ನ್ಯೂಸ್

ಎಲೆಕೋಸು ಬೆಳೆಗಾರರ ಬದುಕು ಆತಂಕ / ಮಳೆ ಹೆಚ್ಚಾಗಿ ಕೋಳೆಯುತ್ತಿರುವ ಎಲೆಕೋಸು / ಬೆಲೆ ಇದ್ದರೂ ಗುಣಮಟ್ಟದ ಕೋಸು ಸಿಗುತ್ತಿಲ್ಲ / ಬೆಂಬಲ ಬೆಲೆಗೆ ರೈತರ ಒತ್ತಾಯ

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಇತ್ತೀಚೆಗೆ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಕೋಸು ಬೆಳೆಗಾರರ ಬದುಕು ಅತಂತ್ರವಾಗಿದೆ. ಕೊಯ್ಲಿಗೆ ಬಂದಿರುವ ಕೋಸು ತೋಟಗಳಲ್ಲಿಯೇ ಕೊಳೆಯುವಂತಾಗಿದೆ. ಮಳೆ ಹೆಚ್ಚಾದ ಕಾರಣ ಕೋಸು ಬೆಳೆಗೆ ಬೆಂಕಿ ರೋಗ ಕಾಣಿಸಿಕೊಂಡು ಎಲೆಗಳು ತೋಟದಲ್ಲಿಯೇ ಒಣಗಿಹೋಗುತ್ತಿವೆ.

ಎಲೆಕೋಸು ಕಟಾವಿಗೆ ಬಂದಿದ್ದರೂ ವ್ಯಾಪಾರಸ್ಥರು ತೋಟಗಳಲ್ಲಿ ಕೋಸನ್ನು ಖರೀದಿಸಲು ಮುಂದಾಗುತ್ತಿಲ್ಲ. ತೇವಾಂಶದಿAದಾಗಿ ಕೋಸು ಗಡ್ಡೆಗಳು ಕೊಳೆಯುತ್ತಿರುವುದು ಒಂದು ಕಡೆಯಾದರೆ ಅದರ ಮೇಲೆ ಇರುವ ಎಲೆಯ ಪದರಗಳು ಒಣಗುತ್ತಿವೆ. ಒಂದು ಎಕೆರೆಗೆ ಗುಣಮಟ್ಟದಿಂದ ಕೂಡಿರುವ ಕೋಸು ಒಂದು ಲೋಡು ಸಿಗದಂತೆ ಆಗಿರುವುದರಿಂದ ತೋಟಗಳಲ್ಲಿಯೇ ಕೊಳೆಯುವಂತೆ ಆಗಿದೆ.

ಮಾರುಕಟ್ಟೆಗೆ ಗುಣಮಟ್ಟದ ಕೋಸು ಬಾರದೆ ಇರುವುದರಿಂದ ಬೆಲೆಯು ಕುಸಿದಿದೆ. ಗುಣಮಟ್ಟದ ಕೋಸು ಒಂದು ಲಾರಿ ಲೋಡು ಒಂದು ಲಕ್ಷಕ್ಕಿಂತಲೂ ಹೆಚ್ಚಿಗೆ ಮಾರಾಟವಾಗುತ್ತಿತ್ತು. ಆದರೆ ಈಗ ೨೦ ಸಾವಿರಕ್ಕೂ ಕೇಳುವವರೇ ಇಲ್ಲದಂತೆ ಆಗಿರುವುದರಿಂದ ತೋಟದಿಂದ ಕೊಯ್ಲು ಮಾಡಿ ಮಾರುಕಟ್ಟೆಗೆ ಸಾಗಿಸುವ ಖರ್ಚು ಬಾರದೆ ಹೋಗಿದೆ.

ತೋಟಗಳ ಮೇಲೆ ಎಲೆಕೋಸನ್ನು ಖರೀದಿ ಮಾಡುವ ವ್ಯಾಪಾರಸ್ಥರು ಗುಣಮಟ್ಟದ ಕೋಸು ಇಲ್ಲದೆ ಇರುವ ಕಾರಣ ತೋಟಗಳ ಕಡೆ ಮುಖ ಮಾಡುತ್ತಿಲ್ಲ. ಲಕ್ಷಾಂತರ ರೂ.ಗಳ ಬಂಡವಾಳ ಹಾಕಿ ಬೆಳೆದ ಬೆಳೆ ತೋಟಗಳಲ್ಲಿಯೇ ಬಿಡುವಂತಾಗಿ ರೈತರ ಬದುಕು ಅತಂತ್ರವಾಗಿದೆ.

ಒಂದು ಎಕೆರೆಯಲ್ಲಿ ಕೋಸು ಬೆಳೆ ಬೆಳೆಯಲು ೨.೫೦ ಲಕ್ಷದಿಂದ ೩ ಲಕ್ಷ ರೂ.ಗಳು ಬಂಡವಾಳ ಬೇಕಾಗುತ್ತೆ. ಹಾಕಿದ ಬಂಡವಾಳವೂ ಬಾರದೆ ಇರುವುದರಿಂದ ರೈತರು ಕಣ್ಣಿರು ಹಾಕುವಂತಾಗಿದೆ.

ಬಾಕ್ಸ್

ಕೆ.ಜಿ. ೧.೫೦ ಪೈಸೆಯಂತೆ ವ್ಯಾಪಾರಸ್ಥರಿಗೆ ತೋಟದಲ್ಲಿಯೇ ನೀಡಲಾಗಿತ್ತು. ಆದರೆ ವ್ಯಾಪಾರಸ್ಥರು ಕಟಾವು ಮಾಡಲು ಬಂದು ಗುಣಮಟ್ಟ ಇಲ್ಲ ಎಂದು ವಾಪಸ್ಸು ಹೋದರು. ಇದೇ ರೀತಿ ಇನ್ನೂ ಅನೇಕ ತೋಟಗಳಲ್ಲಿ ಕಟಾವಿಗೆ ಬಂದಿರುವ ಕೋಸು ಕೊಳೆಯುತ್ತಿದೆ. ನಾನು ಒಂದೂವರೆ ಎಕೆರೆಯಲ್ಲಿ ಫಸಲನ್ನು ತೆಗೆದಿದ್ದೇನೆ. ಇನ್ನೇನು ಮಾರುಕಟ್ಟೆಗೆ ಪ್ರವೇಶ ಮಾಡಬೇಕಾಗಿತ್ತು. ಮಳೆಯಿಂದಾಗಿ ಇಡೀ ತೋಟ ನಾಶವಾಗಿದೆ. ಬೆಳೆ ತೆಗೆಯಲು ೫ ಲಕ್ಷ ರೂ.ಗಳು ಖರ್ಚು ಮಾಡಿದ್ದೇನೆ. ಸಾಲದ ಸೂಲಕ್ಕೆ ಸಿಲುಕುವಂತಾಗಿದೆ ಎಂದು ಕೋಸು ಬೆಳೆಗಾರ ಅಶೋಕ್‌ಗೌಡ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾನೆ.

ಕೋಟ್

ಕೋಸು ನಾರು ಒಂದು ರೂ.ಗಳನ್ನು ಕೊಟ್ಟು ಖರೀದಿ ಮಾಡಿ ನಾಟಿ ಮಾಡಬೇಕು. ನಂತರ ಔಷಧಿ ಗೊಬ್ಬರ ಸೇರಿ ಒಂದು ಎಕೆರೆ ಬೆಳೆ ಮಾಡಲು ೩ ಲಕ್ಷ ತನಕ ಖರ್ಚು ಬರುತ್ತದೆ. ಮಳೆಯಿಂದಾಗಿ ಇಡೀ ಬೆಳೆ ನಾಶವಾಗಿದೆ. ವ್ಯಾಪಾರಸ್ಥರು ಬರುತ್ತಿಲ್ಲ. ಬಂದವರು ಗುಣಮಟ್ಟ ಇಲ್ಲ ಎಂದು ಹೋಗುತ್ತಿದ್ದಾರೆ. ಕಳೆದ ಒಂದು ವಾರದಿಂದ ಸುರಿದ ಮಳೆಯಿಂದ ಇರುವ ಕೋಸು ಕೊಳೆಯುತ್ತಿದೆ. ಮಳೆ ನಿಂತ ಸಮಯದಲ್ಲಿ ಔಷಧಿ ಸಿಂಪಡಣೆ ಮಾಡುತ್ತಿದ್ದೇವೆ. ಆದರೂ ತೇವಾಂಶದಿAದ ರೋಗಗಳು ಹತೋಟಿಗೆ ಬರುತ್ತಿಲ್ಲ ಮತ್ತು ತೋಟಗಳಲ್ಲಿಯೇ ಕೊಳೆಯುವಂತಾಗಿದೆ.

-ಅಶೋಕ್‌ಗೌಡ, ರೈತ

ಕೋಟ್

ಎಲೆಕೋಸು ಬೆಲೆ ಕಳೆದ ೨ ರಿಂದ ೩ ದಿನಗಳಿಂದ ಏರಿಕೆಯಾಗುತ್ತಿದೆ. ಆದರೆ ಗುಣಮಟ್ಟದ ಕೋಸು ಸಿಗದಂತೆ ಆಗಿದೆ. ಮಳೆ ಪ್ರಭಾವದಿಂದ ಕಟಾವಿಗೆ ಬಂದಿರುವ ಫಸಲು ನಾಶವಾಗಿದೆ. ಜಿಲ್ಲೆಯಲ್ಲಿ ಶೇ.೨೦ ರಷ್ಟು ಬೆಳೆಗಾರರು ನಷ್ಟ ಅನುಭವಿಸಿದ್ದಾರೆ. ಮಳೆಯಿಂದ ನಷ್ಟ ಆಗಿರುವ ತೋಟಗಳಲ್ಲಿ ಸರ್ವೇ ನಡೆಸಿ ನಷ್ಟಕ್ಕೆ ಒಳಗಾಗಿರುವ ಬೆಳೆಗಾರರಿಗೆ ಸರ್ಕಾರ ಪರಿಹಾರ ನೀಡಿದರೆ ಸಾಲದ ಸೂಲದಿಂದ ರೈತ ಪಾರಾಗಲು ಸಾಧ್ಯವಾಗುತ್ತದೆ.

-ಸಂಪತ್‌ಕುಮಾರ್, ರೈತ

ಚಿತ್ರ ೨೦ ಕೆ.ಎಲ್.ಆರ್. ೦೧ : ಮಳೆಯಿಂದಾಗಿ ಎಲೆಕೋಸು ತೋಟಗಳಲ್ಲಿಯೇ ಕೊಳೆಯುತ್ತಿರುವುದು ಮತ್ತು ಬೆಂಕಿ ರೋಗದಿಂದ ಎಲೆಗಳು ಒಣಗಿರುವುದು.

ಚಿತ್ರ ೨೦ ಕೆ.ಎಲ್.ಆರ್. ೦೧ಎ : ಆಶೋಕ್‌ಗೌಡ, ರೈತ ರವರ ಭಾವಚಿತ್ರ