ನ್ಯೂಸ್

ಏರಿಕೆ ಕಾಣದ ಟೊಮೆಟೋ ಬೆಲೆ / ಆತಂಕದಲ್ಲಿ ರೈತರು / ೧೫ ಕೆ.ಜಿ. ಟೊಮೆಟೋ ಬಾಕ್ಸ್ ೨೫೦ ರೂ.ಗಳಿಗೆ ಮಾರಾಟ / ಉತ್ತಮ ಬೆಲೆಯ ನಿರೀಕ್ಷೆಯಲ್ಲಿ ರೈತರು

ವಿಜಯವಾಣಿ ಸುದ್ದಿಜಾಲ ಕೋಲಾರ

ಕಳೆದ ಒಂದು ತಿಂಗಳಿAದ ಸತತವಾಗಿ ಟೊಮೆಟೋಗೆ ಬೆಲೆ ಏರಿಕೆ ಆಗದ ಕಾರಣ ರೈತರು ಕಂಗಾಲಾಗಿದ್ದು, ಮುಂದಿನ ದಿನಗಳಲ್ಲಾದರೂ ಬೆಲೆ ಬರುತ್ತದೆಂಬ ನಿರೀಕ್ಷೆಯಲ್ಲಿ ರೈತರು ಕಾಯುವಂತೆ ಆಗಿದೆ.

ಕಲ್ಕತ್ತಾ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಮಳೆ ಸುರಿಯುತ್ತಿರುವುದರಿಂದ ಕೋಲಾರ ಮಾರುಕಟ್ಟೆಯಿಂದ ಟೊಮೆಟೋ ರಫ್ತಾಗದ ಕಾರಣ ಟೊಮೆಟೋ ಬೆಲೆ ಕುಸಿಯಲು ಕಾರಣವಾಗಿದೆ. ವಾತಾವರಣದಲ್ಲಿ ಉಂಟಾಗಿರುವ ಏರುಪೇರು ಮತ್ತು ತೇವಾಂಶ ಮತ್ತು ಶೀಥದ ವಾತಾವರಣ ಇರುವುದರಿಂದ ಉತ್ತಮ ಫಸಲು ಇರುವ ಕಾರಣ ಟೊಮೆಟೋ ಮಾರುಕಟ್ಟೆಗೆ ಹೆಚ್ಚಾಗಿ ಬರುತ್ತಿದೆ. ಅದಕ್ಕೆ ತಕ್ಕಂತೆ ರಫ್ತಾಗದ ಕಾರಣ ಬೆಲೆ ಕುಸಿಯಲು ಕಾರಣವಾಗಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಕೋಲಾರ ಎಪಿಎಂಸಿ ಮಾರುಕಟ್ಟೆಯ ಟೊಮೆಟೋ ದೇಶ ವಿದೇಶಗಳಲ್ಲಿ ರಫ್ತಾಗುತ್ತದೆ. ದೇಶದ ವಿವಿಧ ಭಾಗಗಳಿಗೆ ಕೋಲಾರದ ಕೆಂಪು ಸುಂದರಿ ರಫ್ತಾಗುತ್ತದೆ. ಆದರೆ ಈಗ ಮಳೆ ಇರುವ ಕಾರಣ ಆ ಭಾಗಗಳಲ್ಲಿ ಟೊಮೆಟೋ ಬೇಡಿಕೆ ಇದ್ದರೂ ಇಲ್ಲಿಂದ ರಫ್ತಾಗಲು ಅವಕಾಶಗಳು ಕಡಿಮೆ ಇರುವ ಕಾರಣ ಮಾರುಕಟ್ಟೆಯಲ್ಲಿ ಟೊಮೆಟೋ ಬೆಲೆ ಕುಸಿಯಲು ಕಾರಣವಾಗಿದೆ.

ವೈರಸ್ ಕಾಟದ ನಡುವೆಯೂ ರೈತರು ಉತ್ತಮ ಫಸಲನ್ನು ಬೆಳೆಯುತ್ತಿದ್ದಾರೆ. ಇದರ ಜೊತೆಗೆ ಕೋಲಾರ ಜಿಲ್ಲೆಯಲ್ಲದೆ ಚಿತ್ರದುರ್ಗ, ಆಂಧ್ರಪ್ರದೇಶದ ಟೊಮೆಟೋ ಕೋಲಾರ ಮಾರುಕಟ್ಟೆಗೆ ಬರುತ್ತಿರುವುದರಿಂದ ಅಗತ್ಯಕ್ಕಿಂತ ಹೆಚ್ಚು ಸರಕು ಬರುತ್ತಿದ್ದು, ಅದಕ್ಕೆ ತಕ್ಕಂತೆ ರಫ್ತು ಆಗುವುದು ಕಡಿಮೆಯಾಗಿರುವ ಕಾರಣ ಕಳೆದ ಒಂದು ತಿಂಗಳಿAದ ಬೆಲೆ ಇಲ್ಲದೆ ಕುಸಿದಿದೆ.

ಗುಣಮಟ್ಟವಿರುವ ೧೫ ಕೆ.ಜಿ. ಟೊಮೆಟೋ ಬಾಕ್ಸ್ ೨೫೦ ರಿಂದ ೩೦೦ ರೂ.ಗಳ ತನಕ ಮಾರಾಟವಾಗುತ್ತಿದೆ. ಗುಣಮಟ್ಟ ಇಲ್ಲದ ಟೊಮೆಟೋ ೫೦ ರೂ.ಗಳಿಂದ ಮಾರಾಟವಾಗುತ್ತಿರುವುದರಿಂದ ಕೆಲವು ರೈತರು ತೋಟಗಳಲ್ಲಿಯೇ ಬಿಡಿಸುವ ಖರ್ಚು ಬಾರದೆ ಇರುವ ಕಾರಣ ತೋಟಗಳಲ್ಲಿಯೇ ಬಿಟ್ಟಿದ್ದಾರೆ. ಬಿಂಗಿ ಸೇರಿದಂತೆ ವೈರಸ್ ಕಾಟ ಇರುವ ತೋಟಗಳಿಗೆ ಔಷಧಿ ಸಿಂಪಡಣೆ ಮಾಡುವುದನ್ನು ರೈತರು ಬಿಟ್ಟಿದ್ದಾರೆ.

ಬೇಸಿಗೆ ಕಾಲದಲ್ಲಿ ವೈರಸ್ ಕಾಟ ಹೆಚ್ಚಾದ ಕಾರಣ ಮಳೆಗಾಲದಲ್ಲಿ ಉತ್ತಮ ಫಸಲು ತರಬಹುದು ಎಂದು ರೈತರು ಸಾವಿರಾರು ಎಕರೆ ಪ್ರದೇಶಗಳಲ್ಲಿ ಟೊಮೆಟೋ ನಾಟಿ ಮಾಡಿದ್ದು, ಈಗ ಅದು ಫಸಲಿಗೆ ಬಂದಿದೆ. ಆದರೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಆಗದೇ ಇರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಕಳೆದ ನಾಲ್ಕೆöÊದು ದಿನಗಳ ಹಿಂದೆ ದೆಹಲಿ ಮಾರುಕಟ್ಟೆಯಲ್ಲಿ ಟೊಮೆಟೋ ಬೆಲೆ ಏರಿಕೆಯಾಗಿದ್ದ ಸಂದರ್ಭದಲ್ಲಿ ಕೋಲಾರ ಮಾರುಕಟ್ಟೆಯಲ್ಲಿ ೧೫ ಕೆ.ಜಿ. ಟೊಮೆಟೋ ಬಾಕ್ಸ್ ೫೦೦ ರೂ.ಗಳ ತನಕ ಮಾರಾಟವಾಗಿತ್ತು. ಈಗ ಮತ್ತೆ ೨೦೦ ರೂ.ಗಳಿಗೆ ಕುಸಿದಿದೆ.

ಕೋಟ್ :

ಕಲ್ಕತ್ತಾದಲ್ಲಿ ಮಳೆ ಹೆಚ್ಚಾಗಿರುವ ಕಾರಣ ಕೋಲಾರ ಮಾರುಕಟ್ಟೆಯಿಂದ ಟೊಮೆಟೋ ರಫ್ತಾಗುತ್ತಿಲ್ಲ. ಗುಜರಾಜ್, ಒಡಿಸ್ಸಾ, ಉತ್ತರಪ್ರದೇಶ ಗಳಿಗೆ ಸದ್ಯದಲ್ಲಿಯೇ ಟೊಮೆಟೋ ರಫ್ತಾಗುವ ಸಾಧ್ಯತೆ ಇರುವುದರಿಂದ ಇನ್ನು ಮುಂದಿನ ದಿನಗಳಲ್ಲಿ ಉತ್ತಮ ಬೆಲೆ ಬರುವ ನಿರೀಕ್ಷೆ ಇದೆ. ಉತ್ತರ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಮಳೆಯಾಗುತ್ತಿರುವುದರಿಂದ ಕೋಲಾರ ಮಾರುಕಟ್ಟೆಯ ಟೊಮೆಟೋ ರಫ್ತಾಗುತ್ತಿಲ್ಲ. ಅವಕವೂ ಹೆಚ್ಚಾಗಿದೆ. ಆದ್ದರಿಂದ ಬೆಲೆ ಕುಸಿಯಲು ಕಾರಣವಾಗಿದೆ.

-ಮುನೇಗೌಡ ಮಂಡಿ ಮಾಲೀಕ, ಎಪಿಎಂಸಿ, ಕೋಲಾರ.

ಚಿತ್ರ ೨೭ ಕೆ.ಎಲ್.ಆರ್. ೦೨ : ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಇಟ್ಟಿರುವ ಟೊಮೆಟೋ

ಚಿತ್ರ ೨೭ ಕೆ.ಎಲ್.ಆರ್. ೦೨ಎ : ಮುನೇಗೌಡ ಮಂಡಿ ಮಾಲೀಕ, ಎಪಿಎಂಸಿ, ಕೋಲಾರ.