ನ್ಯೂಸ್

ಒತ್ತಡಗಳಿಂದ ಹೊರಬರಲು ಕ್ರೀಡೆ ಸಹಕಾರಿ

ಸರ್ಕಾರಿ ನೌಕರರು ದೈನಂದಿನ ಒತ್ತಡಗಳಿಂದ ಹೊರಬರಲು ಕ್ರೀಡೆ ಸಹಕಾರಿಯಾಗುವುದರ ಜತೆಗೆ ಮನಸ್ಸಿಗೆ ಉಲ್ಲಾಸ ನೀಡುತ್ತದೆ ಎಂದು ಜಿಲ್ಲಾಧಿಕಾರಿ ಡಾ.ಲಕ್ಷ್ಮೀಕಾಂತ ರೆಡಿ ್ಡ ತಿಳಿಸಿದರು.

ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮೈಸೂರು ಸಹಯೋಗದಲ್ಲಿ ಆಯೋಜಿಸಿರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಕಿ ್ರೀಡಾಕೂಟ ಹಾಗೂ ನರೇಗಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ವತಿಯಿಂದ ಇಷ್ಟು ಅಚು ್ಚಕಟ್ಟಾಗಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಎಲ್ಲರೂ ಕ್ರೀಡಾ ಮನೋಭಾವದಿಂದ ಕ್ರೀಡಾಕೂಟದಲ್ಲಿ ಭಾಗಿಯಾಗಿ. ಗೆಲುವು-ಸೋಲಿನ ಬಗ್ಗೆ ಯಾರೂ ಚಿಂತಿಸಬೇಡಿ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯತ್ರಿ ಮಾತನಾಡಿ, ಕ್ರೀಡೆಯಿಂದ ಹುರುಪು ಹೆಚ್ಚಾಗುತ್ತದೆ. ಎಲ್ಲರೂ ಒಟ್ಟಾಗಿ ಸೇರಿರುವುದರಿಂದ ಜೀವನ ಉತ್ಸಾಹವನ್ನು ಹೆಚ್ಚಿಸುತ್ತ್ತದೆ. 2 ದಿನಗಳ ಕ್ರೀಡಾಕೂಟದಲ್ಲಿ ಎಲ್ಲೂ ಭಾಗಿಯಾಗಿ ಸಂಭ್ರಮಿಸಿ. ಸ್ಪರ್ಧೆ ಎಲ್ಲ ಕಡೆ ಇರುತ್ತದೆ. ಆದರೆ ಇಷು ್ಟ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸುವುದೇ ಗೆಲುವು. ಆರೋಗ್ಯಕರ ಸ್ಪರ್ಧೆ ಎಲ್ಲರಲ್ಲಿಯೂ ಇರಬೇಕು. ಕ್ರೀಡಾಪಟಗಳು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಬೇಕು. ಈ ಕಿ ್ರೀಡಾಕೂಟ ಯಶಸ್ವಿಯಾಗಲಿ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಉಪಕಾರ್ಯದರ್ಶಿ ಕೃಷ್ಣಂರಾಜು, ಸವಿತಾ ಗಿರಿಧರ್,ರುಕ್ಮಾಂಗದ, ವಿಜಯಲಕ್ಷ್ಮಿ, ಲಾವಣ್ಯ ಇದ್ದರು.

ಚಿತ್ರ ಸಂಖ್ಯೆ...15

*ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ಕಿ ್ರೀಡಾಕೂಟವನ್ನು ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡಿ ್ಡ ಉದ್ಘಾಟಿಸಿದರು. ಕೆ.ಎಂ.ಗಾಯತ್ರಿ, ವಿಷ್ಣುವರ್ಧನ್, ಪ್ರಭುಸ್ವಾಮಿ, ಕೃಷ್ಣಂರಾಜು ಇದ್ದರು.