ನ್ಯೂಸ್

ಎಲ್ ಆ್ಯಂಡ್ ಟಿ ಅಧಿಕಾರಿಗಳಿಗೆ ಮೇಯರ್ ವಾರ್ನಿಂಗ್

ಪಾಲಿಕೆ ವಿಶೇಷ ಸಭೆಯಲ್ಲಿ ಮೇಯರ್ ದರ್ಗಿ ಸೂಚನೆ |
ಕಾಮಗಾರಿಗೂ ಮುನ್ನ ಸುರಕ್ಷತೆಗೆ ಆದ್ಯತೆ ಕೊಡಿ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಸುರಕ್ಷತಾ ಕ್ರಮ ಕೈಗೊಳ್ಳುವ ಮೂಲಕ ಅನಾಹುತ ಸಂಭವಿಸದAತೆ ನೋಡಿಕೊಳ್ಳಬೇಕು ಎಂದು ಮಹಾನಗರ ಪಾಲಿಕೆ ಮೇಯರ್ ವಿಶಾಲ್ ದರ್ಗಿ ಎಲ್ ಆ್ಯಂಡ್ ಟಿ ಅಧಿಕಾರಿಗಳಿಗೆ ಸೂಚಿಸಿದರು.
ಎಲ್ ಆಂಡ್ ಟಿ ಕಂಪನಿಯವರು ಓವರ್‌ಹೆಡ್ ಟ್ಯಾಂಕ್ ನಿರ್ಮಾಣ ಮಾಡುವ ಉz್ದೆÃಶದೊಂದಿಗೆ ತೆಗೆದಿರುವ ಬೃಹತ್ ಗುಂಡಿಯಲ್ಲಿ ಇತ್ತೀಚೆಗೆ ಇಬ್ಬರು ಬಾಲಕರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಕಂಪನಿಯವರು ಯಾರು ಹೇಳಿದರೂ ಕ್ಯಾರೆ ಎನ್ನುತ್ತಿಲ್ಲ. ತಮ್ಮ ಮನಸ್ಸಿಗೆ ಬಂದAತೆ ಮಾಡುತ್ತಿದ್ದಾರೆ. ಪಾಲಿಕೆಯ ವ್ಯಾಪ್ತಿಗಿಂತ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳುವ ಮೂಲಕ ಕೆಲಸ ಮಾಡಲಾಗುತ್ತಿದೆ. ಆದರೆ, ನಗರದಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಇಬ್ಬರು ಅಮಾಯಕ ಬಾಲಕರು ಸಾವನ್ನಪ್ಪಿದರು ಎಂದು ವಿಷಾದಿಸಿದರು.
ಕಂಪನಿಯವರ ವಿರುದ್ಧ ದೂರು ದಾಖಲಿಸಬೇಕು. ಆಗ ಮಾತ್ರ ಅಧಿಕಾರಿಗಳು ಎಚ್ಚರಗೊಳ್ಳಲಿದ್ದಾರೆ. ಈಗಾಗಲೇ ಎಲ್ ಆಂಡ್ ಟಿ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಕಾಮಗಾರಿ ಸಂದರ್ಭದಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳದೇ ಕಾಮಗಾರಿ ಕೈಗೆತ್ತಿಕೊಳ್ಳಬಾರದು ಎಂದು ಖಡಕ್ ಸೂಚನೆ ನೀಡಿದರು.
ಕುಡಿಯುವ ನೀರಿನ ಕೊಳವೆಬಾವಿ ಸಮಸ್ಯೆ ತಲೆದೋರಿದ್ದು, ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು. ನಗರದ ವಿವಿಧ ಸಮಸ್ಯೆಗಳಿಗೆ ಒಂದು ವಾರದಲ್ಲಿ ಪರಿಹಾರ ಕಲ್ಪಿಸಬೇಕು. ಆದರೆ ಪಾಲಿಕೆ ಅಧಿಕಾರಿಗಳ ತಾತ್ಸಾರ ಎದ್ದು ಕಾಣುತ್ತಿದೆ. ಕೇವಲ ಸಭೆ ಮಾಡಿದರೆ ಪರಿಹಾರ ಸಿಗುವುದಿಲ್ಲ. ಜನಸ್ನೇಹಿ ಕೆಲಸ ಮಾಡಬೇಕು ಎಂದು ದರ್ಗಿ ಹೇಳಿದರು.
ಎಲ್ ಆ್ಯಂಡ್ ಟಿ ಕಂಪನಿ ಪ್ರಾರಂಭವಾದಾಗಿನಿAದ ಸಮಸ್ಯೆಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಆದರೆ, ಇವರು ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ ಎಂದು ದೂರಿದಾಗ, ಎ¯್ಲÁ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು ಎಂದು ಸಭೆಯಲ್ಲಿದ್ದ ಕಂಪನಿ ಅಧಿಕಾರಿಗಳು ಭರವಸೆ ನೀಡಿದರು. ಈ ಘಟನೆಗೆ ಸಂಬAಧಿಸಿದAತೆ ಶನಿವಾರದೊಳಗೆ ೧೦ ಲP್ಷÀ ಮೊತ್ತದ ಚೆಕ್ (ತಲಾ ಬಾಲಕನಿಗೆ ) ಸಿದ್ದಗೊಳಿಸಿ, ಜತೆಗೆ ಅವರ ಮನೆಯಲ್ಲಿ ಇಬ್ಬರಿಗೂ ನೌಕರಿ ಕೊಡಿಸಲು ವ್ಯವಸ್ಥೆ ಮಾಡಿಸಿ ಎಂದರು.
ನಗರದ ಬಹುತೇಕ ವಾರ್ಡ್ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಹೀಗಾಗಿ ಬೋರ್‌ವೆಲ್ ಸರಿಪಡಿಸಿ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು. ಪಾಲಿಕೆ ಆಯುಕ್ತ ಭುವನೇಶ ಪಾಟೀಲ್, ಉಪಮಹಾಪೌರ ಶಿವಾನಂದ ಪಿಸ್ತಿ, ವಿರೋಧ ಪP್ಷÀ ನಾಯಕ ಅಜುಮಲï ಗೋಲಾ ಇತರರು ಇದ್ದರು.