ಕೆ.ಆರ್.ನಗರದ ಮಧುವನಹಳಿ ಬಡಾವಣೆಯ ರಸ್ತೆಯಲ್ಲಿ ಗುರುವಾರ ಹೊಸದಾಗಿ ನಿರ್ಮಾಣ ಮಾಡಿರುವ ಒಳಚರಂಡಿ ಮ್ಯಾನ್‌ಹೋಲ್. 
ನ್ಯೂಸ್

ಒಳಚರಂಡಿ ಮ್ಯಾನ್‌ಹೋಲ್ ನಿರ್ಮಾಣ

ಕೆ.ಆರ್.ನಗರ: ಕುಶಾಲನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕುಸಿದಿದ್ದ ಒಳಚರಂಡಿಯ ಮ್ಯಾನ್‌ಹೋಲ್‌ಗಳನ್ನು ಕೊನೆಗೂ ಎಚ್ಚೆತ್ತ ಪುರಸಭೆ ಅಧಿಕಾರಿಗಳು ಗುರುವಾರ ದುರಸ್ತಿಪಡಿಸಿದ್ದಾರೆ.


ಪಟ್ಟಣದ ಮಧುವನಹಳ್ಳಿಯ 1ನೇ ವಾರ್ಡ್ ಮತ್ತು 23ನೇ ವಾರ್ಡ್ ವ್ಯಾಪ್ತಿಗೆ ಬರುವ ರಸ್ತೆಯಲ್ಲಿ ಒಳಚರಂಡಿ ಮ್ಯಾನ್‌ಹೋಲ್ ಮುಚ್ಚಳ ಕುಸಿದು ಅಪಾಯಕ್ಕೆ ಆಹ್ವಾನಿಸಿತ್ತು. ಈ ಕುರಿತು ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿಯ ಜು.3ರ ಸಂಚಿಕೆಯಲ್ಲಿ ಕುಸಿದ ಮುಚ್ಚಳ, ಅಪಘಾತ ನಿಚ್ಚಳ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು. ತಡವಾಗಿ ಎಚ್ಚೆತ್ತಕೊಂಡ ಪುರಸಭೆ ಅಧಿಕಾರಿಗಳು ಸಿಬ್ಬಂದಿಗಳನ್ನು ಕಳುಹಿಸಿ ಕುಸಿದಿದ್ದ ಮ್ಯಾನ್‌ಹೋಲ್ ಒಡೆದು ಹಾಕಿ ಹೊಸದಾಗಿ ನಿರ್ಮಾಣ ಮಾಡಿದ್ದಾರೆ.