ನ್ಯೂಸ್

ಒಂದು ವಾರದಗೊಳಗಾಗಿ ಮುಖ್ಯಮಂತ್ರಿ ಮತ್ತು ಸರ್ಕಾರ ಪಥನಗೊಳ್ಳಲಿದೆ / ಕಾಂಗ್ರೇಸ್ ದಲಿತರ ಚರ್ಮ ತೆಗೆದು ಚಪ್ಪಲಿ ಮಾಡಿಕೊಂಡಿದೆ / ಛಲವಾದಿ ನಾರಾಯಣಸ್ವಾಮಿ

ವಿಜಯವಾಣಿ ಸುದ್ದಿಜಾಲ ಕೋಲಾರ
ಸಂವಿಧಾನ ಮತ್ತು ದಲಿತರ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದ ಕಾಂಗ್ರೇಸ್ ಸರ್ಕಾರ ದಲಿತರ ಚರ್ಮ ತೆಗೆದು ಚಪ್ಪಲಿ ಮಾಡಿಕೊಂಡು ಓಡಾಡುತ್ತಿದ್ದಾರೆ. ಕಾಂಗ್ರೇಸ್ ಸರ್ಕಾರದ ಭ್ರಷ್ಟಾಚಾರಗಳ ವಿರುದ್ಧ ಬಿಜೆಪಿ ಪಾದಯಾತ್ರೆ ಮುಗಿಸುವಷ್ಟರಲ್ಲಿ ಕಾಂಗ್ರೇಸ್ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧಿಕಾರದಲ್ಲಿ ಇರುವುದಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಭವಿಷ್ಯ ನುಡಿದರು.

ನಗರದ ಬಿಜೆಪಿ ಕಛೇರಿಯಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಿದ್ಧರಾಮಯ್ಯನವರ ಭವಿಷ್ಯ ರಾಜ್ಯಪಾಲರ ಅಂಗಳದಲ್ಲಿ ಇದೆ. ಒಂದು ವಾರದಲ್ಲಿ ಅವರ ಭವಿಷ್ಯ ನಿರ್ಧಾರವಾಗಲಿದೆ. ಸರ್ಕಾರವು ಬೀಳಲಿದೆ ಎಂದರು.

ವಾಲ್ಮೀಕಿ ಹಗರಣ ಆಗಿದೆ ಎಂದು ಸಿದ್ಧರಾಮಯ್ಯನವರೇ ಒಪ್ಪಿಕೊಂಡಿದ್ದಾರೆ. ಹೀಗಿರುವಾಗ ಅವರು ರಾಜೀನಾಮೆ ನೀಡಬೇಕಾಗಿತ್ತು. ಹಗರಣದಲ್ಲಿ ನಡೆದಿರುವ ಹಣ ವಾಪಸ್ಸು ತರುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಕಳ್ಳ ಕಳ್ಳತನ ಮಾಡಿದ ಮೇಲೆ ನನ್ನ ಕೇಸು ಹಾಕಬೇಡಿ, ವಾಪಸ್ಸು ನೀಡುತ್ತೇನೆ ಎಂದರೆ ಯಾರಾದರೂ ಒಪ್ಪುತ್ತಾರಾ. ದಲಿತರ ಅಭಿವೃದ್ಧಿಗೆ ಸೇರಬೇಕಾಗಿದ್ದ ಹಣ ವೈನ್ ಶಾಪ್‌ಗಳಲ್ಲಿ, ಬಂಗಾರದ ಅಂಗಡಿಗಳಿಗೆ ಸೇರಿದೆ. ದಲಿತರಿಗೆ ೫೨ ಸಾವಿರ ಕೋಟಿ ಹಣವನ್ನ ಖಜಾನೆಯಿಂದ ಬಿಡುಗಡೆ ಮಾಡಿದ ಮೇಲೆ ೨೫ ಕೋಟಿ ಯಾಕೆ ತೆಗೆದಿರಿ ಎಂದು ಪ್ರಶ್ನಿಸಿದರು.

ದಲಿತರನ್ನು ಉದ್ಧಾರ ಮಾಡುವುದು, ಸಂವಿಧಾನವನ್ನು ರಕ್ಷಿಸುವುದು ನಾವೇ ಎಂದು ಗ್ಯಾರಂಟಿಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು, ದಲಿತರ ಅಭಿವೃದ್ಧಿ ಹಣವನ್ನು ಗ್ಯಾರಂಟಿಗಳ ಮೂಲಕ ನೀಡುವ ಕೆಲಸ ಮಾಡುತ್ತಿದ್ದೀರಿ. ದಲಿತರ ಮೇಲೆ ನಿಮಗೆ ಕಾಳಜಿ ಇದೆಯೇ? ದಲಿತರ ಹೆಸರು ಹೇಳಿಕೊಳ್ಳಲು ನೈತಿಕತೆ ಕಾಂಗ್ರೇಸ್ ಸರ್ಕಾರಕ್ಕೆ ಇಲ್ಲ ಎಂದು ಆರೋಪಿಸಿದರು.

ಬಿಜೆಪಿ ಸರ್ಕಾರದಲ್ಲಿ ಅಕ್ರಮಗಳು ನಡೆದಿವೆ ಎಂದು ಹೇಳುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ಬೆದರಿಕೆಗೆ ಹೆದರುವವರಲ್ಲ. ಇದರಿಂದ ಬಿಜೆಪಿ ಪಾದಯಾತ್ರೆ ನಿಲ್ಲುತ್ತದೆ ಎಂದು ಭಾವಿಸಿರಬಹುದು. ನಮ್ಮ ಹೋರಾಟ ಉಗ್ರ ರೂಪದಲ್ಲಿ ನಡೆಯುತ್ತದೆ. ಗ್ಯಾರಂಟಿಗಳ ಹೆಸರಿನಲ್ಲಿ ಬಿಜೆಪಿ ಯೋಜನೆಗಳನ್ನು ನಿಲ್ಲಿಸಿದ್ದೀರಿ. ಕಾಂಗ್ರೇಸ್ ಸರ್ಕಾರವನ್ನು ಮನೆಗೆ ಕಳುಹಿಸುವ ತನಕ ನಮ್ಮ ಹೋರಾಟ ಮುಂದುವರೆಯುತ್ತದೆ. ಕೆಲವೇ ದಿನಗಳಲ್ಲಿ ಸರ್ಕಾರ ಪಥನವಾಗಲಿದೆ ಎಂದರು.

ಮೂಡಾ ಹಗರಣ :
ಮುಡಾದಲ್ಲಿ ಅಕ್ರಮವಾಗಿ ನಿವೇಶನ ಪಡೆಯುಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಯಶಸ್ವಿಯಾಗಿದ್ದಾರೆ. ದಲಿತರ ಜಮೀನನ್ನು ಅಕ್ರಮವಾಗಿ ಪಡೆದು ಮುಡಾ ಮೂಲಕ ನಿವೇಶನ ಪಡೆದಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಹಳೆಯ ದಾಖಲೆಗಳನ್ನು ತಿದ್ದಿ ಮುಡಾಗೆ ನೀಡಿ, ಹಿಂದೆ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ತಮಗೆ ಬೇಕಾದವರನ್ನು ಮುಡಾ ಅಧ್ಯಕ್ಷರನ್ನಾಗಿ ಮಾಡಿಸಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ೫೦.೫೦ ಅನುಪಾತದಲ್ಲಿ ೧೪ ನಿವೇಶನಗಳನ್ನು ಅಕ್ರಮವಾಗಿ ಪಡೆದಿದ್ದಾರೆ. ಜಿಲ್ಲಾಧಿಕಾರಿಗಳು ಸಮಜಾಯಿಷಿ ಕೇಳಿ ೧೪ ನೋಟೀಸ್ ನೀಡಿದ ಕಾರಣ ಅವರನ್ನು ವರ್ಗಾವಣೆ ಮಾಡಿಸಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಿವೇಶನಗಳನ್ನು ನೀಡಿರುವುದು ಎಂದು ಸಮಜಾಯಿಷಿಕೊಳ್ಳಲು ಹೊರಟಿದ್ದಾರೆ. ಮಾಡಿದ ತಪ್ಪನ್ನು ಒಪ್ಪಿಕೊಳ್ಳದೆ ಹಗರಣವನ್ನು ಮರೆಮಾಚಲು ಹೊರಟಿದ್ದಾರೆ. ಯಾವುದೇ ಕಾರಣಕ್ಕೂ ಹಗರಣದ ಮುಖ್ಯಮಂತ್ರಿ ಮತ್ತು ಅವರ ಕುಟುಂಬ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.

ಮುಖ್ಯಮಂತ್ರಿಗಳು ವಕೀಲರಲ್ಲವೇ ಎಂಬ ಮಾಧ್ಯಮದವರ ಪ್ರಶ್ನೆಗೆ ಅವರು ಸಂಡೇ ವಕೀಲರು, ಮಂಡೇ ವಕೀಲರಲ್ಲ. ಅಹಿಂದ ದಲಿತ ನಾಯಕ ಎಂದು ಹೇಳಿಕೊಳ್ಳುತ್ತಿದ್ದ ಮುಖ್ಯಮಂತ್ರಿಗಳು ದಲಿತರಿಗೆ ಮೋಸ ಮಾಡಲು ಹೊರಟಿರುವುದು ಅವರ ನಿಜವಾದ ಮುಖವಾಡ. ಮುಡಾ ಹಗರಣ, ವಾಲ್ಮೀಕಿ ಹಗರಣದಲ್ಲಿ ಕಳಚಿಕೊಂಡAತಾಗಿದೆ ಎಂದರು.

ಬಾಕ್ಸ್
ಕಾಂಗ್ರೇಸ್ ಪಕ್ಷದಲ್ಲಿ ೪೦ ವರ್ಷಗಳ ಕಾಲ ದುಡಿದೆ. ನನ್ನ ಪ್ರಾಮಾಣಿಕತೆ ಮತ್ತು ಬದ್ಧತೆಯನ್ನು ಗುರ್ತಿಸಲಿಲ್ಲ. ಬಿಜೆಪಿ ಗುರ್ತಿಸಿ ನನ್ನನ್ನು ಎಂ.ಎಲ್.ಸಿ. ಮಾಡಿ ಪರಿಷತ್ತಿನ ವಿಪಕ್ಷ ನಾಯಕನಾಗಿ ಮಾಡಿದ್ದಾರೆ. ಬಿಜೆಪಿ ಪಕ್ಷ ದಲಿತರನ್ನು ಗುರ್ತಿಸುತ್ತದೆ ಎಂಬುದಕ್ಕೆ ನನದೇ ಉದಾಹರಣೆ ಎಂದರು.

ಬಾಕ್ಸ್
ಮುಖ್ಯಮಂತ್ರಿ ಸಿದ್ಧರಾಮಯ್ಯ ಕಳಂಕ ಹೊತ್ತ ರಾಜಕಾರಣಿಯಾಗಿದ್ದಾರೆ. ಅವರು ಕೋಲಾರದಿಂದ ಸ್ಪರ್ಧೇ ಮಾಡಬೇಕೆಂದು ಬಯಸಿದ್ದರು. ಇಲ್ಲಿನ ಜನರ ಹೋರಾಟದ ಸಲುವಾಗಿ ಸದ್ಯಕ್ಕೆ ಕೈತಪ್ಪಿತು. ಅವರು ಇಲ್ಲೇ ಸ್ಪರ್ಧೆ ಮಾಡಿದ್ದರೆ, ಆ ಕಳಂಕ ಕೋಲಾರದ ಬಂಗಾರದAತಹ ಭೂಮಿಗೆ ಅಂಟಿಕೊಳ್ಳುತ್ತಿತ್ತು. ಸದ್ಯಕ್ಕೆ ಕೋಲಾರಕ್ಕೆ ಅಂತಹ ಕಳಂಕ ತಪ್ಪಿಹೋದಂತಾಯಿತು.

ಕೋಟ್
ರಾಜಕಾರಣಕ್ಕೆ ಅನೇಕ ಅಪಾರ್ಥಗಳು ಬಂದಿವೆ. ಹಿಂದೆ ರಾಜನೀತಿ ಇತ್ತು. ಈಗ ರಾಜಕಾರಣ ಎನ್ನುತ್ತಾರೆ. ಇದಕ್ಕೆ ವ್ಯತ್ಯಾಸವಿದೆ. ರಾಜನೀತಿಗೆ ನೀತಿ, ತತ್ವ, ಸಿದ್ಧಾಂತಗಳು ಇದ್ದವು. ರಾಜಕಾರಣಕ್ಕೆ ಅವು ಇಲ್ಲದಂತಾಗಿದೆ. ರಾಜಕಾರಣ ವ್ಯವಸ್ಥೆಯನ್ನೇ ಕೆಡಿಸುವಂತಾಗಿದೆ. ಅಂಬೇಡ್ಕರ್ ಸಿದ್ಧಾಂತಗಳ ಅಡಿಯಲ್ಲಿ ಬಂದಿದ್ದೇನೆ. ಶೋಷಿತರ ಪರವಾಗಿ ಧ್ವನಿಯೆತ್ತುವ ಕೆಲಸ ಮಾಡಲಾಗುವುದು.

-ಛಲವಾದಿ ನಾರಾಯಣಸ್ವಾಮಿ

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಮಾಜಿ ಶಾಸಕರಾದ ಎಂ.ನಾರಾಯಣಸ್ವಾಮಿ, ವೈ.ಸಂಪAಗಿ, ಮಂಜುನಾಥ ಗೌಡ, ಬಿ.ಪಿ.ವೆಂಕಟಮುನಿಯಪ್ಪ, ಜಿಲ್ಲಾ ವಕ್ತಾರ ಎಸ್.ಬಿ.ಮುನಿವೆಂಕಟಪ್ಪ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಪ್ಪಿರಾಜು, ಪ್ರಕೋಷ್ಟಗಳ ಸಂಚಾಲಕ ಮಾಗೇರಿ ನಾರಾಯಣಸ್ವಾಮಿ, ರಾಜ್ಯ ಮಹಿಳಾ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯೆ ಮಮತಮ್ಮ, ಕಪಾಲಿ ಶಂಕರ್, ಕೆಂಬೋಡಿ ನಾರಾಯಣಸ್ವಾಮಿ, ಕೃಷ್ಣಪ್ಪ, ಮಹೇಶ್, ರಾಜೇಶ್ ಸಿಂಗ್ ಮುಂತಾದವರಿದ್ದರು.

ಚಿತ್ರ ೦೨ ಕೆ.ಎಲ್.ಆರ್. ೦೪ : ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಮಾಜಿ ಶಾಸಕರಾದ ಎಂ.ನಾರಾಯಣಸ್ವಾಮಿ, ವೈ.ಸಂಪAಗಿ ಮುಂತಾದವರಿದ್ದರು.