ಬಾಳೆಹೊನ್ನೂರು: ಪಟ್ಟಣದ ಕರ್ಣಾಟಕ ಬ್ಯಾಂಕ್ ಶಾಖೆಯಲ್ಲಿ ಕಟ್ಟಿದ 1 ಲಕ್ಷ ರೂ. ಜೀವವಿಮೆಗೆ ಪ್ರತಿಯಾಗಿ ವಿಮೆ ಪಡೆದು ಅಪಘಾತದಲ್ಲಿ ಮೃತಪಟ್ಟ ಕುಟುಂಬಕ್ಕೆ 10.50 ಲಕ್ಷ ರೂ. ವಿಮೆ ಬಂದಿದೆ.
2023ರ ೆಬ್ರವರಿ 8ರಂದು ಬಾಳೆಹೊನ್ನೂರು ಕರ್ಣಾಟಕ ಬ್ಯಾಂಕ್ ಶಾಖೆಯಲ್ಲಿ ಕೊಳಲೆ ಗ್ರಾಮದ ಎ.ಎಸ್.ಶಿವಣ್ಣ ಅವರು ಒಂದು ಲಕ್ಷ ರೂ. ಜೀವ ವಿಮೆಯನ್ನು ಭಾರತಿ ಆಕ್ಸಾ ವಿಮಾ ಕಂಪೆನಿಯಿಂದ ಮಾಡಿಸಿದ್ದರು.
ಅದೇ ೆಬ್ರವರಿ 21ರಂದು ಶಿವಣ್ಣನವರು ವಾಹನ ಅಪಘಾತದಲ್ಲಿ ಮೃತಪಟ್ಟಿರುತ್ತಾರೆ. ವಿಮೆ ತೆಗೆದುಕೊಂಡು ಒಂದೇ ತಿಂಗಳಲ್ಲಿ ಮೃತಪಟ್ಟ ಶಿವಣ್ಣ ಅವರ ಕುಟುಂಬಕ್ಕೆ ಕರ್ಣಾಟಕ ಬ್ಯಾಂಕ್ ಮುಖಾಂತರ ಭಾರತಿ ಅಕ್ಸಾ ವಿಮಾ ಕಂಪನಿಯಿಂದ 10.50 ಲಕ್ಷ ರೂ. ಸಂದಾಯವಾಗಿರುತ್ತದೆ.
ಇದರ ಜತೆಗೆ ಶಿವಣ್ಣ ಅವರು ಬ್ಯಾಂಕಿನಲ್ಲಿ ಕಾರ್ ಲೋನ್ ಅನ್ನು ಕೂಡ ಕರ್ಣಾಟಕ ಬ್ಯಾಂಕ್ ಬಾಳೆಹೊನ್ನೂರು ಶಾಖೆಯಲ್ಲಿ ತೆಗೆದುಕೊಂಡಿದ್ದರು. ಆ ಕಾರ್ ಲೋನ್‌ಗೂ ಸಹ ಕರ್ಣಾಟಕ ಬ್ಯಾಂಕ್‌ನ ಮುಖಾಂತರ ಭಾರತಿ ಆಕ್ಸಾ ವಿಮೆ ಮಾಡಿಸಿದ್ದರು. ಇದರ ಬಾಬ್ತು 4.5 ಲಕ್ಷ ರೂ. ಕಾರ್ ಲೋನ್ ಮೊತ್ತ ಕೂಡ ವಿಮಾ ಕಂಪನಿಯಿಂದ ಸಂದಾಯವಾಗಿದೆ.
ಕರ್ಣಾಟಕ ಬ್ಯಾಂಕ್ ಮುಖಾಂತರ ಭಾರತೀ ಆಕ್ಸಾ ವಿಮಾ ಕಂಪನಿಯು ಸುಮಾರು 15 ಲಕ್ಷ ರೂ. ಮೊತ್ತವನ್ನು ಆ ಕುಟುಂಬಕ್ಕೆ ನೀಡಿದೆ.
ಮಂಗಳವಾರ ಕರ್ಣಾಟಕ ಬ್ಯಾಂಕ್ ಬಾಳೆಹೊನ್ನೂರು ಶಾಖೆಯಲ್ಲಿ ಭಾರತೀ ಆಕ್ಸಾ ಕಂಪನಿಯಿಂದ 10.50 ಲಕ್ಷ ರೂ. ಚೆಕ್ ಅನ್ನು ಮೃತ ಶಿವಣ್ಣ ಅವರ ಪತ್ನಿ ವಿಶಾಲಾಕ್ಷಿ, ಮಗ ಸುಮಂತ್ ಅವರಿಗೆ ಹಸ್ತಾಂತರಿಸಲಾಯಿತು.
ಕರ್ಣಾಟಕ ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಚಂದ್ರನಾಥ್, ಉಪ ವ್ಯವಸ್ಥಾಪಕ ಶ್ರೀಕಾಂತ್, ಶಿವಮೊಗ್ಗದ ಭಾರತಿ ಆಕ್ಸಾದ ಟೀಮ್ ಮ್ಯಾನೇಜರ್ ಸುಬ್ರಹ್ಮಣ್ಯ, ಸಿಬ್ಬಂದಿ ಪ್ರೇಮಾನಂದ್ ಇತರರಿದ್ದರು.