋಂಕಿನ ಭೀತಿ, ಲಾಕ್ಡೌನ್ನಿಂದಾಗಿ ಮಾರ್ಚ್ ಅಂತ್ಯದಿಂದ ಮೇ ತಿಂಗಳ ಅಂತ್ಯದವರೆಗೆ ಟೋಲ್ ಸಂಗ್ರಹ ಕಡಿಮೆಯಾಗಿತ್ತು. ಲಾಕ್ಡೌನ್ ಸಡಿಲಿಕೆ ನಂತರ ವಾಹನಗಳ ಓಡಾಟ ಹೆಚ್ಚಾಗಿ ಟೋಲ್ ಸಂಗ್ರಹವೂ ಏರಿಕೆಯಾಗಿತ್ತು. ಅದರೀಗ ಕರೊನಾ ಸೋಂಕು ಕಾಣಿಸಿಕೊಳ್ಳುವುದಕ್ಕೂ ಹಿಂದಿನ ತಿಂಗಳು ಸಂಗ್ರಹವಾಗುತ್ತಿದ್ದ ಟೋಲ್ ಪ್ರಮಾಣಕ್ಕಿಂತ ಹೆಚ್ಚಿನ ಮೊತ್ತ ಸಂಗ್ರಹವಾಗುವಂತಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ 1,940.60 ಕೋಟಿ ರೂ. ಟೋಲ್ ಸಂಗ್ರಹವಾಗಿದೆ.
ಬೆಂಗಳೂರು: ಕರೊನಾ ಭೀತಿ ನಡುವೆಯೇ ವಾಹನಗಳ ಓಡಾಟ ಹೆಚ್ಚಾಗಿದ್ದು, ತಿಂಗಳಿನಿಂದ ತಿಂಗಳಿಗೆ ಟೋಲ್ ಸಂಗ್ರಹದ ಪ್ರಮಾಣ ಏರಿಕೆಯಾಗುತ್ತಿದೆ. ಅದರಂತೆ ಸೆಪ್ಟೆಂಬರ್ ತಿಂಗಳಲ್ಲಿ ಕರೊನಾ ಪೂರ್ವಕ್ಕಿಂತ ಹೆಚ್ಚಿನ ಟೋಲ್ ಶುಲ್ಕ ವಸೂಲಿಯಾಗಿದೆ.