ಕಳುವು ಪ್ರಕರಣದಲ್ಲಿ ವಶಪಡಿಸಿಕೊಂಡ ಎಲೆಕ್ಟ್ರಿಕ್​ ಉಪಕರಣಗಳೊಂದಿಗೆ ಆಂಡ್ರಸನ್​ಪೇಟೆಯ ಪಿಎಸ್​ಐ ಬಿ.ಮಂಜುನಾಥ್​, ಎಎಸ್​ಐಗಳಾದ ರಮೇಶ್​, ಕೆ.ಆರ್​.ಅಣ್ಣಪ್ಪ, ಸಿಬ್ಬಂದಿ ವೆಂಕಟೇಶ್​, ರಾಜೇಂದ್ರ, ರಾಮಕೃಷ್ಣಪ್ಪ, ಮಧುಸೂಧನ್​, ಸುನಿಲ್​ಕುಮಾರ್​, ಲೋಕೇಶ್​, ಗೋಪಿ, ಶಶಿಕುಮಾರ್​. 
ನ್ಯೂಸ್

ಎಲೆಕ್ಟ್ರಿಕ್​ ಉಪಕರಣ ಕಳ್ಳರ ಬಂಧನ

ಕೆಜಿಎಫ್​: ನಗರದ ಆಂಡ್ರಸನ್​ಪೇಟೆ ಪೊಲೀಸ್​ ಠಾಣೆಯಲ್ಲಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿ, ಎಲೆಕ್ಟ್ರಿಕ್​ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆಂಡ್ರಸನ್​ಪೇಟೆ ವಾಸಿಗಳಾದ ವಿಘ್ನೇಶ್​, ವಿಜಯ್​, ನರೇಶ್​ ಮತ್ತು ಶರತ್​ಕುಮಾರ್​ ಬಂಧಿತರು.

ಆಂಡ್ರಸನ್​ಪೇಟೆಯ ನೂರಿ ಐಟಿಐ ಕಾಲೇಜಿನಲ್ಲಿ ಇತ್ತೀಚಿಗೆ ಎಲೆಕ್ಟ್ರಿಕ್​ ಉಪಕರಣಗಳು ಕಳವು ಆಗಿರುವ ಬಗ್ಗೆ ಮನೋಜ್​ ಎಂಬುವವರು ಪ್ರಕರಣ ದಾಖಲಿಸಿದ್ದರು. ದೂರಿನನ್ವಯ ನಾಲ್ವರು ಆರೋಪಿಗಳನ್ನು ಪತ್ತೆ ಹಚ್ಚಿದ ಪೊಲೀಸರು 74,300 ರೂ. ಬೆಲೆ ಬಾಳುವ ಒಂದು ವರ್ನಿಯರ್​ ಹೈಟ್​ಗೇಜ್​, 4 ಪೋರ್​ ಟೇಬಲ್​ ಡ್ರಿಲ್ಲಿಂಗ್​ ಮಿಷನ್​ಗಳು, ಒಂದು ಮೋಟಾರ್​, ಮೂರು ಸೋಲಾರ್​ ಲ್ಯಾಂಪ್​ಗಳು, ಒಂದು ಕಂಪ್ಯೂಟರ್​ ಸಿಪಿಯು, ಹನ್ನೊಂದು ಮೆಟಲ್​ ಪೈಪ್​ಗಳು, ಒಂದು ಡಿವಿಆರ್​ ಮತ್ತು ಇತರೆ ಎಲೆಕ್ಟ್ರಿಕ್​ ಉಪಕರಣಗಳನ್ನು ವಶಕ್ಕೆ ಪಡೆದು, ಆರೋಪಿಗಳನ್ನು ನ್ಯಾಯಾಂಗಕ್ಕೆ ಒಪ್ಪಿಸಿದರು.