ನ್ಯೂಸ್

ಏರಿಕೆಯಾಗುತ್ತಿರುವ ಟೊಮೆಟೋ ಬೆಲೆ / ೧೫ ಕೆ.ಜಿ.ಟೊಮೆಟೋ ಬಾಕ್ಸ್ ೭೩೦ ರೂ.ಗಳು / ೧೦೦೦ ಗಡಿ ದಾಟುವ ನಿರೀಕ್ಷೆ

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಕಳೆದ ೬ ತಿಂಗಳಿAದ ಟೊಮೆಟೋಗೆ ಸತತ ಬೆಲೆ ಕುಸಿತದಿಂದ ಕಂಗಾಲಾಗಿದ್ದ ರೈತರಿಗೆ ಕಳೆದ ಒಂದು ವಾರದಿಂದ ದಿನೇ ದಿನೇ ಬೆಲೆ ಏರಿಕೆ ಆಗುತ್ತಿರುವುದರಿಂದ ರೈತರು ನಿಟ್ಟುಸಿರು ಬಿಡುವಂತೆ ಆಗಿದೆ. ೧೫ ಕೆ.ಜಿ.ಟೊಮೆಟೋ ಬಾಕ್ಸ್ ಭಾನುವಾರ ಮಾರುಕಟ್ಟೆಯಲ್ಲಿ ೭೩೦ ರೂ.ಗಳ ತನಕ ಮಾರಾಟವಾಗಿದೆ. ೧೦೦೦ ರೂ.ಗಳ ಗಡಿ ದಾಟುವ ನಿರೀಕ್ಷೆಯಿದೆ.

ಕೀಟಭಾದೆ ಮತ್ತು ರೋಗಭಾದೆಗಳಿಂದ ಟೊಮೆಟೋ ಬೆಳೆಗಾರರು ತತ್ತರಿಸಿದ್ದು, ಇರುವ ಫಸಲಿಗೂ ಬೆಲೆ ಬಾರದೆ ಇದ್ದ ಕಾರಣ ರೈತರು ಪಾತಾಳಕ್ಕೆ ಕುಸಿದಿದ್ದರು. ಪ್ರತಿವರ್ಷ ಜೂನ್, ಜುಲೈ ತಿಂಗಳಲ್ಲಿ ಟೊಮೆಟೋಗೆ ಬೇಡಿಕೆ ಹೆಚ್ಚಾಗುತ್ತದೆ. ಬೆಲೆಯೂ ಹೆಚ್ಚಾಗುತ್ತದೆ ಎಂದು ಜಿಲ್ಲೆಯ ರೈತರು ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೋ ಬೆಳೆಯನ್ನು ಬೆಳೆದಿದ್ದರು.

ರೋಗ ಮತ್ತು ಕೀಟಭಾದೆ ನಡುವೆಯೂ ಉತ್ತಮ ಗುಣಮಟ್ಟದ ಟೊಮೆಟೋ ಫಸಲನ್ನು ಬೆಳೆದಿದ್ದರು. ಎರಡು ತಿಂಗಳಲ್ಲಿ ಬೆಲೆ ಇಲ್ಲದ ಕಾರಣ ತೋಟಗಳಲ್ಲಿಯೇ ಕೀಳದೆ ಬಿಡುವಂತಾಯಿತು. ಮಾರುಕಟ್ಟೆಗೆ ತಂದ ಟೊಮೆಟೋ ಬಿಕರಿಯಾಗದೆ ರಸ್ತೆಗಳಲ್ಲಿ ಸುರಿಯುವಂತೆ ಆಯಿತು. ಫಸಲು ಮುಗಿದಿರುವ ಹಂತದಲ್ಲಿ ಕಳೆದ ಒಂದು ವಾರದಿಂದ ಬೆಲೆ ತುಸು ಏರಿಕೆಯಾಗುತ್ತಾ ಬಂದಿತು. ಶನಿವಾರ ಮತ್ತು ಭಾನುವಾರ ೧೮ ಕೆ.ಜಿ. ಬಾಕ್ಸ್ ೨೫೦ ರೂ.ಗಳಿಂದ ೭೦೦ ತನಕ ಮಾರಾಟವಾಗಿದೆ.

ಉತ್ತರ ಭಾರತದಲ್ಲಿ ಮಳೆ ಸುರಿಯುತ್ತಿರುವುದರಿಂದ ಟೊಮೆಟೋಗೆ ಬೇಡಿಕೆ ಹೆಚ್ಚಾಗಿದೆ. ಕೋಲಾರ ಮಾರುಕಟ್ಟೆಯಿಂದ ಕಳೆದ ಒಂದು ವಾರದಿಂದ ಬಾಂಗ್ಲಾದೇಶ ಸೇರಿದಂತೆ ಉತ್ತರ ಭಾರತದ ರಾಜ್ಯಗಳಿಗೆ ರಫ್ತಾಗುತ್ತಿರುವುದರಿಂದ ಬೇಡಿಕೆ ಹಾಗೂ ಬೆಲೆಯೂ ಹೆಚ್ಚಾಗಿದೆ. ಕೋಲಾರ ಮಾರುಕಟ್ಟೆಗೆ ಜಿಲ್ಲೆಯ ಟೊಮೆಟೋ ಕಡಿಮೆಯಾದರೂ ಚಿತ್ರದುರ್ಗ, ಆಂಧ್ರ ಪ್ರದೇಶದ ಗುಣಮಟ್ಟದ ಟೊಮೆಟೋ ಬರುತ್ತಿರುವುದರಿಂದ ಬೆಲೆಯೂ ಹೆಚ್ಚಾಗುತ್ತಿದೆ.

ಉತ್ತರ ಭಾರತದಲ್ಲಿ ಮಳೆ ಮುಂದುವರೆದು ಕೋಲಾರ ಜಿಲ್ಲೆಯಲ್ಲಿ ಮೋಡ ಮುಚ್ಚಿದ ವಾತಾವರಣ ತಿಳಿಯಾಗಿ ಬಿಸಿಲು ಬಂದರೆ ಮಾರುಕಟ್ಟೆಗೆ ಮತ್ತಷ್ಟು ಗುಣಮಟ್ಟದ ಟೊಮೆಟೋ ಬರುವುದರಿಂದ ಬೆಲೆಯೂ ೧೫ ಕೆ.ಜಿ.ಬಾಕ್ಸ್ ೧೦೦೦ ರೂ.ಗಳ ಗಡಿ ದಾಟುವ ನಿರೀಕ್ಷೆ ಇದೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.

ಕೋಟ್

ಕೋಲಾರ ಜಿಲ್ಲೆಯ ಟೊಮೆಟೋ ಗುಣಮಟ್ಟ ಕಡಿಮೆ ಇದೆ. ಚಿತ್ರದುರ್ಗ ಮತ್ತು ಆಂಧ್ರ ಪ್ರದೇಶದಿಂದ ಬರುವ ಟೊಮೆಟೋ ಗುಣಮಟ್ಟದಿಂದ ಕೂಡಿರುವುದರಿಂದ ಬೆಲೆ ಹೆಚ್ಚಾಗುತ್ತಿದೆ. ಜೂನ್ ಮತ್ತು ಜುಲೈ ತಿಂಗಳ ಪ್ರಾರಂಭದಲ್ಲಿ ಬರುತ್ತಿದ್ದ ಟೊಮೆಟೋ ಶೇ.೩೦ ರಷ್ಟು ಕಡಿಮೆಯಾಗಿದೆ. ಕೋಲಾರ ಮಾರುಕಟ್ಟೆಯಿಂದ ಹೊರರಾಜ್ಯ ಮತ್ತು ಹೊರದೇಶಗಳಿಗೂ ರಫ್ತಾಗುತ್ತಿದೆ. ಆದ್ದರಿಂದ ಬೆಲೆಯೂ ಹೆಚ್ಚಾಗಿದೆ.

-ಮುನೇಗೌಡ, ಎಂ.ಎನ್.ಆರ್.ಮAಡಿ ಮಾಲೀಕ.

ಕೋಟ್

ಚಿತ್ರದುರ್ಗ ಮತ್ತು ಆಂಧ್ರಪ್ರದೇಶಗಳಲ್ಲಿ ಉಷ್ಣಾಂಶ ಹೆಚ್ಚಾಗಿರುವ ಕಾರಣ ಅಲ್ಲಿ ಉತ್ತಮ ಫಸಲು ಬೆಳೆಯಲು ಉತ್ತಮ ವಾತಾವರಣವೂ ಇದೆ. ಕೋಲಾರ ಜಿಲ್ಲೆಯಲ್ಲಿ ರೋಗ ರುಜಿನಗಳು ಹೆಚ್ಚಾಗಿವೆ. ಸುಮಾರು ವರ್ಷಗಳಿಂದ ಟೊಮೆಟೋ ಬೆಳೆಗಳನ್ನು ಹೆಚ್ಚಾಗಿ ಮಾಡುತ್ತಿರುವುದರಿಂದ ಭೂಮಿ ಫಲವತ್ತತೆ ಕಳೆದುಕೊಂಡಿದೆ. ಕೋಲಾರ ಜಿಲ್ಲೆಯಲ್ಲಿ ಟೊಮೆಟೋ ಹೆಚ್ಚಾಗಿ ಬೆಳೆಯುತ್ತಿರುವುದರಿಂದ ವೈರಸ್‌ಗಳು ತೋಟದಿಂದ ತೋಟಕ್ಕೆ ಹರಡುತ್ತವೆ. ಇದರಿಂದ ಗುಣಮಟ್ಟದ ಟಮೆಟೋ ಬೆಳೆಯಲು ಸಾಧ್ಯವಾಗುತ್ತಿಲ್ಲ. ಆದರೂ ಕಷ್ಟಪಟ್ಟು ಬೆಳೆದ ಫಸಲಿಗೆ ಬೆಲೆ ಇಲ್ಲದಂತೆ ಆಗಿದೆ. ಫಸಲು ಖಾಲಿಯಾದ ಕೊನೆಯಲ್ಲಿ ಬೆಲೆ ಏರಿಕೆಯಾಗುತ್ತಿದೆ. ಕೋಲಾರ ಜಿಲ್ಲೆಯ ರೈತರ ಹಣೆಬರಹವೇ ಈ ರೀತಿಯಾಗಿದೆ.

-ಮಂಜು, ರೈತ, ತರ‍್ನಹಳ್ಳಿ

ಚಿತ್ರ ೨೭ ಕೆ.ಎಲ್.ಆರ್. ೦೪ : ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೋ ಬಾಕ್ಸ್

ಚಿತ್ರ ೨೭ ಕೆ.ಎಲ್.ಆರ್. ೦೪ಎ : ಮುನೇಗೌಡ, ಎಂ.ಎನ್.ಆರ್.ಮAಡಿ ಮಾಲೀಕ ಭಾವಚಿತ್ರ

ಚಿತ್ರ ೨೭ ಕೆ.ಎಲ್.ಆರ್. ೦೪ಬಿ : ಮಂಜು, ರೈತ, ತರ‍್ನಹಳ್ಳಿ ರವರ ಭಾವಚಿತ್ರ