ನ್ಯೂಸ್

ಎಸ್‌ಬಿಎಂ ಸಿಟಿ ಅನುಷ್ಠಾನಕ್ಕೆ ಹಿನ್ನಡೆ

ಡಿಪಿಎನ್ ಶ್ರೇಷ್ಠಿ ಚಿತ್ರದುರ್ಗ

ಸ್ವಚ್ಛ ಭಾರತ್ ಮಿಷನ್(ನಗರ) 2.0 ಅಡಿ ವೈಯಕ್ತಿಕ, ಸಾರ್ವಜನಿಕ, ಸಮುದಾಯ, ಮಹತ್ವಾಕಾಂಕ್ಷಿ (Aspirational Public Toilet)ಶೌಚಗೃಹ ಹಾಗೂ ಯೂರಿನಲ್ಸ್ ನಿರ್ಮಾಣಕ್ಕೆ ಪೌರಾಡಳಿತ ನಿರ್ದೇಶನಾಲಯ 2023ಅಕ್ಟೋಬರ್‌ನಲ್ಲೇ ಆದೇಶಿಸಿದ್ದರೂ ಹಲವೆಡೆ ನಿವೇಶನ ಇತ್ಯಾದಿ ಸಮಸ್ಯೆಗಳಿಂದ ಅನುಷ್ಠಾನ ಕುಂಠಿತವಾಗಿದೆ.

ವಿವಿಧೆಡೆ ನಿರ್ಮಾಣವಾಗಿದ್ದರೆ, ಇನ್ನು ಕೆಲವೆಡೆ ಪ್ರಗತಿ, ಇನ್ನೂ ಹಲವೆಡೆ ಸ್ಥಳ ಪರಿಶೀಲನೆ ನಡೆಯುತ್ತಿದೆ. ಇದಕ್ಕೆ ಅಧಿಕಾರಿಗಳ ನಿರ್ಲ ಕ್ಷೃವೂ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಎಂಟ್ರಿ ಕೊಟ್ಟಿದ್ದು, ಉದ್ದೇಶಿತ ಶೌಚಗೃಹಗಳ ನಿರ್ಮಾಣದ ಸ್ಥಳ ಪರಿಶೀಲನೆ ನಡೆಸಿದೆ.

ಫೆ.5 ರಂದು ಹೊಳಲ್ಕೆರೆಗೆ ಭೇಟಿ ನೀಡಿದ್ದ ಪ್ರಾಧಿಕಾರದ ಜಿಲ್ಲಾ ಕಾರ್ಯದರ್ಶಿ ಎಂ. ವಿಜಯ್, ಅಲ್ಲಿ ನಿರ್ಮಿಸಿರುವ ಮಹತ್ವಾಂಕ್ಷಿ ಶೌಚಗೃಹ(ಎಎಸ್‌ಪಿಟಿ)ಪರಿಶೀಲಿಸಿದ್ದಾರೆ. (ಅಲ್ಲಿ ಪ್ರತ್ಯೇಕವಾಗಿ ಮಹಿಳೆಯರಿಗೆ ಮಗುವಿನ ಆರೈಕೆ ಕೊಠಡಿ ನಿರ್ಮಿಸಲಾಗಿದೆ) ಆಧುನಿಕ ಶೌಚಗೃಹವನ್ನು ಸಾರ್ವಜನಿಕ ಬಳಕೆಗೆ ಕಲ್ಪಿಸುವಂತೆ ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಿದ್ದಾರೆ.

6 ರಂದು ನಾಯಕನಹಟ್ಟಿಗೆ, 7 ರಂದು ಚಿತ್ರದುರ್ಗದ ಚಳ್ಳಕೆರೆ ಗೇಟ್ ಮತ್ತಿತರ ಕಡೆಗಳಿಗೆ ಭೇಟಿ ನೀಡಿ ನಿರ್ಮಾಣ ಸ್ಥಳಗಳನ್ನು ಪರಿಶೀಲಿಸಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಯೋಜನೆಗೆ 259.94 ಲಕ್ಷ ರೂ. ಮಂಜೂರಾಗಿದೆ. ಚಿತ್ರದುರ್ಗ ನಗರಸಭೆ ವ್ಯಾಪ್ತಿ 3 ಎಎಸ್‌ಪಿಟಿ, 2 ಯೂರಿನಲ್ಸ್, ಚಳ್ಳಕೆರೆ, ಹಿರಿಯೂರು, ಮೊಳಕಾಲ್ಮೂರು ನಗರ ಮತ್ತು ಪಟ್ಟಣಗಳಲ್ಲಿ ತಲಾ ಒಂದೊಂದು ಎ ಎಸ್‌ಪಿಟಿ, ಸಾರ್ವಜನಿಕ ಶೌಚಗೃಹ, ಹೊಳಲ್ಕೆರೆ 1 ಎಎಸ್‌ಪಿಟಿ, ನಾಯಕನಹಟ್ಟಿ- 1 ಸಾರ್ವಜನಿಕ, 2 ಸಮುದಾಯ ಹಾಗೂ 2 ಯೂರಿನಲ್ಸ್ ನಿರ್ಮಿಸಬೇಕಿದೆ. ವಿವಿಧೆಡೆ ನಿವೇಶನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ.

------------

ಎಲ್ಲಿ, ಎಷ್ಟು?

ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ 284 ಯುಎಲ್‌ಬಿಗಳಲ್ಲಿ ವೈಯಕ್ತಿಕ ಶೌಚಗೃಹಗಳ ಸಂಖ್ಯೆ 14,667, ಒಂದು ಲಕ್ಷಕ್ಕಿಂತ ಅಧಿಕ 10 ಲಕ್ಷದೊಳಗಿನ ಜನಸಂಖ್ಯೆಯ ಯುಎಲ್‌ಬಿಗಳಲ್ಲಿ 2301, 10 ಲಕ್ಷಕ್ಕಿಂತ ಅಧಿಕ ಯುಎಲ್‌ಬಿಗಳಲ್ಲಿ-0 ಹಾಗೂ ಸಾರ್ವಜನಿಕ-1953, 528,600. ಸಮುದಾಯ-2014,452,300. ಎಎಸ್‌ಪಿಟಿ- 916,307,0. ಯೂರಿನಲ್ಸ್-1958768-0.

----

ನಗರ ಪ್ರದೇಶ ವಿಸ್ತರಣೆ

ಎಸ್‌ಬಿಎಂ 1ರಡಿ ರಾಜ್ಯದ ಯುಎಲ್‌ಬಿಗಳ ವ್ಯಾಪ್ತಿ 3.21ಲಕ್ಷ ವೈಯಕ್ತಿಕ ಶೌಚಗೃಹಗಳನ್ನು ನಿರ್ಮಿಸಿ,ಈ ಎಲ್ಲ ಸ್ಥಳೀಯ ಸಂಸ್ಥೆಗಳನ್ನು ಬಯಲು ಮುಕ್ತ ಶೌಚಗೃಹ ಪ್ರದೇಶವೆಂದು ಘೋಷಿಸಲಾಗಿದೆ. ಆದರೆ ಈಚೆಗೆ ಗ್ರಾಪಂಗಳು ನಗರ ಪ್ರದೇಶಗಳಾಗಿ ಪರಿವರ್ತನೆಯಾಗುತ್ತಿರುವುದರಿಂದಾಗಿ,ನೈರ್ಮಲ್ಯೀಕರಣ ಹಿನ್ನೆಲೆ ಕೇಂದ್ರ ಎಸ್‌ಬಿಎಂ 2ನ್ನು ಪ್ರಕಟಿಸಿದೆ.

---

ಕೇಂದ್ರ,ರಾಜ್ಯದ ಪಾಲು

ಹತ್ತು ಲಕ್ಷಕ್ಕಿಂತ ಅಧಿಕ ಜನಸಂಖ್ಯೆ ಯುಎಲ್‌ಬಿಗಳಲ್ಲಿ ಯೋಜನೆಗೆ ಕೇಂದ್ರ ಶೇ.25,ರಾಜ್ಯ ಶೇ. 16 ಹಾಗೂ ಯುಎಲ್‌ಬಿ ಶೇ.59 ವೆಚ್ಚ ಭರಿಸ ಬೇಕಾಗುತ್ತದೆ. 1-10 ಲಕ್ಷ ಜನಸಂಖ್ಯೆ ಯುಎಲ್‌ಬಿಗಳಲ್ಲಿ,ಕೇಂದ್ರ ಶೇ.33-ರಾಜ್ಯ ಶೇ.22 ಹಾಗೂ ಯುಎಲ್ ಬಿ ಶೇ.45 ಹಾಗೂ ಒಂದು ಲಕ್ಷ ಅಧಿಕ ಜನಸಂಖ್ಯೆ ಯುಎಲ್‌ಬಿಗಳಲ್ಲಿ ಕೇಂದ್ರ ಶೇ.50,ರಾಜ್ಯ ಶೇ.33 ಹಾಗೂ ಸ್ಥಳೀಯ ಸಂಸ್ಥೆಗಳ ಪಾಲು ಶೇ.17ನ್ನು ನಿಗದಿ ಪಡಿಸಲಾಗಿದೆ.

ಸಮಯದಾಯ-1.50ಲಕ್ಷ ರೂ.,ಸಾರ್ವಜನಿಕ-1.50 ಲಕ್ಷ ರೂ.,ಎಎಸ್‌ಪಿಟಿ 2.50 ಲಕ್ಷ ರೂ.ಹಾಗೂ ಯೂರಿನಲ್ಸ್‌ಗಳನ್ನು 32 ಸಾವಿರ ರೂ.ವೆಚ್ಚದಲ್ಲಿ ನಿರ್ಮಿಸಬೇಕಾಗಿದೆ. ಇದಕ್ಕಾಗಿ ರಾಜ್ಯದ 310 ಯುಎಲ್‌ಬಿಗಳ ವ್ಯಾಪ್ತಿ ಯೂರಿನಲ್ಸ್‌ಗಳಿಗೆ 872.32 ಲಕ್ಷ ರೂ., ಸಮುದಾಯ-4149 ಲಕ್ಷ ರೂ.,ಸಾರ್ವಜನಿಕ-4621.50 ಲಕ್ಷ ರೂ., ಎಎಸ್‌ಪಿಟಿ-3057.50 ಲಕ್ಷ ರೂ.ಹಾಗೂ ವೈಯಕ್ತಿಕ ಶೌಚಗೃ ಹಕ್ಕೆ ತಲಾ 30 ಸಾವಿರ ರೂ.ಅನುದಾನ ಹಂಚಿಕೆಯಾಗಿದೆ.