ನ್ಯೂಸ್

ಏಳು ಸುತ್ತಿನ ಕೋಟೆಗೆ ಪೆರು ದೇಶದ ಭಾರತೀಯ ರಾಯಭಾರಿ ಭೇಟಿ

ಚಿತ್ರದುರ್ಗ: ಐತಿಹಾಸಿಕ ಪ್ರಸಿದ್ಧ ನಗರದ ಏಳು ಸುತ್ತಿನ ಕೋಟೆಗೆ ಗುರುವಾರ ಭೇಟಿ ನೀಡಿದ ಪೆರು ದೇಶದ ಭಾರತೀಯ ರಾಯಭಾರಿ ವಿಶ್ವಾಸ್ ವಿದು ಸಪಕಲ್ ಅವರು ಕೋಟೆ ಭವ್ಯತೆಯನ್ನು ಕಣ್ತುಂಬಿಕೊಂಡರು.

ಹೊಸಪೇಟೆಯಿಂದ ಬೆಂಗಳೂರಿಗೆ ತೆರಳುವ ಮಾರ್ಗದಲ್ಲಿ ಬೆಳಗ್ಗೆ 11ರ ಹೊತ್ತಿಗೆ ಕುಟುಂಬ ಸದಸ್ಯರೊಂದಿಗೆ ನಗರಕ್ಕೆ ಆಗಮಿಸಿ ಮಧ್ಯಾಹ್ನ 1.30 ರವರೆಗೂ ಕೋಟೆಯನ್ನು ವೀಕ್ಷಿಸಿದರು. ಮೇಲುಕೋಟೆ ಮುರುಘಾಮಠ, ಸಂಪಿಗೆ ಸಿದ್ದೇಶ್ವರಸ್ವಾಮಿ ದೇವಾಲಯ,ನವೀಕೃತ ಏಕನಾಥೇಶ್ವರಿ ದೇವಾಲಯ ಮತ್ತಿತರ ಸ್ಥಳಗಳಿಗೆ ಭೇಟಿ ನೀಡಿ ಮಾಹಿತಿ ಪಡೆದರು.

ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು. ಮಾರ್ಗದರ್ಶಿ ಚಂದ್ರಶೇಖರ್ ವಿವರಿಸಿದರು. ನವೀಕೃತ ಏಕನಾಥೇಶ್ವರಿ ದೇವಾಲಯದ ಕಾ ಮಗಾರಿಗೂ ಸಪಕಲ್ ಮೆಚ್ಚುಗೆ ವ್ಯಕ್ತಪಡಿಸಿದರು. ಎಎಸ್‌ಐ, ಎಸ್‌ಎಎಸ್ ಸಿಬ್ಬಂದಿ, ಪ್ರವಾಸೋದ್ಯಮ ಇಲಾಖೆ ಪ್ರವಾಸಿ ಮಿತ್ರರು ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣೆ ಅಧಿಕಾರಿ, ಸಿಬ್ಬಂದಿ ವರ್ಗ ರಾಯಭಾರಿಯನ್ನು ಸ್ವಾಗತಿಸಿ, ಬೀಳ್ಕೊಟ್ಟಿತು.

ಸಪಕಲ್ ಪತ್ನಿ ಡಾ.ಅನಿತಾ, ಪುತ್ರರು ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣೆ ಸಹಾಯಕ ಸಂರಕ್ಷಣಾಧಿಕಾರಿ ಪಿ.ಸುಧೀರ್, ತಹಸೀಲ್ದಾರ್ ಡಾ.ನಾಗವೇಣಿ, ಗ್ರಾಮ ಆಡಳಿತಾಧಿಕಾರಿಗಳಾದ ಶ್ರೀನಿವಾಸ್ ಮತ್ತಿತರರು ಇದ್ದರು.