ನ್ಯೂಸ್

ಓವರ್ ಲೋಡ್ ಆಟೋಗಳಿಗೆ ಪೊಲೀಸರಿಂದ ದಂಡ / ಸಂಚಾರಿ ನಿಯಮಗಳ ಪಾಲನೆ ಮುಂದಾದ ಪೋಲಿಸರು

ವಿಜಯವಾಣಿ ಸುದ್ದಿಜಾಲ ಕೋಲಾರ

ಶಾಲಾ ಕಾಲೇಜು ಬಸ್ ಮತ್ತು ಆಟೋಗಳವರು ಸಾಮರ್ಥ್ಯಕ್ಕೂ ಹೆಚ್ಚು ಮಕ್ಕಳನ್ನು ಇತ್ತೀಚೆಗೆ ತುಂಬಿಸಿಕೊAಡು ಮಕ್ಕಳ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದ ವಾಹನಗಳ ತಪಾಸಣೆ ನಡೆಸಿ ದಂಡ ವಿಧಿಸಲು ಸಂಚಾರಿ ಪೋಲೀಸರು ಮುಂದಾಗಿದ್ದಾರೆ.

ಕೋಲಾರದಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣ ಹೆಚ್ಚಾಗುತ್ತಿದ್ದು, ಸಂಚಾರಿ ಪೋಲೀಸರು ಸಂಚಾರಿ ನಿಮಯಗಳನ್ನು ಪಾಲಿಸುವಂತೆ ಜಾಗೃತಿ ಕಾರ್ಯಕ್ರಮಗಳ ಮೂಲಕ ಎಚ್ಚರಿಕೆ ನೀಡಿದರೂ ಅಗತ್ಯಕ್ಕೂ ಮೀರಿ ಶಾಲಾ ಮಕ್ಕಳನ್ನು ತುಂಬಿಕೊAಡು ಸಂಚರಿಸುತ್ತಿದ್ದ ಆಟೋಗಳನ್ನ ತಡೆದು ದಂಡ ವಿಧಿಸಿ ಎಚ್ಚರಿಕೆ ನೀಡಿ ಬಿಸಿ ಮುಟ್ಟಿಸುತ್ತಿದ್ದಾರೆ.

ಸಂಚಾರಿ ಠಾಣೆಯ ಪಿಎಸ್‌ಐ ಭಾರತಿ ನೇತೃತ್ವದಲ್ಲಿ ಕಾರ್ಯಾಚರಣೆಗೆ ಇಳಿದ ಸಂಚಾರಿ ಪೋಲೀಸರು ನಗರದ ಟೇಕಲ್ ಜಿಗ್‌ಜಾಗ್ ಬಳಿ ಶಾಲಾ ಮಕ್ಕಳನ್ನು ಅಗತ್ಯಕ್ಕೂ ಮೀರಿ ಒಂದು ಆಟೋದಲ್ಲಿ ಏಳರಿಂದ ಹತ್ತು ಮಕ್ಕಳನ್ನು ತುಂಬಿಕೊAಡು ಸಂಚರಿಸುತ್ತಿದ್ದ ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದ್ದಾರೆ.

ಕಾರ್ಯಾಚರಣೆ ನಿರಂತರವಾಗಿ ಮುಂದುವರೆಯಲಿದ್ದು, ಯಾರೆ ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡಿ ಸಂಚರಿಸಿದರು ಅಂತವರ ವಿರುದ್ದ ಕ್ರಮ ಕೈ ಗೊಳ್ಳುವುದಾಗಿ ಸಂಚಾರಿ ಪೋಲೀಸ್ ಠಾಣೆಯ ಪಿಎಸ್‌ಐ ಭಾರತಿ ಎಚ್ಚರಿಕೆ ನೀಡಿದ್ದಾರೆ.

ಇನ್ಮುಂದೆ ಆಟೋದಲ್ಲಿ ಸಾಮರ್ಧ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ಹೋಗಬಾರದು ಒಂದು ವೇಳೆ ಈ ನಿಯಮಗಳನ್ನು ಮೀರಿದರೆ ಸೂಕ್ತ ಕಾನುನು ಕ್ರಮ ಕೈಗೊಳ್ಳಲಾಗುತ್ತದೆ. ಸಂಚಾರಿ ನಿಯಮಗಳನ್ನು ಆಟೊ ಚಾಲಕರು ಪಾಲನೆ ಮಾಡಬೇಕು ಎಂದು ಎಚ್ಚರಿಕೆ ನೀಡಿ ದಂಡ ವಿಧಿಸಿದ್ದಾರೆ.

ವಿಶೇಷ ಕಾರ್ಯಚರಣೆ ವೇಳೆ ಸಂಚಾರಿ ಪೋಲೀಸ್ ಠಾಣೆಯ ಎಎಸ್‌ಐ ರಾಮಚಂದ್ರ ಸಿಬ್ಬಂದಿಗಳಾದ ಶಿವಾನಂದ, ಕುಪೇಂದ್ರ, ಪ್ರಶಾಂತ್ ಗಿರೀಶ್ ಭಾಗವಹಿಸಿದ್ದರು.

ಚಿತ್ರ ೧೪ ಕೆ.ಎಲ್.ಆರ್. ೦೩ : ಸಾಮರ್ಥ್ಯಕ್ಕಿಂತ ಹೆಚ್ಚು ಮಕ್ಕಳನ್ನು ಆಟೋದಲ್ಲಿ ತುಂಬಿಸಿಕೊAಡು ಹೋಗುತ್ತಿದ್ದ ಆಟೋ ಚಾಲಕನಿಗೆ ದಂಡ ವಿಧಿಸಿದ ಪಿ.ಎಸ್.ಐ.ಭಾರತಿ