ಎನ್.ಆರ್.ಪುರದ ಡಿಸಿಎಂಸಿ ಪ್ರೌಢಶಾಲೆಯಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರವನ್ನು ರೋಟರಿ ಸಂಸ್ಥೆ ಅಧ್ಯಕ್ಷ ಕಣಿವೆ ವಿನಯ್ ಉದ್ಘಾಟಿಸಿದರು. ಎಲ್.ಎಂ.ಸತೀಶ್, ಕಟಗಳಲೆ ಲೋಕೇಶ್, ಎಸ್.ಎಸ್.ಶಾಂತಕುಮಾರ್, ಪದ್ಮಾ ರಮೇಶ್, ಲೆವಿನಾಡೆಕೊಸ್ಟಾ, ವಿಜಯಕುಮಾರ್ ಇದ್ದರು. 
ನ್ಯೂಸ್

ಕಣ್ಣಿನ ಕಾಳಜಿ ಅಗತ್ಯ

ಎನ್.ಆರ್.ಪುರ: ಪಂಚೇಂದ್ರಿಯಗಳಲ್ಲಿ ಕಣ್ಣು ಬಹಳ ಮುಖ್ಯ. ಪ್ರಕೃತಿ ಸೌಂದರ್ಯವನ್ನು ನೋಡಲು ಕಣ್ಣು ಅವಶ್ಯಕ ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಕಣಿವೆ ವಿನಯ್ ಹೇಳಿದರು.

ಪಟ್ಟಣದ ಡಿಸಿಎಂಸಿ ಶಾಲೆ ಆವರಣದಲ್ಲಿ ಭಾನುವಾರ 5ರಿಂದ 10ನೇ ತರಗತಿವರೆಗಿನ ಶಾಲಾ ಮಕ್ಕಳಿಗೆ ರೋಟರಿ ಸಂಸ್ಥೆ, ಡಿಸಿಎಂಸಿ ಪ್ರೌಢಶಾಲೆ ಹಾಗೂ ಪ್ರಸಾದ್ ನೇತ್ರಾಲಯ ಉಡುಪಿ ಅವರ ಸಹಭಾಗಿತ್ವದಲ್ಲಿ ನಡೆದ ಉಚಿತ ನೇತ್ರ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ರೋಟರಿ ಸಂಸ್ಥೆಯಿಂದ ನೇತ್ರ ತಪಾಸಣೆ, ಆರೋಗ್ಯ ತಪಾಸಣೆಯಂತಹ ಹಲವಾರು ಉಪಯುಕ್ತ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ವಿದ್ಯಾರ್ಥಿಗಳಿಗೆ ಕಣ್ಣಿನ ತಪಾಸಣೆ ಮಾಡುವುದರಿಂದ ದೃಷ್ಟಿದೋಷ ಇದ್ದರೆ ಪ್ರಾಥಮಿಕ ಹಂತದಲ್ಲೇ ಪತ್ತೆ ಹಚ್ಚಬಹುದು ಎಂದರು. ಉಡುಪಿ ಪ್ರಸಾದ್ ನೇತ್ರಾಲಯದ ನೇತ್ರ ತಜ್ಞ ಡಾ. ಜಯರಾಮ್ ಅವರ ತಂಡ ಸುಮಾರು 500 ವಿದ್ಯಾರ್ಥಿಗಳಿಗೆ ಕಣ್ಣಿನ ತಪಾಸಣೆ ಮಾಡಿತು.

ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎಲ್.ಎಂ.ಸತೀಶ್, ರೋಟರಿ ಸಂಸ್ಥೆ ಕಾರ್ಯದರ್ಶಿ ಕಟಿಗಳಲೆ ಲೋಕೇಶ್, ಒಕ್ಕಲಿಗರ ಸಂಘದ ಕಾರ್ಯದರ್ಶಿ ಎಸ್.ಎಸ್.ಶಾಂತಕುಮಾರ್, ಶಿಕ್ಷಣ ಸಂಯೋಜಕಿ ತೃಪ್ತಿ ಅಮರ್, ಪ್ರಾಚಾರ್ಯೆ ಪದ್ಮಾ ರಮೇಶ್, ಮುಖ್ಯ ಶಿಕ್ಷಕಿ ಲೆವಿನಾಡೆಕೊಸ್ಟಾ, ವಿಜಯಕುಮಾರ್ ಇತರರಿದ್ದರು.