ಕೆ.ಆರ್.ನಗರ: ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ತಾಲೂಕಿನ ಎಲ್ಲ ಸಮಾಜಗಳ ಸಮುದಾಯ ಭವನ ನಿರ್ಮಾಣಕ್ಕೆ ತಲಾ 25 ಲಕ್ಷ ರೂ.ಅನುದಾನ ನೀಡಲಾಗಿದೆ ಎಂದು ಕೆಪಿಸಿಸಿ ಸದಸ್ಯ ದೊಡ್ಡಸ್ವಾಮೇಗೌಡ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಎಲ್ಲ ಸಮಾಜದ ಸಮುದಾಯ ಭವನಗಳಿಗೆ ಅನುದಾನ ಕೊಡಿಸಿರುವುದರ ಜತೆಗೆ ಮಾವತ್ತೂರು ಗ್ರಾಮದ ಮಡಿವಾಳ ಸಮಾಜದ ನಿವೇಶನ ಖರೀದಿಗೆ ವೈಯಕ್ತಿಕವಾಗಿ ಆರ್ಥಿಕ ಸಹಾಯ ಮಾಡಲಾಗಿದೆ ಎಂದು ತಿಳಿಸಿದರು.
ತಾಲೂಕು ಮಡಿವಾಳ ಸಂಘಕ್ಕೆ ಸ್ವ ಇಚ್ಛೆಯಿಂದ ಅನುದಾನ ಕೊಡಿಸುವುದಾಗಿ ತಿಳಿಸಿದ್ದರೂ ಸಂಘದ ಕೆಲ ಕಾರಣದಿಂದ ಅನುದಾನ ಪಡೆದುಕೊಳ್ಳುವುದರಲ್ಲಿ ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಆ ಅನುದಾನವನ್ನು ಸರ್ಕಾರದ ವತಿಯಿಂದ ಕೊಡಿಸಿ ಭವನ ನಿರ್ಮಾಣ ಮಾಡಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.
ತಾಲೂಕು ಮಡಿವಾಳ ಸಮಾಜದ ಅಧ್ಯಕ್ಷ ಸಿದ್ದನಕೊಪ್ಪಲು ಕುಮಾರ್ ಮಾತನಾಡಿದರು. ಇದೇ ವೇಳೆ ಸಮಾಜದ ಮುಖಂಡರು ವಿವಿಧ ಪಕ್ಷಗಳನ್ನು ತೊರೆದು ಕಾಂಗ್ರೆಸ್ ಸೇರಿದರು. ಪುರಸಭೆ ಮಾಜಿ ಅಧ್ಯಕ್ಷರಾದ ಕೆ.ಜಿ.ಸುಬ್ರಮಣ್ಯ, ನರಸಿಂಹರಾಜು, ಮಾಜಿ ಸದಸ್ಯರಾದ ಕೆ.ಎಲ್.ಕುಮಾರ್, ಗುರುಶಂಕರ್, ಜಿಲ್ಲಾ ಕಾಯಕ ಸಮಾಜಗಳ ಒಕ್ಕೂಟದ ಅಧ್ಯಕ್ಷ ಬೋರಪ್ಪಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ನಗರಾಧ್ಯಕ್ಷ ಎಂ.ಜೆ.ರಮೇಶ್, ನಗರ ಯೂತ್ ಕಾಂಗ್ರೆಸ್ ಅಧ್ಯಕ್ಷ ಕೆಂಚಿಮಂಜು, ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ದೆಗ್ಗನಹಳ್ಳಿ ಆನಂದ್, ಮುಖಂಡರಾದ ಲಕ್ಷ್ಮಣಶೆಟ್ಟಿ, ಕೆಸ್ತೂರು ನಾಗಣ್ಣ, ಕುಮಾರ್, ಅರವಿಂದ, ಕಟ್ಟೆಕುಮಾರ್, ಹರಂಬಳ್ಳಿ ನವೀನ್, ಶ್ರೀನಿವಾಸ್, ರಾಜೇಶ್, ಸ್ವಾಮಿನಾಯಕ, ಸುಪ್ರಿತ್, ವರದಶೆಟ್ಟಿ, ಮಂಜು ಇನ್ನಿತರರು ಹಾಜರಿದ್ದರು.