ವಿಜಯವಾಣಿ ಸುದ್ದಿಜಲ ಕೋಲಾರ
ಸುಮಾರು ಎರಡೂವರೆ ಸಾವಿರ ವರ್ಷದ ಇತಿಹಾಸ ಇರುವಂತ ಕನ್ನಡ ಭಾಷೆ ಅವನತಿಯ ಅಂಚಿಗೆ ತಲುಪುತ್ತಿದೆ. ನಮ್ಮ ಮುಂದಿನ ಪೀಳಿಗೆಗೆ ಉಳಿಸ ಬೇಕಾಗಿರುವುದು ಅಗತ್ಯವಾಗಿದೆ. ಅನ್ಯಭಾಷಿಕರನ್ನು ಕನ್ನಡ ಭಾಷೆಗೆ ಕರೆ ತರುವಂತಾಗ ಬೇಕು. ಇಲ್ಲವಾದರೆ ಮುಂದಿನ ಯುವ ಪೀಳಿಗೆಗೆ ದ್ರೋಹ ಬಗೆದಂತಾಗುವುದು. ಕನ್ನಡ ಬಾಷೆಯ ಬಗ್ಗೆ ಕಾಳಜಿ ಇರಲಿ. ಇತರ ಭಾಷೆಯನ್ನು ಗೌರವಿಸುವಂತಾಗ ಬೇಕು ಎಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ್ ಹಾನಗಲ್ ತಿಳಿಸಿದರು.
ನಗರದ ಸರ್ಕಾರಿ ಬಾಲಕರ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರ, ಅದಿಮ ಸಾಂಸ್ಕೃತಿಕ ಕೇಂದ್ರದ ಸಹಯೋಗದಲ್ಲಿ ಶುಕ್ರರವಾರ ಆಯೋಜಿಸಿದ್ದ "ಕನ್ನಡ ಭಾಷಾ ಬೆಳವಣಿಗೆ ಮತ್ತು ಸವಾಲುಗಳ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಕನ್ನಡ ಭಾಷ ಬೆಳವಣಿಗೆಯಲ್ಲಿ ಸರ್ಕಾರದ ನಿಲುವು ಮತ್ತು ಆದೇಶಗಳು ಕುರಿತು ಮಾತನಾಡಿ ಕೋಲಾರ ಇತಿಹಾಸವು ಕನ್ನಡ ಹೋರಾಟದ ಕೇಂದ್ರ. ರಾಜ್ಯದ ಗಡಿ ಭಾಗದಲ್ಲಿರುವ ಕೋಲಾರ ನೆರೆ ರಾಜ್ಯದ ತೆಲುಗು, ತಮಿಳು ಹಾಗೂ ಊರ್ದು ಮತ್ತು ಕನ್ನಡ ಸೇರಿದಂತೆ ನಾಲ್ಕು ಭಾಷೆಗಳು ಈ ಭಾಗದಲ್ಲಿ ಸಮಾಗಮವಾಗಿರುವುದು ವಿಶೇಷತೆಯಿಂದ ಕೊಡಿದೆ ಎಂದರು.
ರಾಜ್ಯದಲ್ಲಿ ಕನ್ನಡ ಕಠಿಣ ಸ್ಥಾನದಲ್ಲಿದೆ. ಕನ್ನಡ ಭಾಷೆಯು ಕಗ್ಗೊಲೆಯಾಗಿ ಅವನತಿ ಸ್ಥಾನ ತಲುಪುತ್ತಿರುವುದನ್ನು ತಡೆಯುವ ಶಕ್ತಿ ಯುವ ಜನತೆಗೆ ಇದೆ. ಕರ್ನಾಟಕದಲ್ಲಿರುವ ಎಲ್ಲರೂ ಕನ್ನಡಿಗರೇ ಅಗಿದ್ದರೂ ಕನ್ನಡ ಭಾಷೆ ನಿರೀಕ್ಷೆಯಷ್ಟು ಸಮೃದ್ದವಾಗಿಲ್ಲ. ಹೊರ ರಾಜ್ಯದ ಸಾಮಾನ್ಯ ವ್ಯಕ್ತಿಗೆ ಭಾಷೆಯ ಬಗೆ ಇರುವಷ್ಟು ಕಾಳಜಿ ನಮ್ಮ ರಾಜ್ಯದವರಿಗೆ ಕನ್ನಡ ಭಾಷೆಯ ಮೇಲೆ ಕಾಳಜಿ ನಮ್ಮಲ್ಲಿ ಇಲ್ಲ. ಕಳೆದ ೨೦೧೧ ರ ದಕ್ಷಿಣ ಭಾರತದ ಸಮೀಕ್ಷೆ ಪ್ರಕಾರ ಹಿಂದಿ ಬೆಳವಣಿಗೆ ಶೇ ೬೩ ರಷ್ಟು ಇದ್ದರೆ,ಕನ್ನಡ ಭಾಷೆ ಬೆಳವಣಿಗೆ ಕೇವಲ ಶೇ ೩.೬ರಷ್ಟು ಮಾತ್ರ ಇರುವುದು ಆತಂಕಕಾರಿಯಾಗಿದೆ. ಕನ್ನಡದ ಬೆಳವಣಿಗೆಗೆ ಮರಳಿ ಗೋಕಾಕ್ ಮಾದರಿಯಲ್ಲಿ ಕನ್ನಡ ಭಾಷ ಅಂದೋಲನ ಅನಿವಾರ್ಯವಾಗಲಿದೆ ಎಂದು ಅಭಿಪ್ರಾಯ ಪಟ್ಟರು.
ಕನ್ನಡ ಸರ್ಕಾರಿ ಶಾಲೆಗಳ ಅಭಿವೃದ್ದಿ ಬಗ್ಗೆ ಜನಪ್ರತಿನಿಧಿಗಳಿಗೆ ಹಾಗೂ ಆಡಳಿತ ವರ್ಗಕ್ಕೆ ಕಾಳಜಿ ಇಲ್ಲದಿರುವ ಬಗ್ಗೆ ಪ್ರಶ್ನೆ ಮಾಡುವಂತ ಶಕ್ತಿಯನ್ನು ಬೆಳೆಸಿ ಕೊಳ್ಳ ಬೇಕಾಗಿದೆ. ರಾಜ್ಯದಲ್ಲಿ ಹೊರರಾಜ್ಯದವರು ಸುಮಾರು ೧೯೭ ಕಂಪನಿಗಳನ್ನು ಸ್ಥಾಪಿಸಲು ಅವಶ್ಯಕವಾದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಅದರೆ ಈ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುವಂತ ಕೌಶಲ್ಯತೆಗಳ ತರಬೇತಿಗಳನ್ನು ಪಡೆದಿರುವಂತ ಸಶಕ್ತರು ನಮ್ಮಲ್ಲಿ ಇಲ್ಲದಿರುವು ಸವಾಲ್ ಅಗಿ ಪರಿಣಮಿಸಿದೆ. ಉನ್ನತ ಶಿಕ್ಷಣ ಪಡೆದವರನ್ನು ಹೊರದೇಶಗಳಿಗೆ ಕಳುಹಿಸುವುದು ಪೋಷಕರಿಗೆ ಇಂದು ಫ್ಯಾಷನ್ ಅಗಿ ಮಾರ್ಪಟ್ಟಿದೆ. ಕೊನೆಗೆ ಸತ್ತಾಗ ಮಕ್ಕಳು ಬಾರದೆ ಕಾರ್ಪೋರೇಷ್‌ನವರೇ ಗತಿಯಾಗುತ್ತಿದ್ದಾರೆ ಎಂದು ವಿಷಾಧಿಸಿದರು.
ರಾಷ್ಟçಕವಿ ಕುವೆಂಪು ರಚಿತ ನಾಡಗೀತೆಗೆ ೧೦೦ರ ಸಂಭ್ರಮದ ಜನಾಂದೋಲವನ್ನಾಗಿ ರೂಪಿಸಲು ತಮ್ಮ ಅಭಿಪ್ರಾಯಗಳನ್ನು ಮುಖ್ಯ ಮಂತ್ರಿಗಳಿಗೆ ಪತ್ರ ಮುಖೇನ ತಿಳಿಸುವಂತಾಗ ಬೇಕೆಂದು ತಿಳಿಸಿದರು.
ಕನ್ನಡ ಅಭಿವೃದ್ದಿ ಪ್ರಾಧಿಕಾರ ಸದಸ್ಯರಾದ ಟಿ.ತಿಮ್ಮೇಶ್ ಮಾತನಾಡಿ ಕ್ರಿ.ಪೂ. ೩ನೇ ಶತಮಾನದಲ್ಲಿಯೇ ಬಾದಮಿ ಪಟ್ಟದ ಐಹೊಳೆಯಲ್ಲಿ ದೊರೆತ ಶಾಸನಗಳಲ್ಲಿ ಕನ್ನಡ ಭಾಷೆಯು ರಾರಾಜಿಸುತ್ತಿರುವುದು ಪತ್ತೆಯಾಗಿದೆ. ಅಂದರೆ ಕನ್ನಡವು ಪ್ರಾಚೀನ ಭಾಷೆ ಎಂದು ಪ್ರತಿಪಾದಿಸ ಬಹುದಾಗಿದೆ ಎಂದರು.
ಕನ್ನಡಿಗರು ಪರೋಪಕಾರಿಗಳು ಹೊರಗಿನವರು ಬದುಕು ಕಟ್ಟಿ ಕೊಳ್ಳಲು ರಾಜ್ಯಕ್ಕೆ ಬಂದವರ ಬಳಿ ಕನ್ನಡ ಕಲಿಸದೆ ಅವರದೇ ಭಾಷೆಯಲ್ಲಿ ಮಾತನಾಡುವ ಮೂಲಕ ಹೊಂದಾಣಿಕೆ ಮಾಡಿ ಕೊಂಡು ಉದಾರತೆ ತೋರುವುದು ನಮ್ಮ ಕನ್ನಡಿಗರ ಸಂಸ್ಕೃತಿಯಾಗಿದೆ. ನಾವು ಹೊರಗಿನವರಿಗೆ ತೋರುತ್ತಿರುವ ಔದರ್ಯ, ಸಾಮರಸ್ಯಗಳೇ ನಮ್ಮ ಭಾಷೆಯ ಬೆಳವಣಿಗೆಗೆ ತೊಡಕಾಗಿದೆ ಎಂಬುವುದು ಅರಿತು ಹೊರಗಿನವರಿಗೆ ಕನ್ನಡ ಕಲಿಸುವ ಮೂಲಕ ಬೆಳವಣಿಗೆಗೆ ಪ್ರೇರಣೆಯಾಗ ಬೇಕಾಗಿದೆ ಎಂದು ಹೇಳಿದರು.
ಭಾಷೆ ಎಂಬುವುದು ಮನಸ್ಸಿನ ಭಾವನೆಯನ್ನು ತಟ್ಟುವಂತೆ ಇರಬೇಕೇ ಹೊರತು ತುಕ್ಕು ಹಿಡಿಯಲು ಬಿಡಬಾರದು. ಕನ್ನಡಿಗರ ಕೊಗು ರಾಜ್ಯಕ್ಕೆ ಹಾಗೂ ಕೇಂದ್ರ ಆಡಳಿತಕ್ಕೆ ಕೇಳುವಂತಾಗ ಬೇಕು. ಕನ್ನಡಿಗರು ತೊಕಡಿಸ ಬಾರದು. ಕನ್ನಡ ಭಾಷೆಯನ್ನು ಆಡಳಿತ ಭಾಷೆಯಾಗಿ ಜಾರಿ ಮಾಡಿದರೂ ಸಮರ್ಪಕವಾಗಿ ಅನುಷ್ಠಾನಕ್ಕೆ ಬಾರದ ಹಿನ್ನಲೆಯಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರ ರಚಿಸುವ ಮೂಲಕ ಕನ್ನಡಿಗರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಮಾಸ್ತಿ ವೆಂಕಟೇಶ್ ಆಯ್ಯಂಗಾರ್, ಡಿ.ವಿ.ಗುಂಡಪ್ಪ, ದ.ರಾ.ಬೇಂದ್ರೆ. ಬಿ.ವಿ.ಶಿವರಾಮಕಾರಂತ, ನಿಸ್ಸಾರ್ ಆಹಮದ್, ಸೇರಿದಂತೆ ಅನೇಕರ ಮಾತೃ ಭಾಷೆ ಬೇರೆ ಬೇರೆಯಾಗಿದ್ದರೂ ಸಹ ನೆಲದ ಕನ್ನಡ ಭಾಷೆಯಲ್ಲಿ ಸಾಧನೆ ಮಾಡಿ ಕನ್ನಡದ ಗೆರಿಮೆಯಾಗಿದ್ದಾರೆ. ಗಟ್ಟಿ ಸೌಧದ ಮೇಲೆ ಕಟ್ಟಿದ ಕನ್ನಡ ಎಂದು ಕುಸಿಯುವುದಿಲ್ಲ. ಪ್ರತಿಯೊಬ್ಬರು ಕನ್ನಡ ಬಾರದವರಿಗೆ ಕನ್ನಡ ಕಲಿಸುವಂತಾಗ ಬೇಕು. ಪರರ ಸಂಸ್ಕೃತಿಯನ್ನು ಗೌರವಿಸಿ ನಮ್ಮ ಸಂಸ್ಕೃತಿಯನ್ನು ಪ್ರೀತಿಸಿ, ಅಭಿವೃದ್ದಿ ವ್ಯಕ್ತಿತ್ವದ ಶಕ್ತಿಯಾಗಿ, ಕನ್ನಡ ಕಲಿಯುವ, ಕಲಿಸುವ ಮೂಲಕ ಆತ್ಮ ವಿಶ್ವಾಸದ ಜ್ಞಾನ ಪಡೆದು ಕನ್ನಡದ ತಳಹದಿಯಲ್ಲಿ ಕನ್ನಡ ಬೆಳೆಸುವ ಮೂಲ ಜೀವನ ರೂಪಿಸಿ ಕೊಳ್ಳುವಂತಾಗ ಬೇಕೆಂದು ಕಿವಿ ಮಾತು ಹೇಳಿದರು.
ನವೆಂಬರ್ ಮಾಹೆಯ ಕನ್ನಡಿಗರಾಗದೆ ವರ್ಷವಿಡಿ ಕನ್ನಡಿಗರಾಗಿರ ಬೇಕು. ಕೈಗಾರಿಕೆಗಳಲ್ಲಿ ಶೇ ೬೦ ಸ್ಥಳೀಯ ಕನ್ನಡಿಗರಿಗೆ ಮೀಸಲು ಇರಬೇಕು. ಎಲ್ಲಡೆ ಕನ್ನಡದ ಫಲಕಗಳು ರಾರಾಜಿಸ ಬೇಕು. ಕನ್ನಡ ಶಾಲೆಗಳಿಗೆ ವಿಶೇಷ ಅಧ್ಯತೆ ಸಿಗುವಂತಾಗ ಬೇಕೆಂದರು.
ಅದಿಮ ಸಾಂಸ್ಕೃತಿಕ ಕೇಂದ್ರದ ಕಾರ್ಯದರ್ಶಿ ರಾಮಚಂದ್ರಪ್ಪ ಅವರು ಚಳುವಳಿಗಳು ಮತ್ತು ಭಾಷಾಪ್ರಾಧಾನ್ಯತೆ ಕುರಿತು ಮಾತನಾಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಮುನಿಶಾಮಪ್ಪ, ಜಿಲ್ಲಾ ಕಾರ್ಯನಿರ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ವಿ. ಗೋಪಿನಾಥ್, ಕನ್ನಡ ಪರ ಚಿಂತಕರಾದ ಡಾ. ಕೆ.ವಿ.ನೇತ್ರವತಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಕ.ಸಾ.ಪ. ಜಿಲ್ಲಾಧ್ಯಕ್ಷ ಎನ್.ಬಿ. ಗೋಪಾಲಗೌಡ ಭಾಗವಹಿಸಿದ್ದರು.
ಕನ್ನಡ ಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಅ.ಕೃ. ಸೋಮಶೇಖರ್, ಕ.ರ.ವೇ ಜಿಲ್ಲಾಧ್ಯಕ್ಷ ಮೇಡಿಹಾಳ ರಾಘವೇಂದ್ರ, ಜಯಕರ್ನಾಟಕ ಸಂಘ ಅಧ್ಯಕ್ಷ ಕೆ.ಆರ್.ತ್ಯಾಗರಾಜ್. ಶರಣ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಬಿ.ಸುರೇಶ್, ಪರಿಸರ ವಿಜ್ಷಾನ ಲೇಖಕ ಎಚ್.ಎ.ಪುರುಷೋತ್ತಮರಾವ್, ಚು.ಸಾ.ಪ. ಜಿಲ್ಲಾಧ್ಯಕ್ಷ ಪಿ.ನಾರಾಯಣಪ್ಪ, ಕ.ರ.ವೇ ಜಿಲ್ಲಾಧ್ಯಕ್ಷ ಚಂಬೆ ರಾಜೇಶ್, ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ಬಾ.ಹ.ಶೇಖರಪ್ಪ. ಕ.ಸಾ.ಪ. ಪದಾಧಿಕಾರಿಗಳಾದ ಆರ್.ಶಂಕರಪ್ಪ, ಸುಬ್ಬರಾಮಯ್ಯ, ಶ್ರೀಮತಿ ಮಂಜುಳ, ಕನ್ನಡ ಉಪನ್ಯಾಸಕ ಮುನಿವೆಂಕಟಸ್ವಾಮಿ, ಜನಪದ ಅಕಾಡಮಿಯ ರಾಜಪ್ಪ ಮುಂತಾದವರು ಉಪಸ್ಥಿತರಿದ್ದರು.
ಚಿತ್ರ ೨೪ ಕೆ.ಎಲ್.ಆರ್. ೦೩ ನಗರದ ಸರ್ಕಾರಿ ಬಾಲಕರ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಅಭಿವೃದ್ದಿ ಪ್ರಾಧಿಕಾರ, ಅದಿಮ ಸಾಂಸ್ಕೃತಿಕ ಕೇಂದ್ರದ ಸಹಯೋಗದಲ್ಲಿ ಶುಕ್ರರವಾರ ಆಯೋಜಿಸಿದ್ದ "ಕನ್ನಡ ಭಾಷಾ ಬೆಳವಣಿಗೆ ಮತ್ತು ಸವಾಲುಗಳ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ್ ಹಾನಗಲ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಮುನಿಶಾಮಪ್ಪ, ಜಿಲ್ಲಾ ಕಾರ್ಯನಿರ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಿ.ವಿ. ಗೋಪಿನಾಥ್ ಮುಂತಾದವರಿದ್ದರು.