ನ್ಯೂಸ್

ಐ.ಎ.ಎಸ್ ಮತ್ತು ಕೆ.ಎ.ಎಸ್ ಪರೀಕ್ಷೆಗಳಿಗೆ ತರಬೇತಿ ಅವಧಿ ವಿಸ್ತರಣೆ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಕೇಂದ್ರ ಲೋಕ ಸೇವಾ ಆಯೋಗದವರು ನಡೆಸಲಿರುವ ಐ.ಎ.ಎಸ್ ಹಾಗೂ ಕರ್ನಾಟಕ ಲೋಕ ಸೇವಾ ಆಯೋಗದವರು ನಡೆಸಲಿರುವ ಕೆ.ಎ.ಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 50 ದಿನಗಳ ತರಬೇತಿಯನ್ನು ಮೈಸೂರಿನ ಕೇಂದ್ರ ಕಛೇರಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ.

 ಆಸಕ್ತರು ಅಭ್ಯರ್ಥಿಗಳು ಏಪ್ರಿಲ್ 09 ರೊಳಗಾಗಿ ಬೆಳಗ್ಗೆ 10 ಗಂಟೆಯಿoದ ಸಂಜೆ 4 ಗಂಟೆಯ ವರೆಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ದೂ.ಸಂ: 0821-2515944 ನ್ನು ಸಂಪರ್ಕಿಸಬಹುದು ಎಂದು ಕರಾಮುವಿ ಕುಲಸಚಿವರಾದ ಪ್ರೊ. ಕೆ.ಬಿ.ಪ್ರವೀಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.