ವಿಜಯವಾಣಿ ಸುದ್ದಿಜಾಲ ಕೋಲಾರ
ಮನೆ ನಿರ್ಮಾಣದ ೯ ಇಂಚು ಮೇಲ್ಛಾವಣಿ ವಿಷಯಕ್ಕಾಗಿ ಅತ್ತೆ ಮಕ್ಕಳಿಂದಲೇ ಕೋಲಾರ ನಗರದ ಇದ್ರೀಸಾಬ್ ಮೊಹಲ್ಲಾ ದ ನಿವಾಸಿ ಮುಜಮಿಲ್ ಪಾಷ (೧೮) ಬರ್ಬರವಾಗಿ ಕೊಲೆಯಾಗಿದ್ದಾನೆ.
ಇದ್ರಿಸಾಬ್ ನಗರದಲ್ಲಿ ಮುಜಮಿಲ್ ಪಾಷ ರವರು ಮನೊಯೊಂದನ್ನು ನಿರ್ಮಾಣ ಮಾಡುತ್ತಿದ್ದರು. ಮೇಲ್ಛಾವಣಿಯ ೯ ಇಂಚು ಜಾಗ ಒತ್ತುವರಿಯಾಗಿದೆ ಎಂದು ಅತ್ತೆ ಮಕ್ಕಳು ಜಗಳ ತೆಗೆದಿದ್ದರು. ಈ ವಿಷಯ ಪೋಲಿಸ್ ಠಾಣೆ ಹಾಗೂ ಕೋರ್ಟು ಮೆಟ್ಟಿಲು ಏರಿ ವಿವಾದ ಮುಜಮಿಲ್ ಪಾಷ ರವರ ಪರವಾಗಿ ತೀರ್ಪು ಆಗಿತ್ತು.
ಇದರಿಂದ ಕುಪಿತಗೊಂಡ ಸೈಯದ್ ಫಿರ್‌ದೂಸ್ ಪಾಷ, ರೋಷಿತ್ ಜಮೀರ್, ಮೊಹಮ್ಮದ್ ರಬಿ ಇವರು ಸೋಮವಾರ ಸಂಜೆ ಮುಜಮಿಲ್ ಪಾಷ ಶಹೀದ್ ನಗರ ಬಳಿಯ ಟೀ ಹೋಟೆಲ್ ಬಳಿ ನಡೆದು ಬರುತ್ತಿದ್ದಾಗ ಈ ಮೂರು ಜನ ಚಾಕುವಿನಿಂದ ಮುಜಮಿಲ್ ಪಾಷ ವನ್ನು ಐದಾರು ಬಾರಿ ಇರಿದಿದ್ದಾರೆ.
ಟೀ ಹೋಟೆಲ್ ಅಡಗಿ ಕುಳಿತರು ಬಿಡದೆ ಮತ್ತೆ ಚಾಕುವಿನಿಂದ ಇರಿದು ತೀವ್ರ ಗಾಯಗೊಳಿಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮುಜಮಿಲ್ ಪಾಷರನ್ನು ಸ್ನೇಹಿತನ ಸಹಾಯದಿಂದ ಜಾಲಪ್ಪ ಆಸ್ಪತ್ರೆಗೆ ಸಾಗಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ನಗರ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ.
ಚಿತ್ರ ೧೯ ಕೆ.ಎಲ್.ಆರ್. ೦೧ : ಕೊಲೆಯಾದ ಮುಜಮಿಲ್ ಪಾಷ ಭಾವಚಿತ್ರ