ನ್ಯೂಸ್

ಎಸಿಬಿ ಖೆಡ್ಡಾಗೆ ಕಂದಾಯ ನಿರೀಕ್ಷಕ ಸುಬ್ರಮಣಿ

ಇದರಿಂದ ಬೇಸತ್ತ ನಾರಾಯಣಮೂರ್ತಿ ಕೋಲಾರದ ಎಸಿಬಿಗೆ ದೂರುನೀಡಿದ್ದು, ದೂರಿನ ಮೇರೆಗೆ ಎಸಿಬಿ ಡಿವೈಎಸ್‍ಪಿ ಪುರುಷೋತ್ತಮ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲು ತಂಡ ಸಿದ್ದವಾಗಿತ್ತು. ಶುಕ್ರವಾರ ಮಧ್ಯಾಹ್ನ 11.30ರ ಸಮಯದಲ್ಲಿ ನಾರಾಯಣಮೂರ್ತಿ ಅವರಿಂದ ಕಚೇರಿಯಲ್ಲಿ ಲಂಚÀದ ಹಣ ಪಡೆಯುತ್ತಿದ್ದಾಗ ಕಾರ್ಯಾಚರಣೆ ನಡೆಸಿದ್ದಾರೆ. ಸುಬ್ರಮಣಿ ಅವರನ್ನು ವಶಕ್ಕೆ ಪಡೆದಿರುವ ಎಸಿಬಿ ತಂಡ ಮುಂದಿನ ತನಿಖೆ ಕೈಗೊಂಡಿರುತ್ತಾರೆ. ಇನ್ಸ್‍ಪೆಕ್ಟರ್‍ಗಳಾದ ವೀರೇಂದ್ರಕುಮಾರ್, ಫರೂಖ್‍ಪಾಷಾ, ಸಿಬ್ಬಂದಿ ರಘುನಾಥ್, ವಾಸುದೇವ್, ಕೃಷ್ಣೇಗೌಡ, ಮಹೇಶ್, ಮಂಜಪ್ಪ, ಪ್ರಕಾಶ್, ನಾಗವೇಣಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕ ಸುಬ್ರಮಣಿ ಎಸಿಬಿ ಬಲೆಗೆ ಬಿದ್ದವರು. ಮಾಲೂರಿನ ಮಾರಸಂದ್ರ ಗ್ರಾಮದ ನಿವಾಸಿ ನಾರಾಯಣಮೂರ್ತಿ ಜಮೀನು ಪಹಣಿ ತಿದ್ದುಪಡಿಮಾಡಲು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಕಾಲಮಿತಿಯೊಳಗೆ ಅರ್ಜಿ ವಿಲೇವಾರಿ ಆಗಿರಲಿಲ್ಲ. ಈ ಮದ್ಯೆ ಕಂದಾಯ ನಿರೀಕ್ಷಕ ಸುಬ್ರಮಣಿ 10,000 ರೂಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಜಮೀನಿನ ಪಹಣಿ ತಿದ್ದುಪಡಿ ಮಾಡಿಕೊಡಲು 10,000 ರೂ. ಅಕ್ರಮ ಸಂಭಾವನೆಗೆ ಕೈ ಒಡ್ಡಿದ ಮಾಲೂರಿನ ರಾಜಸ್ವ ನಿರೀಕ್ಷಕ ಎಸಿಬಿ ತೋಡಿದ ಖೆಡ್ಡಾಗೆ ಬಿದ್ದಿದ್ದಾರೆ.

ವಿಜಯವಾಣಿ ಸುದ್ದಿಜಾಲ ಕೋಲಾರ