ನ್ಯೂಸ್

ಕಡ್ಡಾಯವಾಗಿ ಮತದಾನ ಮಾಡಿ


ಯಾದಗಿರಿ: ಸದೃಢ ದೇಶ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಮತದಾನ ಮಾಡುವ ಅಗತ್ಯವಿದೆ ಎಂದು ಜಿಪಂ ಸಿಇಒ ಶಿಲ್ಪಾ ಶರ್ಮಾ ತಿಳಿಸಿದರು.

ನಗರದ ನ್ಯೂ ಕನ್ನಡ ಪದವಿಪೂರ್ವ ಕಾಲೇಜಿನಲ್ಲಿ ಭಾರತ ಚುನಾವಣೆ ಆಯೋಗ, ಕರ್ನಾಟಕ ಸರ್ಕಾರ, ಜಿಲ್ಲಾ ಪಂಚಾಯಿತಿ, ಪದವಿಪೂರ್ವ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಪದವಿಪೂರ್ವ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಸ್ವೀಪ್ ಚಟುವಟಿಕೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿ ಗಳು ಚುನಾವಣೆ ಮಹತ್ವ ಅರಿಯಬೇಕು ಪ್ರಜಾಪ್ರಭುತ್ವ ವ್ಯವಸ್ಥೆನಲ್ಲಿ ಮತದಾನ ನಿಮ್ಮ ಹಕ್ಕು, ನಿಮ್ಮ ಅಧಿಕಾರ ವ್ಯವಸ್ಥೆಯುಲ್ಲಿ ಬದಲಾವಣೆ ತರಲು ಇರುವ ಅಸ್ತ್ರವಾಗಿದೆ ಎಂದರು.

ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಚಂದ್ರಕಾಂತ ಹಿಳ್ಳಿ ಮಾತನಾಡಿ, ಇಲಾಖೆ ವತಿಯಿಂದ ಇದುವರೆಗೆ 3962 ಹೊಸ ಮತದಾರರನ್ನು ಗುತರ್ಿಸಿ ಮದಾರರ ವಾಹಿನಿಗೆ ತರುವ ಕಾರ್ಯ ಯಶಸ್ವಿಯಾಗಿ ಕೈಗೊಳ್ಳಲಾಗಿದೆ. ಜಿಲ್ಲೆಯ ಪ್ರಾಂಶುಪಾಲರು, ಉಪನ್ಯಾಸಕರು ಸಕ್ರಿಯವಾಗಿ ತೊಡಗಿ ಜಿಲ್ಲಾಡಳಿತ ನೀಡಿದ ಕಾರ್ಯ ಯಶಸ್ವಿಗೊಳಿಸಲಾಗಿದೆ ಎಂದು ತಿಳಿಸಿ ಸ್ವೀಪ್ ಕಾರ್ಯಚಟುವಟಿಕೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ನ್ಯೂಕನ್ನಡ ಕಾಲೇಜು ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಿದ್ರಾಮಪ್ಪ ಪಾಟೀಲ್ ಚೇಗುಂಟಾ, ನಾಗರಿಕರು ಮತದಾನದ ಕರ್ತವ್ಯ ಹಾಗೂ ಹಕ್ಕುಗಳನ್ನು ತಿಳಿದುಕೊಂಡು ಮತದಾನ ಪ್ರಕ್ರಿಯೆಯಲ್ಲಿ ಜವಬ್ದಾರಿಯಿಂದ ಭಾಗವಹಿಸಬೇಕು ಎಂದು ತಿಳಿಸಿದರು.

ಪ್ರಾಚಾರ್ಯ ವೆಂಕಟರಾವ್ ಕುಲಕಣರ್ಿ ಪ್ರಾಸ್ತಾವಿಕ ಮಾತನಾಡಿದರು. ಮಲ್ಲಿಕಾಜರ್ುನ ಅಂಗಡಿ ಸ್ವಾಗತಿಸಿದರು, ಗಿರಿಜಾ ಹಿರೇಮಠ ಪ್ರಾಥರ್ಿಸಿದರು, ಸಹಾಯಕ ನೋಡಲ್ ಅಧಿಕಾರಿ ಶರಣಪ್ಪ ರಾಹುಲ್, ಪ್ರಾಚಾರ್ಯ ಗಣಪತಿ ಪೂಜಾರಿ, ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಮಹಾಂತೇಶ ಕಲಾಲ್, ಉಪನ್ಯಾಸಕರಾದ ಸಿದ್ರಾಮಪ್ಪ, ಭೀಮಶಪ್ಪ, ಲಕ್ಷ್ಮಣ, ಪ್ರಕಾಶ ರೆಡ್ಡಿ, ಶ್ರೀಶೈಲ ಜಿ, ಶಾಮರಾವ ಪಾಟೀಲ್, ಅಶೋಕ ಅವಂಟಿ, ರೀನಾವತಿ, ರಾಘವೇಂದ್ರರೆಡ್ಡಿ ಸೇರಿದಂತೆ ಜಿಲ್ಲೆಯ ವಿದ್ಯಾಥರ್ಿಗಳು ಭಾಗವಹಿಸಿದ್ದರು.