The boy cheered up at the prospect of an ice cream after the work.
2) ನನ್ನದು ಕೇವಲ ಯಶಸ್ಸು ಮಾತ್ರ ಅಲ್ಲ, ಸೋಲು ಕೂಡ ಬೆರೆತ ಜೀವನವಾಗಿತ್ತು.
Mine was a chequered life, not just with success.
3) ನಾನು ನನ್ನ ಕಾಲೇಜಿನ ಜೀವನವನ್ನು ನೆನೆದು ಖುಷಿಪಡುತ್ತೇನೆ.
I cherish the memories of my college life.
4) ನೀನು ಆಹಾರವನ್ನು ಸರಿಯಾಗಿ ಜಗಿಯುತ್ತಿಲ್ಲ. ಅದರಿಂದಲೇ ನೀನಗೆ ಅಜೀರ್ಣ ಆಗುತ್ತದೆ.
You’re not chewing your food enough, and that’s why you have indigestion.
5) ನನ್ನ ಮಗ ಮತ್ತು ಇಬ್ಬರು ಹೆಣ್ಣುಮಕ್ಕಳಿಗೆ ಮದುವೆಯಾಗಿ ಅವರಿಗೂ ಮಕ್ಕಳಾಗಿವೆ.
My son and two daughters are married with their own children.
6) ನಾನು ಕೆಲವು ಪಾನೀಯಗಳನ್ನು ತಂದಿದ್ದೇನೆ, ಅವುಗಳನ್ನು ಫ್ರಿಜ್ನಲ್ಲಿ ಶೀತಲಗೊಳಿಸಲು ಇಡುವೆಯಾ?
I have brought some soft drinks. Can you put them in the fridge to chill?
7) ಹೊರಗಡೆ ತುಂಬ ಚಳಿ ಇತ್ತು ಅಂತ ನಾನು ಜರ್ಕಿನ್ ಧರಿಸಿದೆ.
It was very chilly outside and so I put on a jerkin.
8) ಮಹಾಪೂಜೆಯ ಸಮಯದಲ್ಲಿ ಭಕ್ತರು ಗಂಟೆಗಳನ್ನು ಢಣಗುಟ್ಟಿಸಿದರು.
During Mahapooja, devotees chimed the bells at the temple.