ನ್ಯೂಸ್

ಎಸ್‌ಜೆಎಂ ಕಾಲೇಜು ವಿದ್ಯಾರ್ಥಿಗಳ ರ‌್ಯಾಂಕ್ ಸಾಧನೆ

ಚಿತ್ರದುರ್ಗ: ಬೆಂಗಳೂರು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ದಂತವೈದ್ಯ ಸ್ನಾತಕ ಮತ್ತು ಸ್ನಾತಕೋತ್ತರ ವಿವಿಧ ವಿಷಯಗಳ ಪರೀಕ್ಷೆಗಳಲ್ಲಿ ನಗರದ ಎಸ್‌ಜೆಎಂ ದಂತ ಮಹಾವಿದ್ಯಾಲಯದ ವಿದ್ಯಾರ್ಥಿಗಳು 30 ರ‌್ಯಾಂಕ್‌ಗಳನ್ನು ಪಡೆದಿದ್ದಾರೆ ಎಂದು ಪ್ರಾಚಾರ್ಯ ಡಾ. ರಘುನಾಥರೆಡ್ಡಿ ತಿಳಿಸಿದ್ದಾರೆ.

ಅಂತಿಮವರ್ಷದ ಸ್ನಾತಕೋತ್ತರ ವಿದ್ಯಾರ್ಥಿ ಡಾ. ಐಶ್ವರ್ಯ ಕೊಟ್ಟೂರು 6ನೇ ರ‌್ಯಾಂಕ್, ಸ್ನಾತಕ ವಿಭಾಗದಲ್ಲಿ ಡಾ. ವೈಷ್ಣವಿ ಕುಪ್ಪಲ 3ನೇ ಹಾಗೂ ಡಾ.ಎಂ. ರಚನಾ 5ನೇ ರ‌್ಯಾಂಕ್ ಪಡೆದಿದ್ದಾರೆ.

ಡಾ.ತನು ಬಾಲಕೃಷ್ಣ, ಡಾ.ಟಿ. ಶ್ವೇತಾ, ಡಾ.ಎಸ್.ಡಿ. ಹರ್ಷಿತಾ, ಡಾ.ಡಿ.ಎಂ. ಶ್ರೀಶಾ, ಡಾ.ಚಿನ್ಮಯಿ ಚಿದಂಬರ್ ಕಂಬಾರ್, ಡಾ.ಎಸ್.ಎಂ. ಶಿವಮೋಹನ್, ಡಾ. ಸೈಯದಾ ಮಿಜ್ಬಾ ಮತ್ತು ಡಾ. ರೀತು ವೆಂಕಟೇಶ್ ಮುರುಡೇಶ್ವರ ಇವರು ಬಿಡಿಎಸ್ ಪರೀಕ್ಷೆಗಳ 2 ಮತ್ತು 4ನೇ ಸೆಮ್‌ಗಳ ವಿವಿಧ ವಿಷಯಗಳಲ್ಲಿ 30 ರ‌್ಯಾಂಕ್‌ಗಳನ್ನು ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಎಂದು ತಿಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ. ಕಳಸದ, ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ, ಎಸ್‌ಎನ್. ಚಂದ್ರಶೇಖರ್, ಡಾ.ಪಿ.ಎಸ್. ಶಂಕರ್ ಹರ್ಷ ವ್ಯಕ್ತಪಡಿಸಿದ್ದಾರೆ.