ನ್ಯೂಸ್

ಎಲೆಕ್ಟ್ರಿಕ್ ವಾಹನಗಳನ್ನು ಬಳಸುವುದಕ್ಕಾಗಿ ಸವಾರರು ಮುಂದಾಗಬೇಕು - ಡಾ. ಪ್ರಭಾಕರ ಕೋರೆ

ಬೆಳಗಾವಿ: ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚು ಬಳಸುವುದಕ್ಕಾಗಿ ವಾಹನ ಸವಾರರು ಮುಂದಾಗಬೇಕು. ಇದರಿಂದ ಪರಿಸರ ಮಾಲಿನ್ಯ ನಿಯಂತ್ರಣ, ಹಣದ ಜತೆಗೆ ವಿದೇಶಿ ವಿನಿಯಮದ ಉಳಿತಾಯವೂ ಆಗಲಿದೆ ಎಂದು ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.

ನಗರದ ಹೊರವಲಯದಲ್ಲಿ ಗೋಗಟೆ ಸಮೂಹದವರು, ನೂತನವಾಗಿ ಆರಂಭಿಸಿರುವ (ಗೋಗಟೆ ಉರ್ಜಾ)ಇವಿ ಚಾರ್ಜಿಂಗ್ ಸ್ಟೇಶನ್ ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಭಾರತದಲ್ಲಿ ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್(ಬ್ಯಾಟರಿ ಚಾಲಿತ) ಟ್ರಾೃಕ್ಟರ್‌ಗಳು ಬರಲಿವೆ.

ಇದರಿಂದ ರೈತರು ಸ್ವಾಲಂಬಿಯಾಗಲು ಸಾಧ್ಯವಾಗುತ್ತದೆ. ಇದರಿಂದ ಸಹಸ್ರಾರು ರೈತರಿಗೂ ಎಲೆಕ್ಟ್ರಿಕ್ ಟ್ರಾೃಕ್ಟರ್‌ಗಳಿಂದ ಬಹಳಷ್ಟು ಅನುಕೂಲವಾಗಲಿದೆ ಎಂದರು. ಈ ಸಂದರ್ಭದಲ್ಲಿ ಟಾಟಾ ಪವರ್‌ನ ಸಂದೀಪ ಬಂಗೀಯಾ, ಉದ್ಯಮಿ ಅರವಿಂದ ಗೋಗಟೆ, ಹಿರಿಯ ಪತ್ರಕರ್ತ ಹಾಗೂ ಉದ್ಯಮಿ ಕಿರಣ ಠಾಕೂರ
ಸೇರಿದಂತೆ ಅನೇಕ ಗಣ್ಯರು ಇದ್ದರು.