ನ್ಯೂಸ್

ಏ.೧೫ ಕೋಲಾರದ ೬ ಕೇಂದ್ರಗಳಲ್ಲಿ ೧೫೦೦ ಮಂದಿಯಿAದ ಎಸ್ಸೆಸ್ಸೆಲ್ಸಿ ಮೌಲ್ಯಮಾಪನಲೋಪಗಳಿಗೆ ಅವಕಾಶ ನೀಡದಿರಿ,ಸಮಯಪಾಲನೆ ಕಡ್ಡಾಯ / ಡಿಡಿಪಿಐ ಕೃಷ್ಣಮೂರ್ತಿ

ವಿಜಯವಾಣಿ ಸುದ್ದಿಜಾಲ ಕೋಲಾರ
ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಸಮಯ ಪಾಲನೆಯೊಂದಿಗೆ ಕ್ರಮಬದ್ದ, ವಿದ್ಯಾರ್ಥಿಸ್ನೇಹಿ ಮೌಲ್ಯಮಾಪನ ನಡೆಸಿ, ಯಾವುದೇ ಲೋಪಕ್ಕೆ ಅವಕಾಶ ನೀಡದಿರಿ ಎಂದು ಎಸ್ಸೆಸ್ಸೆಲ್ಸಿ ಪರೀಕ್ಷಾ ಜಂಟಿ ಹಾಗೂ ಉಪ ಮೌಲ್ಯಮಾಪಕರು, ಕೇಂದ್ರ ವ್ಯವಸ್ಥಾಪಕರಿಗೆ ಶಾಲಾ ಶಿಕ್ಷಣ ಇಲಾಖೆ ಉನಿರ್ದೇಶಕ ಕೃಷ್ಣಮೂರ್ತಿ ಸೂಚನೆ ನೀಡಿದರು.

ಏಪ್ರಿಲ್ ೧೫ ರಿಂದ ಆರಂಭಗೊಳ್ಳುವ ಎಸ್ಸೆಸ್ಸೆಲ್ಸಿ ಪೂರ್ಣ ಪ್ರಮಾಣದ ಮೌಲ್ಯಮಾಪನ ಕಾರ್ಯದ ಹಿನ್ನಲೆಯಲ್ಲಿ ಶನಿವಾರ ನಗರದ ಮಹಿಳಾ ಸಮಾಜ ಶಾಲೆಯ ಆವರಣದಲ್ಲಿನ ಸದಾಶಿವ ಸ್ಮಾರಕಭವನದಲ್ಲಿ ಜಂಟಿ ಹಾಗೂ ಉಪ ಮೌಲ್ಯಮಾಪಕರು ಮೌಲ್ಯಮಾಪನ ಕಾರ್ಯದಲ್ಲಿ ಅನುಸರಿಸಬೇಕಾದ ನಿಯಮಗಳ ಪಾಲನೆ, ಅಂಕಗಳ ನೀಡಿಕೆ ಕುರಿತು ಅರಿವು ಮೂಡಿಸಿ ಮಾತನಾಡಿ, ಏ.೧೩ರಿಂದಲೇ ಜಂಟಿ ಹಾಗೂ ಉಪಮುಖ್ಯಮೌಲ್ಯಮಾಪಕರು ಕೇಂದ್ರಗಳಲ್ಲಿ ಹಾಜರಿದ್ದು, ಡಿಕೋಡಿಂಗ್ ಮಾಡಿ ಸಿದ್ದತೆ ನಡೆಸಬೇಕು. ಈ ಬಾರಿಯೂ ನೀವೇ ಗಣಕಯಂತ್ರದಲ್ಲಿ ಆನ್‌ಲೈನ್‌ನಲ್ಲಿ ದಾಖಲಿಸಬೇಕಾಗಿದೆ. ಪ್ರತಿ ವಿದ್ಯಾರ್ಥಿಯ ಭವಿಷ್ಯ ಅಡಗಿರುವ ಈ ಮೌಲ್ಯಮಾಪನ ಕಾರ್ಯದಲ್ಲಿ ಉಪ ಮುಖ್ಯ ಮೌಲ್ಯಮಾಪಕರು ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಬೇಕು. ಸಹ ಮೌಲ್ಯಮಾಪಕರು ಮೌಲ್ಯಮಾಪನ ನಡೆಸಿದ ಉತ್ತರ ಪತ್ರಿಕೆಗಳನ್ನು ಅಡ್ಡ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿ, ತಪ್ಪುಗಳು ಮಾಡಿದರೆ ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.

೧೫೦೦ ಮಂದಿಯಿAದ ಮೌಲ್ಯಮಾಪನ ಕಾರ್ಯ
ನಗರದ ಆರು ಮೌಲ್ಯಮಾಪನ ಕೇಂದ್ರಗಳಲ್ಲಿ ೬ ಜಂಟಿ ಮುಖ್ಯ ಮೌಲ್ಯಮಾಪಕರು, ೬ ಮಂದಿ ವ್ಯವಸ್ಥಾಪಕರು ಸೇರಿದಂತೆ ೨೪೬ ಉಪ ಮುಖ್ಯಮೌಲ್ಯಮಾಪಕರು, ೧೪೧೬ ಮಂದಿ ಸಹ ಮೌಲ್ಯಮಾಪಕರು ಕಾರ್ಯನಿರ್ವಹಿಸುವರು ಎಂದು ತಿಳಿಸಿದರು.

ಗಣಕಯಂತ್ರದಲ್ಲಿ ಆ ದಿನ ಮೌಲ್ಯಮಾಪನ ಮಾಡಿದ ಅಂಕಗಳನ್ನು ಅದೇ ದಿನ ಆನ್‌ಲೈನ್‌ನಲ್ಲಿ ಅಳವಡಿಸಬೇಕಾಗಿರುವುದರಿಂದ ಹೆಚ್ಚಿನ ಗಮನವಹಿಸಲು ಸೂಚಿಸಿದರು.

ಮೌಲ್ಯಮಾಪನ ಕೇಂದ್ರಕ್ಕೆ ಹೊರಗಿನ ವ್ಯಕ್ತಿಗಳು, ರಾಜಕೀಯಪಕ್ಷ,ಸಂಘಟನೆಗಳ ಮುಖಂಡರು ಪ್ರವೇಶ ನಿಷಿದ್ದವಾಗಿದೆ, ಕೇಂದ್ರದ ಸಿಬ್ಬಂದಿ ಯಾವುದೇ ಪ್ರಾಯೋಜಕರಿಂದ ಊಟ, ತಿಂಡಿ, ಟೀ, ಕಾಫಿ ಪಡೆಯುವಂತಿಲ್ಲ ಎಂದು ಸ್ವಷ್ಟಪಡಿಸಿ, ಕೇಂದ್ರಗಳ ಸುತ್ತಮುತ್ತ ಮೌಲ್ಯಮಾಪನ ಮುಕ್ತಾಯವಾಗುವವರೆಗೂ ೨೦೦ ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ಕುಡಿಯುವ ನೀರು ಶೌಚಾಲಯ ಸ್ವಚ್ಚತೆ
ಮೌಲ್ಯಮಾಪನ ಕೇಂದ್ರಗಳಲ್ಲಿ ಶೌಚಾಲಯಗಳ ಸ್ವಚ್ಚತೆಗೆ ಆಯಾ ಕೇಂದ್ರಗಳಿಗೆ ಸೂಚಿಸಲಾಗಿದೆ, ಸ್ವಚ್ಚತೆ ಕೊರತೆ ಕಂಡು ಬಂದಲ್ಲಿ ಕೇಂದ್ರದ ವ್ಯವಸ್ಥಾಪಕರಿಗೆ ತಿಳಿಸಬೇಕು ಎಂದರು.

ಎಸ್ಸೆಸ್ಸೆಲ್ಸಿ ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಕೃಷ್ಣಪ್ಪ ಮಾತನಾಡಿ, ಡಿಕೋಡಿಂಗ್ ಮತ್ತಿತರ ಸಿದ್ದತೆಗಳನ್ನು ಜಂಟಿ ಹಾಗೂ ಉಪ ಮುಖ್ಯ ಮೌಲ್ಯಮಾಪಕರು ಇಂದು ಮಾಡಲಿದ್ದು, ಏ.೧೫ ರಿಂದ ಎಲ್ಲಾ ಸಹ ಮೌಲ್ಯಮಾಪಕರು ಹಾಜರಾಗುವ ಮೂಲಕ ಪೂರ್ಣಪ್ರಮಾಣದಲ್ಲಿ ಅಂದೇ ಮೌಲ್ಯಮಾಪನಕ್ಕೆ ಚಾಲನೆ ಸಿಗಲಿದೆ ಎಂದರು.

ಮೌಲ್ಯಮಾಪನ, ಅಂಕಗಳ ನಮೂದು, ಕೂಡುವಿಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರವಹಿಸಿ, ಸಹ ಮೌಲ್ಯಮಾಪಕರ ಕಾರ್ಯವನ್ನು ಪರಿಶೀಲಿಸುತ್ತಿರಿ ಎಂದು ಸೂಚಿಸಿದರು.

ಎಸ್ಸೆಸ್ಸೆಲ್ಸಿ ಮೌಲ್ಯಮಾಪಕ ಕೇಂದ್ರಗಳಿಗೆ ವಿಷಯವಾರು ವ್ಯವಸ್ಥಾಪಕರನ್ನು ನೇಮಿಸಲಾಗಿದ್ದು, ಕನ್ನಡ ಕೇಂದ್ರಕ್ಕೆ ವಿಷಯಪರಿವೀಕ್ಷಕ ಶಂಕರೇಗೌಡ, ಇಂಗ್ಲೀಷ್ ಕೇಂದ್ರಕ್ಕೆ ಶಿಕ್ಷಣಾಧಿಕಾರಿ ಸಗೀರಾ ಅಂಜುA, ಹಿಂದಿ ಕೇಂದ್ರಕ್ಕೆ ಎಪಿಸಿಒ ಮೋಹನ್ ಬಾಬು, ಗಣಿತ ಕೇಂದ್ರಕ್ಕೆ ವಿಷಯ ಪರಿವೀಕ್ಷಕ ಕೃಷ್ಣಪ್ಪ, ವಿಜ್ಞಾನ ಮೌಲ್ಯಮಾಪನ ಕೇಂದ್ರಕ್ಕೆ ವಿಷಯ ಪರಿವೀಕ್ಷಕರಾದ ಶಶಿವಧನ, ಸಮಾಜ ಶಾಸ್ತçಕೇಂದ್ರಕ್ಕೆ ವಿಷಯ ಪರಿವೀಕ್ಷಕಿ ಗಾಯಿತ್ರಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ಜಂಟಿ ಮುಖ್ಯ ಪರೀಕ್ಷಕರಾಗಿ ಕನ್ನಡಕ್ಕೆ ವಿದ್ಯಾದರಿ, ಇಂಗ್ಲೀಷ್‌ಗೆ ಎನ್.ಎಲ್.ಶ್ರೀನಿವಾಸ್, ಹಿಂದಿ ರೆಹಾನಾಬೇಗಂ, ಗಣಿತಕ್ಕೆ ಬೈರಾರೆಡ್ಡಿ, ವಿಜ್ಞಾನಕ್ಕೆ ಭಾಗ್ಯಲಕ್ಷಿö್ಮ, ಸಮಾಜವಿಜ್ಞಾನಕ್ಕೆ ಕೆ.ಎನ್.ನಾರಾಯಣಸ್ವಾಮಿರನ್ನು ನೇಮಿಸಲಾಗಿದೆ ಎಂದರು.

ಕನ್ನಡ ಮೌಲ್ಯಮಾಪನ ಗೋಕುಲ ಕಾಲೇಜು ಕೇಂದ್ರದಲ್ಲಿ, ಇಂಗ್ಲೀಷ್ ಮಹಿಳಾ ಸಮಾಜ, ಹಿಂದಿ-ಸೈನಿಕ್ ಪಬ್ಲಿಕ್ ಶಾಲೆ, ಗಣಿತ-ಮದರ್‌ತೆರೇಸಾ, ವಿಜ್ಞಾನ- ಎಂ.ಬಿ.ರಸ್ತೆಯ ಸೆಂಟ್‌ಆನ್ಸ್ ಶಾಲೆ, ಸಮಾಜವಿಜ್ಞಾನ-ಚಿನ್ಮಯ ವಿದ್ಯಾಲಯದಲ್ಲಿ ನಡೆಯಲಿದೆ ಎಂದು ತಿಳಿಸಿದರು.

ವಿಷಯಪರಿವೀಕ್ಷಕ ಶಂಕರೇಗೌಡ, ಶಿಕ್ಷಣಾಧಿಕಾರಿ ಸಗೀರಾಅಂಜುA, ವಿಷಯ ಪರಿವೀಕ್ಷಕರಾದ ಶಶಿವಧನ, ಗಾಯತ್ರಿ, ಎವೈಪಿಸಿ ಮೋಹನ್ ಬಾಬು, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಮಂಜುನಾಥ್ ಉಪಸ್ಥಿತರಿದ್ದರು.

ಚಿತ್ರ ೧೩ ಕೆ.ಎಲ್.ಆರ್. ೦೪ : ಕೋಲಾರದ ಮಹಿಳಾ ಸಮಾಜ ಶಾಲೆಯ ಸದಾಶಿವ ಸ್ಮಾರಕಭವನದಲ್ಲಿ ಶನಿವಾರವಾರ ನಡೆದ ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಪೂರ್ವಸಿದ್ದತಾ ಸಭೆಯಲ್ಲಿ ಜಂಟಿ, ಉಪ ಮೌಲ್ಯಉಪ ಮುಖ್ಯ ಮೌಲ್ಯಮಾಪಕರನ್ನುದ್ದೇಶಿಸಿ ಡಿಡಿಪಿಐ ಕೃಷ್ಣಮೂರ್ತಿ ಮಾತನಾಡಿದರು.

ಚಿತ್ರ ೧೩ ಕೆ.ಎಲ್.ಆರ್. ೦೪ಎ : ಕೋಲಾರದ ಮಹಿಳಾ ಸಮಾಜ ಶಾಲೆಯ ಸದಾಶಿವ ಸ್ಮಾರಕಭವನದಲ್ಲಿ ಶನಿವಾರವಾರ ನಡೆದ ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಪೂರ್ವಸಿದ್ದತಾ ಸಭೆಯಲ್ಲಿ ಜಂಟಿ,ಉಪ ಮೌಲ್ಯಉಪ ಮುಖ್ಯ ಮೌಲ್ಯಮಾಪಕರು ಹಾಜರಿದ್ದರು.