ಸಾಲಿಗ್ರಾಮ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟು ಜನಾಂಗದವರ ರಕ್ಷಣೆಗೆ ಇರುವ ಕಾನೂನುಗಳನ್ನು ಜನರು ತಿಳಿದುಕೊಳ್ಳಬೇಕು ಎಂದು ನಿಸರ್ಗ ಕಲಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಉಯ್ಯಂಬಳ್ಳಿ ಚಂದ್ರಪ್ಪ ತಿಳಿಸಿದರು.
ಸಾಲಿಗ್ರಾಮ ಪಟ್ಟಣದ ಡಂಬಲ್ ಟ್ಯಾಂಕ್ ವೃತ್ತದಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಆಡಳಿತ ಹಾಗೂ ನಿಸರ್ಗ ಕಲಾಭಿವೃದ್ಧಿ ಟ್ರಸ್ಟ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಬುಡಕಟ್ಟು ಜನಾಂಗದವರು ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಯೋಜನೆಗಳನ್ನು ಕೊಟ್ಟಿದೆ. ಆ ಯೋಜನೆಗಳನ್ನು ಪ್ರತಿಯೊಬ್ಬರು ಸದ್ಬಳಕೆ ಮಾಡಿಕೊಳ್ಳಬೇಕು. ಇವೆಲ್ಲವನ್ನೂ ಪಡೆಯಬೇಕಾದರೆ ಮೊದಲು ಕಾನೂನು ಅರಿವು ಇರಬೇಕು ಎಂದರು.
ಬುಡಕಟ್ಟು ಜನಾಂಗದವರ ಮೇಲೆ ನಡೆಯುತ್ತಿರುವ ದೌರ್ಜನ್ಯ, ನಾಗರಿಕ ಹಕ್ಕು ಸಂರಕ್ಷಣಾ ಕಾಯಿದೆ ಸೇರಿದಂತೆ ಜನರ ಅಭಿವೃದ್ಧಿಗೆ ಇರುವ ಕಾನೂನನ್ನು ಬಗ್ಗೆ ಬೀದಿನಾಟಕ ಮಾಡುವ ಮೂಲಕ ಅರಿವು ಮೂಡಿಸಲಾಯಿತು.
ಮುಖಂಡರಾದ ಬಸವರಾಜು, ಪುರಿ ಗೋವಿಂದರಾಜು, ಮುಖ್ಯ ಶಿಕ್ಷಕರಾದ ಗೋಪಾಲ್ ರಾಜ್, ಅಶೋಕ್ ಸೇರಿದಂತೆ ಇತರರು ಹಾಜರಿದ್ದರು.