ಹನಗೋಡು: ಹೋಬಳಿಯ ಕಾಳ ಬೋಚನಹಳ್ಳಿ ಗ್ರಾಮದಲ್ಲಿ ಕೆ.ಎಚ್.ಗಣೇಶ್ ಮತ್ತು ಕೆ.ಸಿ.ಸಂತೋಷ್ ಸ್ಮರಣಾರ್ಥ ಸ್ನೇಹಜೀವಿ ಕಪ್ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಗೆ ಉದ್ಯಮಿ ಎಚ್.ಪಿ.ಅಮರನಾಥ್ ಶನಿವಾರ ಚಾಲನೆ ನೀಡಿದರು.
ಯುವಕರು ಕ್ರೀಡೆಯೊಂದಿಗೆ ಸಾಮಾಜಿಕ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಬೇಕು. ಹುಣಸೂರು ತಾಲೂಕಿನಲ್ಲಿ ಶಾಸಕ ಎಚ್.ಪಿ.ಮಂಜುನಾಥ್ ಅವರು ಕಳೆದ 15 ವರ್ಷಗಳಿಂದಲೂ ಕ್ರೀಡೆ ಮತ್ತು ಸಾಮಾಜಿಕ ಕಾರ್ಯಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ಅಲ್ಲದೆ ಸ್ನೇಹಜೀವಿ ಟ್ರಸ್ಟ್ ವತಿಯಿಂದ ಅನೇಕ ಸಾಮಾಜಿಕ, ಶೈಕ್ಷಣಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯುವಕರಿಗೆ ಅವಕಾಶ ನೀಡಲಾಗುತ್ತಿದೆ ಎಂದು ತಿಳಿಸಿದರು.
ಗ್ರಾಪಂ ಸದಸ್ಯ ಮಾದೇಗೌಡ, ಉದ್ಯಮಿ ದಿನೇಶ್ ಕುಮಾರ್, ಮುಖಂಡರಾದ ಡಿ.ಎ.ರವಿಕುಮಾರ್, ಚಿ.ಯ.ಎಲ್ಲಪ್ಪ, ಸಿ.ಎನ್.ಬೀರೇಗೌಡ, ಕೆ.ಡಿ.ಮಾದೇಗೌಡ, ಸ್ವಾಮಿ ಗೌಡ, ಉಮೇಶ್, ಅಶ್ವತ್ಥ ಪ್ರಸನ್ನ, ದೇವರಾಜ್, ಅಂಗಡಿ ಶೇಖರ್, ಕುಮಾರ್, ಪ್ರಭಾಕರ ಹೆಗಡೆ, ಸಂಜು, ಕೆ.ಎಂ.ರವಿ, ಸಾಗರ್, ಮಹೇಶ್ ಇತರರು ಇದ್ದರು.