ಇಂದಿನ ಕಾಲಘಟ್ಟದ ಎಲ್ಲ ಸಮಸ್ಯೆಗಳಿಗೆ ಪೂರ್ಣಚಂದ್ರ ತೇಜಸ್ವಿ ಅವರ ಬರಹ ಹಾಗೂ ಬದುಕಿನಲ್ಲಿ ಪರಿಹಾರ ಸಿಗುತ್ತದೆ ಎಂದು ಸಿದ್ಧಾರ್ಥನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕಿ ಡಾ.ತ್ರಿವೇಣಿ ಅಭಿಪ್ರಾಯಪಟ್ಟರು.
ನಗರದ ಹೂಟಗಳ್ಳಿಯ ಎಸ್‌ಆರ್‌ಎಸ್ ಕಾಲನಿಯ ಒಡನಾಡಿ ಸೇವಾ ಸಂಸ್ಥೆ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಪ್ರಸ್ತುತ ವಿದ್ಯಮಾನದಲ್ಲಿ ತೇಜಸ್ವಿ ಚಿಂತನೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದು ಅತ್ಯಾಚಾರ, ಭ್ರಷ್ಟಾಚಾರ, ಉಗ್ರದಾಳಿಯಿಂದ ನಡೆಯುತ್ತಿರುವ ಮಾರಣ ಹೋಮ, ಧರ್ಮ, ಜಾತಿ ತಿಕ್ಕಾಟ ,ರಾಜಕೀಯ ಕುತಂತ್ರ ಬುದ್ಧಿಗಳಿಂದ ಸಮಾಜದ ಮೇಲೆ ಕಟ್ಟ ಪರಿಣಾಮ ಬೀರುತ್ತಿದೆ. ಇಂತಹ ಸಮಯದಲ್ಲಿ ಮಾನವೀಯ ಮೌಲ್ಯ ಹೊಂದಿರುವ ಹಾಗೂ ವೈಚಾರಿಕವಾಗಿ ಎಚ್ಚರಿಸುವ ತೇಜಸ್ವಿ ಅವರ ಬರಹ ಹಾಗೂ ಬದುಕು ಎಲ್ಲರಿಗೂ ಮಾದರಿ ಎಂದರು.
ವಿಶ್ವ ಸಾಹಿತ್ಯದಲ್ಲಿ ಕನ್ನಡ ಸಾಹಿತ್ಯಕ್ಕೂ ದೊಡ್ಡ ಸ್ಥಾನ ದೊರೆತ್ತಿದ್ದು, ಈ ನಿಟ್ಟಿನಲ್ಲಿ ಪೂರ್ಣಚಂದ್ರ ತೇಜಸ್ವಿ ಅವರ ಕೊಡುಗೆಯೂ ಅಪಾರ ಎಂದರು. ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ, ಪರುಶು ಇದ್ದರು.