ನ್ಯೂಸ್

ಎಸ್.ಎಲ್.‌ಭೈರಪ್ಪ ಕನ್ನಡ ವಿವಿ ನಾಡೋಜ

ಹೊಸಪೇಟೆ: ಸಾಹಿತಿ, ಕಾದಂಬರಿಕಾರ ಎಸ್.ಎಲ್.‌ಭೈರಪ್ಪನವರಿಗೆ ಕನ್ನಡ ವಿವಿಯಿಂದ ಕೊಡುವ ನಾಡೋಜ ಗೌರವ ಪದವಿಯನ್ನು 2011ರಲ್ಲಿ ನೀಡಲಾಗಿದೆ.

ಸಾಹಿತಿ ಎಸ್.ಎಲ್.‌ಭೈರಪ್ಪನವರು ಕನ್ನಡ ವಿವಿ ಜತೆ ಅವಿನಾಭಾವ ಸಂಬಂಧವಿದೆ. ಹಿಂದಿನ ಕುಲಪತಿಗಳಾದ ಚಂದ್ರಶೇಖರ ಕಂಬಾರ, ಎಂ.ಎಂ.ಕಲಬರ‍್ಗಿ ಸೇರಿ ಇತರೆ ಕುಲಪತಿಗಳು ಅವಧಿಯಲ್ಲಿ ಭೇಟಿ ನೀಡಿ ಸಲಹೆ ಸೂಚನೆಗಳು ನೀಡಿದ್ದಾರೆ. ಬೈರಪ್ಪ ಅವರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದಾಗ ಕನ್ನಡ ವಿವಿಯಲ್ಲಿ ಸನ್ಮಾನಿಸಿ ಗೌರವಿಸಲಾಗಿದೆ. ನಂತರ 2011ರಲ್ಲಿ ಆಗಿನ ಕುಲಪತಿ ಎ.‌ಮುರಿಗೆಪ್ಪ ಅವರ ಅವಧಿಯ ಎಸ್.ಎಲ್.‌ಭೈರಪ್ಪನವರಿಗೆ ನಾಡೋಜ ಗೌರವ ಪದವಿ ಪ್ರದಾನ ಮಾಡಿದರು. ಆದರೆ, ಅಂದು ನಡೆದ ವಿವಿಯ ನುಡಿ ಹಬ್ಬದಲ್ಲಿ ಬೈರಪ್ಪ ಅವರು ಕಾರಣಾಂತರಗಳಿಂದ ಭಾಗವಹಿಸಿರಲಿಲ್ಲ. ನಂತರ ಮೈಸೂರಿನ ಅವರ ನಿವಾಸಕ್ಕೆ ಹೋಗಿ ನಾಡೋಜ ಪದವಿ ನೀಡಿ ಗೌರವಿಸಲಾಯಿತು.