ನ್ಯೂಸ್

ಕಂದಾಯ ಅದಾಲತ್‌ನಲ್ಲಿ ೩೪೦ ರಿಂದ ೪೫೦ ಪ್ರಕರಣ ರಾಜಿ ಮೂಲಕ ಇತ್ಯರ್ಥ / ಅಲೆದಾಟ ತಪ್ಪಿಸಿ ಸೌಹಾರ್ದತೆ ಕಾಪಾಡಲು ಸಹಕಾರಿ / ಸುನಿಲ ಎಸ್.ಹೊಸಮನಿ

ವಿಜಯವಾಣಿ ಸುದ್ದಿಜಾಲ ಕೋಲಾರ

ಕಂದಾಯ ಅದಾಲತ್‌ನಲ್ಲೂ ೩೪೦ ರಿಂದ ೪೫೦ ಪ್ರಕರಣಗಳು ರಾಜಿ ಮೂಲಕ ಇತ್ಯರ್ಥವಾಗಿರುವುದು ಉತ್ತಮ ಬೆಳವಣಿಗೆಯಾಗಿದ್ದು, ನ್ಯಾಯಾಲಯಗಳಿಗೆ ಅಲೆದಾಟ ತಪ್ಪಿಸಿ ಸೌಹಾರ್ದಯುತ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನಿಲ ಎಸ್.ಹೊಸಮನಿ ಅಭಿಪ್ರಾಯಪಟ್ಟರು.

ನಗರದ ಸಹಾಯಕ ಕಮಿಷನರ್ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಂದಾಯ ಇಲಾಖೆ, ಉಪವಿಭಾಗಾಧಿಕಾರಿಗಳ ಕಚೇರಿ, ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ರಾಷ್ಟಿçÃಯ ಲೋಕ ಅದಾಲತ್‌ನ ಭಾಗವಾಗಿ ನಡೆದ ಕಂದಾಯ ಅದಾಲತ್‌ಗೆ ಚಾಲನೆ ನೀಡಿ ಮಾತನಾಡಿದರು.

ಪ್ರತಿ ರಾಷ್ಟಿçÃಯ ಲೋಕ ಅದಾಲತ್ ಸಂದರ್ಭದಲ್ಲೂ ಕಂದಾಯ ಅದಾಲತ್ ನಡೆಸುವ ಮೂಲಕ ಉಪವಿಭಾಗಾಧಿಕಾರಿ ಡಾ.ಮೈತ್ರಿ ಸಹಕಾರ ನೀಡಿದ್ದು, ಇದರಿಂದ ಪ್ರತಿ ಅದಾಲತ್‌ನಲ್ಲೂ ಕನಿಷ್ಟ ೩೪೦ ರಿಂದ ೪೫೦ ರವರೆಗೂ ಕೇಸ್‌ಗಳು ರಾಜಿ ಮೂಲಕ ಇತ್ಯರ್ಥಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದು ಹರ್ಷ ವ್ಯಕ್ತಪಡಿಸಿದರು.

ಸಾರ್ವಜನಿಕರು ಇಂತಹ ಅದಾಲತ್‌ಗಳ ಪ್ರಯೋಜನ ಪಡೆಯಬೇಕು. ಸಮಾಜದಲ್ಲಿ ಸೌಹಾರ್ದತೆ ನೆಲಸಲು ರಾಜೀ ಸಂಧಾನ ಪ್ರಕ್ರಿಯೆಗಳು ಹೆಚ್ಚು ಪೂರಕ ಎಂದು ತಿಳಿಸಿ, ಜನತೆ ಅದಾಲತ್‌ಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಉಪವಿಭಾಗಾಧಿಕಾರಿ ಡಾ.ಹೆಚ್.ಪಿ.ಮೈತ್ರಿ ಮಾತನಾಡಿ, ಸಾರ್ವಜನಿಕರು ಅದಾಲತ್‌ಗಳ ಪ್ರಯೋಜನ ಪಡೆಯಲು ಮನಸ್ಸು ಮಾಡಬೇಕು. ಸಮಾಜದಲ್ಲಿ ಶಾಂತಿ ನೆಲಸಲು ಇದು ಸಹಕಾರಿಯಾಗಿದೆ. ಗ್ರಾಮಗಳಲ್ಲಿ ಪರಸ್ಪರ ವೈಷಮ್ಯ ಕೊನೆಗೊಳ್ಳಲು ಈ ಪ್ರಯತ್ನ ಶ್ಲಾಘನೀಯವಾಗಿದೆ ಎಂದು ತಿಳಿಸಿದರು.

ನ್ಯಾಯಾಲಯದ ಸೂಚನೆಗೆ ಕಂದಾಯ ಇಲಾಖೆ ಮಾನ್ಯತೆ ನೀಡಿದೆ, ರಾಷ್ಟಿçÃಯ ಅದಾಲತ್ ನಡೆಸುವಾಗ ಉಪವಿಭಾಗಾಧಿಕಾರಿಗಳನ್ಯಾಯಾಲಯದಲ್ಲಿನ ಪ್ರಕರಣಗಳ ಶೀಘ್ರ ಇತ್ಯರ್ಥವೂ ಅಗತ್ಯವಿದ್ದು, ನಾವೂ ಕಂದಾಯ ಅದಾಲತ್‌ಗೆ ಸ್ಪಂದಿಸಿದ್ದು, ಕಕ್ಷಿದಾರರು, ವಕೀಲರು ರಾಜೀ ಸಂಧಾನಕ್ಕೆ ಮುಂದೆ ಬರುತ್ತಿದ್ದಾರೆ ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಮುನೇಗೌಡ ಮಾತನಾಡಿ, ಕಕ್ಷಿದಾರರ ಹಿತ ರಕ್ಷಣೆ ವಕೀಲರ ಜವಾಬ್ದಾರಿಯಾಗಿದೆ. ಆದ್ದರಿಂದ ಕಕ್ಷಿದಾರರ ಮನಃ ಪರಿವರ್ತನೆಗೂ ನಾವು ಪ್ರಯತ್ನ ನಡೆಸಿ ಅವರ ಒಪ್ಪಿಗೆ ಪಡೆದೇ ಈ ರಾಜೀ ಸಂಧಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕಾಗಿದೆ ಎಂದು ತಿಳಿಸಿದರು.

ವಕೀಲರ ಸಂಘದ ಉಪಾಧ್ಯಕ್ಷ ರವೀಂದ್ರಬಾಬು ಸೇರಿದಂತೆ ಹಿರಿಯ ವಕೀಲರು ಹಾಜರಿದ್ದರು.

ಚಿತ್ರ ೧೪ ಕೆ.ಎಲ್.ಆರ್. ೦೪ : ಕೋಲಾರದ ಸಹಾಯಕ ಕಮಿಷನರ್ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಂದಾಐ ಇಲಾಖೆ, ಉಪವಿಭಾಗಾಧಿಕಾರಿಗಳ ಕಚೇರಿ, ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ರಾಷ್ಟಿçÃಯ ಲೋಕ ಅದಾಲತ್‌ನ ಭಾಗವಾಗಿ ನಡೆದ ಕಂದಾಯ ಅದಾಲತ್‌ನಲ್ಲಿ ಕೇಸ್‌ಗಳ ರಾಜೀ ಸಂಧಾನಕ್ಕೆ ಬಂದಿರುವ ಕಕ್ಷಿದಾರರಿಗೆ ಸಲಹೆ ನೀಡಿದ ನ್ಯಾಯಾಧೀಶರು ಮತ್ತು ಉಪವಿಭಾಗಾಧಿಕಾರಿಗಳು.