ನ್ಯೂಸ್

ಎರಡು ವರ್ಷದೊಳಗೆ ತಲೆ ಎತ್ತಲಿದೆ ಸರ್ಕಾರಿ ಮೆಡಿಕಲ್ ಕಾಲೇಜು

ಚಿತ್ರದುರ್ಗ: ಪ್ರಸ್ತಕ ಶೈಕ್ಷಣಿಕ ವರ್ಷದಿಂದ 150 ಸೀಟು ಸಾಮರ್ಥ್ಯದ ಸರ್ಕಾರಿ ಮೆಡಿಕಲ್ ಕಾಲೇಜು ನಗರದಲ್ಲಿ ಕಾರ‌್ಯಾರಂಭ ಮಾಡಲಿದೆ. ಈಗಾ ಗಲೇ 26ವಿದ್ಯಾರ್ಥಿಗಳು ದಾಖಲಾಗಿದ್ದಾರೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಆರ್.ಪಾಟೀಲ ಹೇಳಿದರು.
ಜಿಪಂದಲ್ಲಿ ಶನಿವಾರ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು,ಜಿಲ್ಲಾಸ್ಪತ್ರೆ ಆವರಣದ 23.19 ಎಕರೆ ಜಾಗದಲ್ಲೇ ಕಾಲೇಜು ನಿ ರ್ಮಾಣವಾಗಲಿದೆ. ಸ್ಥಳದ ಬಗ್ಗೆ ಗೊಂದಲ ಬೇಡ. 2 ವರ್ಷಗಳ ಒಳಗೆ ಕಾಲೇಜು ಕಟ್ಟಡದ ಸಂಕೀರ್ಣದ ನಿರ್ಮಾಣ ಕಾಮಗಾರಿ ಪೂ ರ್ಣಗೊಳ್ಳಲಿದೆ. ಆರೋಗ್ಯ ಇಲಾಖೆ ಯಿಂದ ವೈದ್ಯಕೀಯ ಶಿಕ್ಷಣ ಇಲಾಖೆಗೆ ಶೀಘ್ರ ಜಿಲ್ಲಾಸ್ಪತ್ರೆಯನ್ನು ವರ್ಗಾಯಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಮಾತನಾಡಿ,ಕಾಲೇಜು ಸ್ಥಾಪನೆಗೆ ತೆಗೆದುಕೊಂಡಿರುವ ಕ್ರಮಗಳ ಕುರಿತು ವಿವರಿಸಿದರು. ಜಿ ಆರ್‌ಹಳ್ಳಿಯಲ್ಲಿರುವ ದಾವಣಗೆರೆ ವಿವಿ ಪಿಜಿಕಟ್ಟಡ‘ಜ್ಞಾನ ಗಂಗೋತ್ರಿ’ಯಲ್ಲಿ ತಾತ್ಕಾಲಿಕವಾಗಿ ತರಗತಿ,ಪ್ರಯೋಗಾಲಯಗಳನ್ನು ಪ್ರಾ ರಂಭಿಸಲಾಗುವುದು ಎಂದರು.
ಕಾಲೇಜು ವಿಶೇಷಾಧಿಕಾರಿ ಡಾ.ಯುವರಾಜ್ ಕಟ್ಟಡಗಳು,ಬೋಧಕ,ಬೋಧಕೇತರ ಸಿಬ್ಬಂದಿ ಮಾಹಿತಿ ನೀಡಿದರು. ಉದ್ದೇಶಿತ ಸ್ಥಳದಲ್ಲೇ ಕಾಲೇಜು ನಿರ್ಮಾಣವಾಗಲಿದೆ. ಗೊಂದಲ ಮಾಡಬೇಡಿ ಎಂಬ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರು ವಿಶೇಷಾಧಿಕಾರಿಗೆ ತಾಕೀತು ಮಾಡಿದರು.
ಪಪ್ಪಿ ಅವರ ಮಾತಿಗೆ ಜಿಲ್ಲಾ ಉಸ್ತುವಾರಿ ಸಚಿ ವ ಡಿ.ಸುಧಾಕರ್,ಶಾಸಕರಾದ ಬಿ.ಜಿ. ಗೋವಿಂದಪ್ಪ, ಟಿ.ರಘು ಮೂರ್ತಿ ಹಾಗೂ ಎಂ.ಚಂದ್ರಪ್ಪ ಸಹಮತ ಸೂಚಿಸಿದರು. ಅಗತ್ಯಬಿದ್ದರೆ ಕಟ್ಟಡದ ಅಂತಸ್ತುಗಳನ್ನು ಹೆಚ್ಚಿಸುವಂತೆ ಚಂದ್ರಪ್ಪ ಸಲಹೆ ನೀಡಿದರು.
ಜಿಲ್ಲಾಸ್ಪತ್ರೆಯ ತಾಯಿ ಮತ್ತು ಮಗು ಆಸ್ಪತ್ರೆ ಹೊಸ ಕಟ್ಟಡದ ಕಾಮಗಾರಿ 2 ತಿಂಗಳ ಒಳಗೆ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗ ಳು ತಿಳಿಸಿದರು. 79 ಬೋಧಕ ಹುದ್ದೆಗಳ ಸೃಜಿಸಲಾಗಿದೆ,ಭರ್ತಿಗೆ ಇನ್ನು ಆದೇಶ ಸಿಕ್ಕಿಲ್ಲ. 20 ಡಿ.ಗ್ರೂಫ್ ಹಾಗೂ ಐವರು ಕ್ಲರ್ಕ್‌ಗಳ ನೇ ಮಕಕ್ಕೆ ಕ್ರಮ ವಹಿಸಲಾಗಿದೆ. ಅನಾಟಮಿ,ಫಿಸಿಯಾಲಜಿ ಹಾಗೂ ಬಯೋಕೆಮಿಸ್ಟ್ರಿ ಲ್ಯಾಬ್‌ಗಳು ಹಾಗೂ ಡಿಸ್ಸೆಕ್ಷನ್‌ಹಾಲ್ ಈ ವರ್ಷದ ಅಗತ್ಯವಾಗಿದೆ ಎಂದು ವಿಶೇಷಾಧಿಕಾರಿ ತಿಳಿಸಿದರು.
ಹಾಸ್ಟೆಲ್‌ಗಳಿಗೆ ಸ್ಥಳ ಪರಿಶೀಲಿಸುವಂತೆ ಡಿಸಿ,ಸಿಇಒಗೆ ಸಚಿವರು ಸೂಚಿಸಿದರು. ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಎಂಆರ್‌ಐ ಸ್ಕಾೃನಿಂಗ್, ಡಯಾಲಿಸಿಸ್ ಸೆಂಟರ್‌ಗಳು,ಬ್ಲಡ್‌ಬ್ಯಾಂಕ್ ಇತ್ಯಾದಿ 24 ಹೊಸ ಮತ್ತು ಹಳೆ ಕಟ್ಟಡಗಳ ತೆರವುಗೊಳಿಸಬೇಕಿದೆ ಎಂದು ಡಿಎಚ್‌ಒ ಡಾ. ಆರ್.ರಂಗನಾಥ್ ಹೇಳಿದರು.
ಪರ್ಯಾಯ ಸ್ಥಳ ಪರಿಶೀಲಿಸುವಂತೆ ಡಿಎಚ್‌ಒಗೆ ಸೂಚಿಸಿದ ಸಚಿವರು,ನೇರ ಸಂದರ್ಶನದೊಂದಿಗೆ ವೈದ್ಯರ ಭರ್ತಿ ಹಾಗೂ ವೈದ್ಯ ರು ಮತ್ತು ವೈದ್ಯಕೀಯ ಸಿಬ್ಬಂದಿ ಕೊರತೆ ಮಾಹಿತಿ ಕೊಡುವಂತೆ ತಿಳಿಸಿದರು. ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಕೊರತೆ ಇದೆ ಎಂದು ಪ್ರಭಾರ ಡಿಎಸ್ ಡಾ.ದೇವರಾಜ್ ಹೇಳಿದರು.
ಕಟ್ಟಡಗಳು
ಅಕಾಡೆಮಿಕ್ ಬ್ಲಾಕ್,ಕಮರ್ಷಿಯಲ್‌ಬಿಲ್ಡಿಂಗ್,ವೈದ್ಯಕೀಯ ಅಧೀಕ್ಷಕರ ವಸತಿ,ಡೀನ್ ಕ್ವಾಟ್ರರ್ಸ್,ಹಾಸ್ಟೆಲ್‌ಗಳು,ಬೋಧಕ ಹಾಗೂ ಬೋಧಕತೇರ ಸಿಬ್ಬಂದಿ ವಸತಿ,180 ಹಾಸಿಗೆ ಸಾಮರ್ಥ್ಯದ ಹೊಸ ಆಸ್ಪತ್ರೆ,ಮಾರ್ಚರಿ ಬ್ಲಾಕ್,ಲಾಂಡ್ರಿಬ್ಲಾಕ್ ಇತ್ಯಾದಿ ಕಟ್ಟಡಗಳು ನಿರ್ಮಾ ಣವಾಗಲಿವೆ ಎಂದು ಸಚಿವರು ಹೇಳಿದರು.
ಸೆಪ್ಟೆಂಬರ್ 15ರಿಂದ ತರಗತಿಗಳು ಪ್ರಾರಂಭವಾಗುತ್ತವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ತಿಳಿಸಿದರು. ಸಚಿವದ್ವಯ ರು ಶಾಸಕರು,ಅಧಿಕಾರಿಗಳೊಂದಿಗೆ ಗಂಗೋತ್ರಿಗೆ ಭೇಟಿ ನೀಡಿ ಪರಿಶೀಲಿಸಿದರು. ಜಿಪಂ ಸಿಇಒ ಎಸ್.ಜೆ.ಸೋಮಶೇಖರ್,ಎಡಿಸಿ ಬಿ. ಟಿ.ಕುಮಾರಸ್ವಾಮಿ,ಎಸಿ ಎಂ.ಕಾರ್ತಿಕ್ ಮತ್ತಿತರ ಅಧಿಕಾರಿಗಳಿದ್ದರು.

ಬಾಕ್ಸ್
ಪರ್ಸನಲ್ ಇಂಟ್ಟ್ರೆಸ್ಟ್ ಏನು?
ಕಾಲೇಜು ಎಲ್ಲಿ ನಿರ್ಮಿಸಬೇಕೆಂದು ತೀರ್ಮಾನವಾಗಿದೆ. ಪರ್ಯಾಯ ಜಾಗದ ಪ್ರಸ್ತಾಪ ಮತ್ತೆ ಯಾಕೆಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರು ವಿಶೇಷಾಧಿಕಾರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಇದರಲ್ಲಿ ತಮ್ಮ ಪರ್ಸನಲ್ ಇಂಟ್ರೆಸ್ಟ್ ಏನಿದೆ ಎಂದು ಕಾಲೇಜು ವಿಶೇಷಾಧಿಕಾರಿಯನ್ನು ಪಪ್ಪಿ ಪ್ರಶ್ನಿಸಿದರು.

ಗ್ರಾಮೀಣ ಸೇವೆ ಕಡ್ಡಾಯ
ಎಂಬಿಬಿಎಸ್ ಹಾಗೂ ಪಿಜಿ ವೈದ್ಯರ ಗ್ರಾಮೀಣ ಸೇವೆಯನ್ನು ಕ್ರಮವಾಗಿ 2 ಮತ್ತು 1 ವರ್ಷದ ಅವಧಿಗೆ ಕಡ್ಡಾಯಗೊಳಿಸುವಂತೆ ಶಾಸಕ ಎಂ.ಚಂದ್ರಪ್ಪ ಸಚಿವರನ್ನು ಕೋರಿದರು. ಈಗಾಗಲೇ ಈ ನಿಯಮ ಜಾರಿಯಲ್ಲಿದೆ. ಒಂದು ವರ್ಷ ವೈದ್ಯರಿಗೆ ಕಡ್ಡಾಯ ಸೇವೆ ಇ ದೆ ಎಂದು ಸಚಿವರು ತಿಳಿಸಿದರು.

ರಘುಮೂರ್ತಿ ಗರಂ
ವೈದ್ಯಕೀಯ ಶಿಕ್ಷಣ ಸಚಿವರ ಎದುರು ಈಗ ತಾತ್ಕಾಲಿಕ ವ್ಯವಸ್ಥೆ,ಜಿಲ್ಲಾಸ್ಪತ್ರೆ ಆವರಣದಲ್ಲಿ ಕಟ್ಟಡಗಳ ತೆರವು ಕುರಿತು ಈಗ ಚರ್ಚಿಸುತ್ತಿದ್ದೀರಿ. ಮೊದಲಿಗೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಶಾಸಕರೊಂದಿಗೆ ಯಾಕೆ ಚರ್ಚಿಸಲಿಲ್ಲ ಎಂದು ಅಧಿಕಾರಿಗಳ ವಿರುದ್ಧ ಶಾಸಕ ಟಿ.ರಘುಮೂರ್ತಿ ಹರಿಹಾಯ್ದರು.

(ಸಿಟಿಡಿ 26 ಮೆಡಿಕಲ್ ಕಾಲೇಜು)
ಚಿತ್ರದುರ್ಗದಲ್ಲಿ ಶನಿವಾರ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಆರ್.ಪಾಟೀಲ ಅವರು ಸರ್ಕಾರಿ ಮೆಡಿಕಲ್ ಕಾಲೇಜು ಆ ರಂಭ ಕುರಿತಂತೆ,ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್,ಶಾಸಕರಾದ ಎಂ.ಚಂದ್ರಪ್ಪ,ಕೆ.ಸಿ.ವೀರೇಂದ್ರ ಪಪ್ಪಿ,ಟಿ.ರಘುಮೂರ್ತಿ,ಬಿ.ಜಿ. ಗೋವಿಂದಪ್ಪ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಡಿಸಿ ಜಿಆರ್‌ಜಿದಿವ್ಯಾಪ್ರಭು,ಜಿಪಂ ಸಿಇಒ ಎಸ್.ಜೆ. ಸೋಮಶೇಖರ್ ಇತರರು ಇದ್ದರು.