ಕಡೂರು: ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಭೂಸ್ವಾಧೀನವಾಗಿರುವ ಕೆಲವು ಗ್ರಾಮಗಳ ರೈತರ ಜಮೀನುಗಳಿಗೆ ಬರಬೇಕಾದ ಪರಿಹಾರದ ಹಣ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಶಾಸಕ
ಕೆ.ಎಸ್.ಆನಂದ್ ನೇತೃತ್ವದಲ್ಲಿ ರೈತರು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರಕುಮಾರ ಕಠಾರಿಯಾ ಅವರನ್ನು ಭೇಟಿ ಮಾಡಿ ಕಡತ ವಿಲೇವಾರಿ ಮಾಡಿಕೊಡುವಂತೆ
ಮನವಿ ಮಾಡಿದರು.
ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಚುರುಕುಗೊಳ್ಳುತ್ತಿದೆ. ಯೋಜನೆಯಡಿ ಕ್ಷೇತ್ರದ ವ್ಯಾಪ್ತಿಯಲ್ಲಿ ಒಳಪಡುವ ಗ್ರಾಮಗಳಲ್ಲಿ ಸ್ವಾಧೀನವಾಗಿರುವ
ಜಮೀನುಗಳಿಗೆ ಸೂಕ್ತ ಪರಿಹಾರದ ಹಣ ಇದುವರೆಗೂ ಬಾರದೆ ಇರುವುದರಿಂದ ರೈತರು ಅಸಮಾಧಾನಗೊಂಡಿದ್ದು, ಕೂಡಲೇ ಕಡತ ವಿಲೇವಾರಿ ಮಾಡಿಕೊಡಬೇಕೆಂದು ಶಾಸಕ
ಕೆ.ಎಸ್.ಆನಂದ್ ಒತ್ತಾಯಿಸಿದರು.
ವಿಳಂಬವಾಗಿರುವ ರೈತರ ಕಡತಗಳನ್ನು ಕೂಡಲೇ ಪರಿಶೀಲಿಸಿ ವಿಲೇವಾರಿ ಮಾಡಲಾಗುವುದು ಎಂದು ರಾಜೇಂದ್ರಕುಮಾರ ಕಠಾರಿಯಾ ಭರವಸೆ ನೀಡಿದರು. ಗ್ರಾಪಂ ಸದಸ್ಯ ಅಣ್ಣೀಗೆರೆ
ತಮ್ಮಯ್ಯ, ಗುಜ್ಜೇನಹಳ್ಳಿ ತಿಪ್ಪೇಸ್ವಾಮಿ, ಪುಟ್ಟಲಿಂಗಪ್ಪ, ಸೋಮಶೇಖರ್, ಜಯಸ್ವಾಮಿ, ಮಹಾಂತೇಶ್ ಹಾಗೂ ಅಣ್ಞೀಗೆರೆ, ವೈ.ಮಲ್ಲಾಪುರ, ಗುಜ್ಜೇನಹಳ್ಳಿ, ಪಾತೇನಹಳ್ಳಿ ಕಲ್ಲಾಪುರ,
ಚಿಕ್ಕಬಾಸೂರು ಗ್ರಾಮಗಳ ರೈತರು ಇದ್ದರು.