ಎನ್.ಆರ್.ಪುರದಲ್ಲಿ ನಡೆದ ರೋಟರಿ 6ರ ವಲಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪದಲ್ಲಿ ಬಿ.ಸಿ.ಗೀತಾ ಅವರನ್ನು ಸನ್ಮಾನಿಸಲಾಯಿತು. ಜಿ.ಆರ್.ದಿವಾಕರ, ಎಚ್.ವಿ.ಮಂಜುನಾಥ್, ಮಧು ವೆಂಕಟೇಶ್, ಇದ್ದರು. 
ನ್ಯೂಸ್

ಒಗ್ಗೂಡಿ ಕೆಲಸ ಮಾಡಿದರೆ ಸಂಸ್ಥೆಯ ಪ್ರಗತಿ

ಎನ್.ಆರ್.ಪುರ: ಹಳೇ ಬೇರು ಹೊಸ ಚಿಗರು ಎಂಬಂತೆ ರೋಟರಿ ಕ್ಲಬ್‌ನ ಹಿರಿಯ ಹಾಗೂ ಕಿರಿಯ ಸದಸ್ಯರು ಒಗ್ಗೂಡಿ ಕೆಲಸ ಮಾಡುತ್ತಿರುವುದರಿಂದ ಸಂಸ್ಥೆ ಉತ್ತಮ ಪ್ರಗತಿ ಸಾಧಿಸುತ್ತಿದೆ ಎಂದು ರೋಟರಿ 3182ರ ಮಾಜಿ ಜಿಲ್ಲಾ ಗರ್ವನರ್ ಬಿ.ಸಿ.ಗೀತಾ ತಿಳಿಸಿದರು.

ಸಿಂಸೆಯಲ್ಲಿ ಏರ್ಪಡಿಸಿದ್ದ ರೋಟರಿ 6ರ ವಲಯ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಸ್ನೇಹ ವೃದ್ಧಿಯಾಗುತ್ತದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ರೋಟರಿ ಸೌಲಭ್ಯಗಳನ್ನು ತಲುಪಿಸುತ್ತಿದೆ ಎಂದರು.

ಎನ್.ಆರ್.ಪುರ ರೋಟರಿ ಸಂಸ್ಥೆ ಅಧ್ಯಕ್ಷ ಜಿ.ಆರ್.ದಿವಾಕರ ಮಾತನಾಡಿ, ಕಲೆ ಅನಾವರಣಗೊಳ್ಳಲು ರೋಟರಿ ವೇದಿಕೆ ಕಲ್ಪಿಸಿದೆ ಎಂದರು. ಸಭೆಯಲ್ಲಿ ಎಚ್.ವಿ.ಮಂಜುನಾಥ್, ವಲಯ ಸೇನಾನಿ ರೇಖಾ ಉದಯಶಂಕರ್, ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿ ಅಧ್ಯಕ್ಷ ಧನಂಜಯ್, ರೋಟರಿ ಕ್ಲಬ್ ಕಾರ್ಯದರ್ಶಿ ಮಧು ವೆಂಕಟೇಶ್, ವಲಯ ಸಾಂಸ್ಕೃತಿಕ ಸಂಯೋಜಕ ಎಲ್.ಡಿ.ನವೀನ್, ಎಚ್.ಡಿ.ವಿನಯ್, ರೋಟರಿ ಕ್ಲಬ್ ಪದಾಧಿಕಾರಿಗಳಾದ ಕಣಿವೆ ವಿನಯ, ಎಸ್.ಎಸ್.ಶಾಂತಕುಮಾರ್, ಡಿ.ಸಿ.ದಿವಾಕರ, ಬಿ.ಟಿ.ವಿಜಯಕುಮಾರ್, ವಿದ್ಯಾನಂದ ಕುಮಾರ್, ಎಂ.ಆರ್.ಸುಂದರೇಶ್ ಮತ್ತಿತರರಿದ್ದರು.