ಬೆಂಗಳೂರು
ಕರೊನಾ ಮಧ್ಯೆ ಶಾಲೆ ಆರಂಭದ ಬಗ್ಗೆ ಸರ್ಕಾರ ಇನ್ನೂ ನಿರ್ಧಾರ ತೆಗೆದುಕೊಳ್ಳುವ ಮಧ್ಯೆಯೇ 2021ನೇ ಎಸ್ಸೆಸ್ಸೆಲ್ಸಿ ಪರೀೆ ಆಯೋಜನೆ ಕುರಿತು ಚರ್ಚೆ ಆರಂಭಿಸಿದ್ದು, ವೇಳಾಪಟ್ಟಿ ಸಿದ್ಧಪಡಿಸಲು ಕಾರ್ಯ ಪ್ರವೃತ್ತವಾಗಿದೆ. ಡಿಸೆಂಬರ್ ಮೂರನೇ ವಾರದಲ್ಲಿ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಎಸ್ಸೆಸ್ಸೆಲ್ಸಿ ಪರೀೆ ನಡೆಸುವ ರಾಜ್ಯ ಪ್ರೌಢ ಶಿಕ್ಷಣ ಪರೀಾ ಮಂಡಳಿ(ಕೆಎಸ್ಇಇಬಿ)ಗೆ ತಾತ್ಕಾಲಿಕ ವೇಳಾಪಟ್ಟಿ ರೂಪಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸೂಚನೆ ಹೋಗಿದ್ದು, ಈ ಸಂಬಂಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಶ್ರೀದಲ್ಲೇ ಉನ್ನತ ಮಟ್ಟದ ಸಭೆ ಕರೆದು ಚರ್ಚಿಸಲಿದ್ದಾರೆಂದು ತಿಳಿದು ಬಂದಿದೆ.
ಕರೊನಾ ಸೋಂಕು ಕಡಿಮೆಯಾಗಿದ್ದರೂ ಸಹ ಶಾಲೆಗಳ ಆರಂಭಿಸಲು ಸರ್ಕಾರ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಇದರಿಂದ ಮುಂದೆ ಎಸ್ಸೆಸ್ಸೆಲ್ಸಿ ಮತ್ತು ಪಿಯು ಪರೀೆಗಳು ಸಹ ವಿಳಂಬವಾಗುವ ಸಾಧ್ಯತೆ ಹೆಚ್ಚಿದೆ. ಆದರೆ, ವಿದ್ಯಾರ್ಥಿಗಳಿಗೆ ಆನ್ಲೈನ್ ಕ್ಲಾಸ್ ಅಥವಾ ಆ್ಲೈನ್ ಕ್ಲಾಸ್ ಆರಂಭ ಮಾಡಿ ವಿದ್ಯಾರ್ಥಿಗಳನ್ನು ಪರೀೆಗೆ ಸಿದ್ಧಪಡಿಸುವುದು ಉತ್ತಮ ಎಂಬುದು ಇಲಾಖೆಯ ಆಲೋಚನೆಯಾಗಿದೆ.
ಈಗಾಗಲೇ ಶಿಕ್ಷಣ ಇಲಾಖೆಯು ಪಠ್ಯಕ್ರಮದಲ್ಲಿ ಶೇ.30 ಪಠ್ಯವನ್ನು ಕಡಿತ ಮಾಡಿದೆ. ಆದರೆ, ಇನ್ನೂ ಶಾಲೆ ಆರಂಭವಾಗದೇ ಇರುವುದರಿಂದ ಇನ್ನೂ ಕೆಲವು ಪಠ್ಯಗಳು ಕಡಿತ ಮಾಡುವ ಸಾಧ್ಯತೆ ಇದೆ. ಆನಂತರ ನಮಗೆ ನಿಖರವಾಗಿ ಬೋಧನೆ ಮಾಡಲು ಸಾಧ್ಯವಾಗುತ್ತದೆ. ಅಲ್ಲದೆ, ಶಾಲೆ ಆರಂಭದ ವೇಳಾಪಟ್ಟಿಯೇ ಅಂತಿಮವಾಗದೇ, ಎಸ್ಸೆಸ್ಸೆಲ್ಸಿ ಪರೀೆ ವೇಳಾಪಟ್ಟಿ ರೂಪಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಮೂರ್ಖತನ. ಪಠ್ಯಕ್ರಮದ ಮಾಹಿತಿ ಕೂಡ ಲಭ್ಯವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪರೀೆ ವೇಳಾಪಟ್ಟಿ ಬಿಡುಗಡೆ ಮಾಡುವುದು ತಪು$್ಪ. ಆನ್ಲೈನ್ ತರಗತಿಯ ಆಧಾರದ ಮೇಲೆ ಪರೀೆ ನಡೆಸುವುದು ಕಷ್ಟವೆಂದು ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ(ಕ್ಯಾಮ್ಸ್) ಪ್ರಧಾನ ಕಾರ್ಯದರ್ಶಿ ಡಿ.ಶಶಿ ಕುಮಾರ್ ಹೇಳಿದ್ದಾರೆ.