ವಿಜಯವಾಣಿ ಸುದ್ದಿಜಾಲ ಕೋಲಾರ
ಲೋಕಸಭಾ ಸಾರ್ವತ್ರಿಕ ಚುನಾವಣೆ-೨೦೨೪ರ ಸಂಬAಧ ಕೋಲಾರ ಜಿಲ್ಲೆಯ ಎಲ್ಲಾ ೬ ವಿಧಾನಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ ೨೬ ರಂದು ಮತದಾನ ನಡೆಯಲಿರುವುದರಿಂದ ಮುಕ್ತ ಮತ್ತು ನ್ಯಾಯೋಚಿತವಾಗಿ ಚುನಾವಣೆ ನಿರ್ವಹಿಸಲು ಅಂತಹ ಪ್ರದೇಶಗಳಲ್ಲಿ ಯಾವುದೇ ಜಾತ್ರೆ, ಸಂತೆ ಇತ್ಯಾದಿಗಳನ್ನು ನಿಷೇಧಿಸಬೇಕಾಗಿರುವುದರಿಂದ ಹಾಗೂ ಮುಂದೂಡಬೇಕಾಗಿರುವುದರಿAದ ಏಪ್ರಿಲ್ ೨೬ ರಂದು ಜಿಲ್ಲೆಯ ಎಲ್ಲಾ ೬ ವಿಧಾನಸಭಾ ಕ್ಷೇತ್ರಗಳಲ್ಲಿನ ಪ್ರದೇಶಗಳಲ್ಲಿ ನಡೆಯಲಿರುವ ಸಂತೆ, ಜಾತ್ರೆ ಇತ್ಯಾದಿಗಳು ನಡೆಯದಂತೆ ನಿಷೇಧಿಸಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಅಕ್ರಂ ಪಾಷ ಅವರು ಆದೇಶ ಹೊರಡಿಸಿದ್ದಾರೆ.