ನ್ಯೂಸ್

ಎಲ್ಲರಿಗೂ ಯೋಜನೆ ತಲುಪಬೇಕು; ಡಿಸಿ ವೆಂಕಟ್​ ರಾಜು ಸಲಹೆ, ಶ್ರೀನಿವಾಸಪುರದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ

ಶ್ರೀನಿವಾಸಪುರ: ಸರ್ಕಾರವು ಗ್ರಾಮೀಣ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ತಂದಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆ ತಲುಪಬೇಕು ಎಂಬ ಉದ್ದೇಶದಿಂದ ಗ್ರಾಮವಾಸ್ತವ್ಯ ಜಾರಿಗೆ ತಂದಿದೆ ಎಂದು ಜಿಲ್ಲಾಧಿಕಾರಿ ವೆಂಕಟ್​ ರಾಜು ಹೇಳಿದರು.

ಶ್ರೀನಿವಾಸಪುರ ತಾಲೂಕು ಸಭಾಂಗಣದಲ್ಲಿ ಮಂಗಳವಾರ ತಾಲೂಕಿನ ಕಂದಾಯ, ಪೊಲೀಸ್​, ಪುರಸಭೆ ಹಾಗೂ ತಾಲೂಕು ಪಂಚಾಯಿತಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಮುಂದುವರೆದ ಭಾಗವಾಗಿ ಜಿಲ್ಲಾಧಿಕಾರಿ ಭೇಟಿ ನೀಡಿ ಎಲ್ಲ ಇಲಾಖೆಗಳ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆದು ಗ್ರಾಮವಾಸ್ತವ್ಯ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರಿಂದ ಬಂದ ಅರ್ಜಿಗಳ ಸ್ಥಿತಿಗತಿ ಕುರಿತು ಚರ್ಚಿಸಿ ಬಳಿಕ ಮಾತನಾಡಿದರು.

ಈಗಾಗಲೇ ಸಾರ್ವಜನಿಕರು ನೀಡಿರುವ ಅರ್ಜಿಗಳಿಗೆ ಮುಂದಿನ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.

ಸಾರ್ವಜನಿಕರಿಂದ 16 ಅರ್ಜಿಗಳನ್ನು ಸ್ವೀಕರಿಸಲಾಗಿದೆ.

ತಹಸೀಲ್ದಾರ್​ ಶರೀನ್​ತಾಜ್​, ಪೊಲೀಸ್​ ನಿರೀಕ್ಷಕ ಜಿ.ಸಿ.ನಾರಾಯಣಸ್ವಾಮಿ, ಉಪತಹಸೀಲ್ದಾರ್​ ಕಿರಣ್​, ಯಲ್ದೂರು ಹರಿಪ್ರಸಾದ್​, ಗೋವಿಂದಪಲ್ಲಿ ವೃತ್ತ ನಿರೀಕ್ಷಕ ಜಯಾನಂದ, ಆರ್​ಐ ಬಿ.ವಿ.ಮುನಿರೆಡ್ಡಿ, ವಿ.ಅಂಬರೀಶ್​, ಗುರುರಾಜರಾವ್​, ವಿನೋದ್​ಕುಮಾರ್​, ಜನಾರ್ದನ್​, ತಾಲೂಕು ಸಿಬ್ಬಂದಿ ಇದ್ದರು.